ಹುಬ್ಬಳ್ಳಿ: ಪರಪುರುಷನ ಜೊತೆ ಮಹಿಳೆಗೆ ಸಂಬಂಧ ಕಲ್ಪಿಸಿದ ಆರೋಪ ಮಾಡಿದ ಹಿನ್ನೆಲೆಯಲ್ಲಿ PSI ಸೀತಾರಾಮ್‌ಗೆ ಮಹಿಳೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಧಾರವಾಡ ಜಿಲ್ಲೆಯಲ್ಲಿ ವೀಕೆಂಡ್ ಲಾಕ್ಡೌನ್ ಇತ್ತು. ಈ ವೇಳೆ ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿ ರಸ್ತೆ ಪಕ್ಕದಲ್ಲಿ ಪುರುಷನೊಂದಿಗೆ ನಿಂತಿದ್ದ ಮಹಿಳೆಗೆ ಪಿಎಸ್ಐ ಸೀತಾರಾಮ್ ಅನುಮಾನಾಸ್ಪದವಾಗಿ ಮಾತಾಡಿದ್ದಾರೆ. ಈ ಮಾತನ್ನು ಕೇಳಿ ಕೆಂಡಾಮಂಡಲಳಾದ ಮಹಿಳೆ ಪಿಎಸ್ಐ ಸೀತಾರಾಮ್ಗೆ ಚಳಿ ಬಿಡಿಸಿದ್ದಾಳೆ.
ಪುರುಷನೊಂದಿಗೆ ನಿಂತಿದ್ದ ಸ್ತ್ರೀಗೆ ಸಂಬಂಧ ಕಲ್ಪಿಸಿ ಪ್ರಶ್ನೆ ಮಾಡಿದ್ದಕ್ಕೆ ಹುಬ್ಬಳ್ಳಿಯ ಉಪನಗರ ಠಾಣೆಯ ಪಿಎಸ್ಐಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಏರಿಯಾದ ಜನ ಗುಂಪುಗೂಡಿದ್ದಾರೆ. ಮಹಿಳೆ ಆವಾಜ್ ಕೇಳಿ ಜನ ಜಮಾಯಿಸುತ್ತಿದಂತೆ ಇನ್ನು ಇಲ್ಲೇ ಇದ್ದರೆ ಇರುವ ಮಾನವೂ ಹರಾಜಾಗಬಹುದು ಎಂದು ಪಿಎಸ್ಐ ಸ್ಥಳದಿಂದ ತೆರಳಿದ್ದಾರೆ. ಹುಬ್ಬಳ್ಳಿಯ ದೇಶಪಾಂಡೆ ನಗರದ ರೋಟರಿ ಶಾಲೆಯ ಬಳಿ ನಿಂತಿದ್ದ ಮಹಿಳೆಯ ಕೋಪ ಕಂಡು ಪಿಎಸೈ ಬೆಚ್ಚಿಬಿದಿದ್ದಂತೂ ಸುಳ್ಳಲ್ಲ.
ಇದನ್ನೂ ಓದಿ: ನಾಳೆ ಕೊವಿಡ್ ಲಸಿಕೆ ಮೇಳಕ್ಕೆ ಚಾಲನೆ; ಸಿಎಂ ಯಡಿಯೂರಪ್ಪ ಜತೆ ಜೆಪಿ ನಡ್ಡಾ ವಿಡಿಯೋ ಕಾನ್ಫರೆನ್ಸ್