ಮತ್ತೆ ಕರ್ತವ್ಯಕ್ಕೆ ಹಾಜರ್: ಮಿಗ್ 21ನಲ್ಲಿ ಹಾರಾಡಿದ ಅಭಿನಂದನ್

|

Updated on: Sep 06, 2019 | 2:22 PM

ಇತ್ತೀಚೆಗಷ್ಟೇ ಪಾಕ್​ನ ಯುದ್ಧ ವಿಮಾನವನ್ನ ಹೊಡೆದುರುಳಿಸಿದ್ದ ಅಭಿನಂದನ್ ಮತ್ತೆ ಕರ್ತವ್ಯಕ್ಕೆ ಹಾಜರಾಗಿ ಮಿಗ್-21 ವಿಮಾನ ಹಾರಾಟ ನಡೆಸಿದ್ದಾರೆ. ಈ ಬಾರಿ ಏರ್​ ಚೀಫ್ ಮಾರ್ಷಲ್ ಬಿಎಸ್​ ಧನೋವಾ ಜೊತೆ ವಿಮಾನ ಹಾರಾಟ ನಡೆಸಿ ಗಮನ ಸೆಳೆದಿದ್ದಾರೆ. ಪಂಜಾಬ್​ನ ಪಠಾಣ್​ಕೋಟ್​ನ ವಾಯುನೆಲೆಯಲ್ಲಿ ಅಭಿನಂದನ್​ ವರ್ಧಮಾನ್​ ಹಾಗೂ ಬಿಎಸ್​ ಧನೋವಾ ಅವರನ್ನೊಳಗೊಂಡ ವಿಮಾನ ಹಾರಾಟ ನಡೆಸಿದೆ. ಇದು ತರಬೇತಿ ನಿರತ ಮಿಗ್-21 ವಿಮಾನದ ಹಾರಾಟವೆಂದು ಹೇಳಲಾಗಿದೆ. ಫೆ.26ರಂದು ಉಗ್ರರ ವಿರುದ್ಧ ಗಡಿಯಲ್ಲಿ ಏರ್​ಸ್ಟ್ರೈಕ್ ನಡೆಸಲಾಗಿತ್ತು. ಬಳಿಕ ಫೆ.27ರಂದು ಪಾಕಿಸ್ತಾನದ ಯುದ್ಧ […]

ಮತ್ತೆ ಕರ್ತವ್ಯಕ್ಕೆ ಹಾಜರ್: ಮಿಗ್ 21ನಲ್ಲಿ ಹಾರಾಡಿದ ಅಭಿನಂದನ್
Follow us on

ಇತ್ತೀಚೆಗಷ್ಟೇ ಪಾಕ್​ನ ಯುದ್ಧ ವಿಮಾನವನ್ನ ಹೊಡೆದುರುಳಿಸಿದ್ದ ಅಭಿನಂದನ್ ಮತ್ತೆ ಕರ್ತವ್ಯಕ್ಕೆ ಹಾಜರಾಗಿ ಮಿಗ್-21 ವಿಮಾನ ಹಾರಾಟ ನಡೆಸಿದ್ದಾರೆ. ಈ ಬಾರಿ ಏರ್​ ಚೀಫ್ ಮಾರ್ಷಲ್ ಬಿಎಸ್​ ಧನೋವಾ ಜೊತೆ ವಿಮಾನ ಹಾರಾಟ ನಡೆಸಿ ಗಮನ ಸೆಳೆದಿದ್ದಾರೆ. ಪಂಜಾಬ್​ನ ಪಠಾಣ್​ಕೋಟ್​ನ ವಾಯುನೆಲೆಯಲ್ಲಿ ಅಭಿನಂದನ್​ ವರ್ಧಮಾನ್​ ಹಾಗೂ ಬಿಎಸ್​ ಧನೋವಾ ಅವರನ್ನೊಳಗೊಂಡ ವಿಮಾನ ಹಾರಾಟ ನಡೆಸಿದೆ. ಇದು ತರಬೇತಿ ನಿರತ ಮಿಗ್-21 ವಿಮಾನದ ಹಾರಾಟವೆಂದು ಹೇಳಲಾಗಿದೆ.

ಫೆ.26ರಂದು ಉಗ್ರರ ವಿರುದ್ಧ ಗಡಿಯಲ್ಲಿ ಏರ್​ಸ್ಟ್ರೈಕ್ ನಡೆಸಲಾಗಿತ್ತು. ಬಳಿಕ ಫೆ.27ರಂದು ಪಾಕಿಸ್ತಾನದ ಯುದ್ಧ ವಿಮಾನ ಎಫ್​-16 ವಿರುದ್ಧ ಮುಖಾಮುಖಿ ಕಾದಾಟವನ್ನು ನಡೆಸಿ ಪಾಕ್​ ವಿಮಾನವನ್ನು ಹೊಡೆದುರುಳಿಸಿ ಪಾಕ್​ ಸೇನಾಪಡೆಗಳಿಗೆ ಸಿಕ್ಕಿಬಿದ್ದರು. ನಂತರ ಭಾರತಕ್ಕೆ ವಿಂಗ್ ಕಮಾಂಡರ್​ ಅಭಿನಂದನ್ ಸುರುಕ್ಷಿತವಾಗಿ ಭಾರತಕ್ಕೆ ಮರಳಿದ್ದರು. ಶತ್ರುಗಳ ನೆಲದಲ್ಲಿ ಅಭಿನಂದನ್ ಪ್ರದರ್ಶಿಸಿದ್ದ ಶೌರ್ಯಕ್ಕಾಗಿ, ಈ ವರ್ಷದ ಸ್ವಾತಂತ್ರ್ಯ ದಿನದಂದು ಅವರಿಗೆ ವೀರ ಚಕ್ರ ಪುರಸ್ಕಾರ ಕೊಟ್ಟು ಸನ್ಮಾನಿಸಲಾಗಿದೆ.

Published On - 2:26 pm, Tue, 3 September 19