Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾದಗಿರಿ; ಸಾಲ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ಪಡೆದು ಮೋಸ; ದೂರು ದಾಖಲು

ಆತ ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡಿಸುವುದಾಗಿ ನಂಬಿಸುತ್ತಾನೆ. ಸಾಲ ಕೇಳಲು ಬಂದವರಲ್ಲಿ ಸಾಲ ಕೊಡುವ ಮೊದಲೆ ಬಡ್ಡಿ ಪಡೆಯುತ್ತಾನೆ. ಬಳಿಕ ಸಾಲ ಕೊಡದೆ ಸಿಕ್ಕಾಪಟ್ಟೆ ಸತಾಯಿಸಿ, ಹಾಗೆನಾದ್ರು ಸಾಲಕ್ಕಿಂತ ಮೊದಲೇ ಕೊಟ್ಟ ಬಡ್ಡಿ ಹಣವಾದ್ರು ಕೊಡಿ ಎಂದು ಕೇಳಿದ್ರೆ ಬೆದರಿಕೆ ಹಾಕ್ತಾನಂತೆ. ಇದೀಗ ಈ ರೀತಿ ಸಾಲ ಪಡೆಯಲು ಹಣ ಕೊಟ್ಟು ಮೊಸ ಹೋದವರು ಪೊಲೀಸರ ಮೊರೆ ಹೋಗಿದ್ದಾರೆ.

ಯಾದಗಿರಿ; ಸಾಲ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ಪಡೆದು ಮೋಸ; ದೂರು ದಾಖಲು
ಯಾದಗಿರಿ
Follow us
ಕಿರಣ್ ಹನುಮಂತ್​ ಮಾದಾರ್
|

Updated on: Jun 11, 2023 | 3:22 PM

ಯಾದಗಿರಿ: ಸಾಲ ಕೊಡಿಸುವುದಾಗಿ ಹೇಳಿ ಲಕ್ಷ ಲಕ್ಷ ಹಣ ಪಡೆದು, ಹಣ ಕೊಟ್ಟವರಿಗೆ ಬೆದರಿಕೆ ಹಾಕ್ತಾರಂತೆ. ಇದೀಗ ಸಾಲಕ್ಕಾಗಿ ಹಣ ಕಳೆದುಕೊಂಡವರು ಪೊಲೀಸರಿಗೆ ದೂರು ನೀಡಿದ್ದು, ಕೊಟ್ಟು ಕೆಟ್ಟ ಹಣವನ್ನ ವಾಪಸ್ ಕೊಡಿಸಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಈ ದೃಶ್ಯಗಳು ಕಂಡು ಬಂದಿದ್ದು ಯಾದಗಿರಿ(Yadagiri) ನಗರದಲ್ಲಿ. ಹೌದು ನಗರದಲ್ಲಿ ಸಾಲ ಕೊಡಿಸುವುದಾಗಿ ಹೇಳಿ ಮಕ್ಮಲ್ ಟೋಪಿ ಹಾಕುವ ಗ್ಯಾಂಗ್ ಕೆಲಸ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಅದರಲ್ಲೂ ಯಾವುದೇ ದಾಖಲಾತಿಗಳು ಇಲ್ಲದೆ ಇದ್ರೂ ಸಹ ಸಾಲ ಕೊಡಿಸುತ್ತೆವೆ ಎಂದು ಹೇಳುತ್ತಾರಂತೆ. ಹೀಗಾಗಿ ಹಣದ ಅವಶ್ಯಕತೆ ಇದ್ದವರು ಈ ಗ್ಯಾಂಗ್​ನ್ನ ಸಂಪರ್ಕ ಮಾಡುತ್ತೆ, ಬಳಿಕ ಇಲ್ಲಿ ಆಗೋದೆ ಬೇರೆ.

ಯಾದಗಿರಿಯ ರಾಜೀವ್ ಗಾಂಧಿ ನಗರದ ನಿವಾಸಿ ಸಂತೋಷ್ ರಾಠೋಡ್​ ಎಂಬುವವನು ಸಾಕಷ್ಟು ಜನರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಕೊಡಿಸುವುದಾಗಿ ಹೇಳಿ ಮೋಸ ಮಾಡಿದ್ದಾನೆಂದು ಆರೋಪಿಸಲಾಗುತ್ತಿದೆ. ಹೌದು ಕಡಿಮೆ ದರದಲ್ಲಿ ಸಾಲ ಕೊಡಿಸುತ್ತಾನೆ ಅಂತ ವಿಷಯ ಕೇಳಿ ರಾಯಚೂರು ಜಿಲ್ಲೆಯ ಮಾನ್ವಿ ಮೂಲದ ರಂಗರಾವ್ ಸಾಲ ಕೇಳ ಬಂದಿದ್ರಂತೆ. ನೇರವಾಗಿ ಸಂತೋಷ್ ಮನೆಗೆ ಬಂದು 10 ಲಕ್ಷ ಸಾಲ ಕೇಳಿದ್ದಾರೆ. ಆದ್ರೆ, ಸಾಲ ಕೊಡಿಸುವ ಮೊದಲೇ ಸಂತೋಷ್ ರಂಗರಾವ್ ಬಳಿ ಒಂದು ವರ್ಷದ ಬಡ್ಡಿ ಅಂತ 80 ಸಾವಿರ ಹಾಗೂ ದಾಖಲಾತಿ ಚಾರ್ಜ್ 16 ಸಾವಿರ ಮುಂಗಡವಾಗಿ ಪಡೆದಿದ್ದಾನಂತೆ.

ಇದನ್ನೂ ಓದಿ:Chit cheat: ನಮ್ಮ ಜನ ಲಕ್ಷಗಳಲ್ಲಿ ಮೋಸ ಹೋದರೂ ಮತ್ತೆ ಮತ್ತೆ ಉಂಡೆನಾಮ ತಿಕ್ಕಿಸಿಕೊಳ್ತಾರೆ! ಹಣದ ಬಗ್ಗೆ ಈ ಕಕ್ಕುಲತೆ, ನಿರ್ಲಕ್ಷತೆ ಯಾಕೋ!?

ಇನ್ನು ಕಲಬುರ್ಗಿಯಲ್ಲಿ ನಮ್ಮ ಬಾಸ್ ಇದ್ದಾರೆ ಅವರ ಬಳಿ ಕರೆದುಕೊಂಡು ಹೋಗಿ ಕೊಡಿಸುವುದಾಗಿ ಹೇಳಿ ಕರೆದುಕೊಂಡು ಹೋಗಿದ್ದಾರೆ. ಆದ್ರೆ, ಯಾರಿಗೋ ಒಬ್ಬರಿಗೆ ಭೇಟಿ ಮಾಡಿಸಿ ವಾಪಸ್ ಊರಿಗೆ ಕಳುಹಿಸಿದ್ದಾರೆ. ಬಳಿಕ ಒಬ್ಬರಿಗೆ ಸಾಲ ಕೊಡಲ್ಲ. ಇನ್ನಿಬ್ಬರಿಗೆ ಕರೆದುಕೊಂಡು ಬಂದ್ರೆ, ಸಾಲ ಕೊಡುತ್ತೆವೆ ಎಂದು ಹೇಳಿದ್ದಾರಂತೆ. ಇದೆ ಕಾರಣಕ್ಕೆ ರಂಗರಾವ್ ತಮ್ಮ ಇಬ್ಬರು ಸ್ನೇಹಿತರಿಗೆ ಕರೆದುಕೊಂಡು ಬಂದಿದ್ದಾರೆ. ಇಬ್ಬರಿಗೂ ಸಹ ಹಣದ ಅವಶ್ಯಕತೆಯಿದೆ. ಒಬ್ಬರಿಗೆ 10 ಇನ್ನೊಬ್ಬರಿಗೆ 20 ಲಕ್ಷ ಹಣ ಬೇಕಾಗಿದೆ ಅಂತ ಬಂದಿದ್ದಾರೆ. ಇಬ್ಬರಿಂದಲೂ ಸಹ ಸಂತೋಷ್ ರಂಗರಾವ್ ತರಹ ಮೊದಲೇ ಬಡ್ಡಿ ಹಣ ಪಡೆದಿದ್ದಾನೆ. ಈ ಮೂಲಕ ರಂಗರಾವ್ ಬಳಿ 1.83 ಹಣ ಪಡೆದ್ರೆ, ರಂಗರಾವ್ ಸ್ನೇಹಿತರಿಂದ ಒಬ್ಬರಿಂದ 2.90 ಲಕ್ಷ, ಇನ್ನೊಬ್ಬರಿಂದ 1.84 ಲಕ್ಷ ಹಣ ಪಡೆದಿದ್ದಾನಂತೆ.

ರಂಗರಾವ್ ಹಾಗೂ ಸ್ನೇಹಿತರು ಹೇಳಿದಷ್ಟು ಹಣವನ್ನ ಹಿಂದೆ ಮುಂದೆ ನೋಡದೆ ಕೊಟ್ಟಿದ್ದಾರೆ. ಇತ್ತ ಸಂತೋಷ್ ಮೂವರಿಗೆ ಮಕ್ಮಲ್ ಟೋಪಿ ಹಾಕಿದ್ದಾನೆ. ಈ ಮೂವರಿಗೆ ಯಾರಿಂದಲೂ ಸಾಲ ಸಹ ಕೊಡಿಸಿಲ್ಲ. ಬದಲಿಗೆ ಆ ಚಾರ್ಚ್, ಈ ಚಾರ್ಚ್ ಹಾಗೂ ಮುಂಗಡವಾಗಿ ಬಡ್ಡಿ ಅಂತ ಪಡೆದಿದ್ದ ಹಣ ಕೂಡ ಕೊಟ್ಟಿಲ್ಲ. ಫೋನ್ ಮಾಡಿದ್ರೆ, ನಾಳೆ ಕೊಡಿಸುತ್ತೆನೆ ನಾಡಿದ್ದೂ ಕೊಡಿಸುತ್ತೆನೆಂದು ಸುಳ್ಳು ಹೇಳುತ್ತಿದ್ದಾನಂತೆ. ಇನ್ನು ಈ ಸಂತೋಷ್ ಜೊತೆಗೆ ರಹೀಮ್ ಸಾಬ್, ಪಾಂಡು ರಾಠೋಡ್ ಹಾಗೂ ಮಹೆಬೂಬ್ ಸಹ ಇದ್ದಾರೆ ಎಂದು ಈ ರಂಗರಾವ್ ಹಾಗೂ ಮೋಸ ಹೋದ ಇನ್ನಿಬ್ಬರು ಆರೋಪಿಸುತ್ತಿದ್ದಾರೆ.

ಇದನ್ನೂ ಓದಿ:Dating Scam ಡೇಟಿಂಗ್ ಆಸೆಗೆ ಬಿದ್ದು ಯುವಕ ಹಾಕಿಸ್ಕೊಂಡ ಮಕ್ಮಲ್ ಟೋಪಿ

ಇನ್ನು ಇವರು ಮೂವರಲ್ಲದೆ ಸಾಕಷ್ಟು ಜನ ಈ ಗ್ಯಾಂಗ್ ಕೈಯಲ್ಲಿ ಸಿಕ್ಕು ಹಣ ಕಳೆದುಕೊಂಡಿದ್ದಾರಂತೆ. ಸ್ವತಃ ರಂಗರಾವ್ ಅವರ ಮಾನ್ವಿ ಊರಿನವರೆ ಸಾಕಷ್ಟು ಮಂದಿ ಸಂತೋಷ್​ನಿಂದ ಮೋಸ ಹೋಗಿದ್ದಾರೆ ಅಂತ ಆರೋಪಿಸಲಾಗುತ್ತಿದೆ. ಇದೀಗ ಮೋಸ ಹೋದವರು ಯಾದಗಿರಿ ಎಸ್​.ಪಿ ಗೆ ದೂರು ನೀಡಿದ್ದಾರೆ. ಸೂಕ್ತವಾಗಿ ತನಿಖೆ ನಡೆಸಿ ಕೇಸ್ ದಾಖಲಿಸಲಾಗುತ್ತೆ ಎಂದು ಯಾದಗಿರಿ ಎಸ್ ಪಿ ಭರವಸೆ ನೀಡಿದ್ದಾರೆ. ಒಟ್ಟಿನಲ್ಲಿ ಸಂತೋಷ್ ಮತ್ತು ಈತನ ಗ್ಯಾಂಗ್ ಸಾಕಷ್ಟು ಜನರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡಿಸುವುದಾಗಿ ಹೇಳಿ ಮೋಸ ಮಾಡಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಪೊಲೀಸರು ಮೋಸ ಹೋದವರ ದೂರನ್ನ ಆಧರಿಸಿ ಕೇಸ್ ದಾಖಲಿಸಿ ನೊಂದವರಿಗೆ ನ್ಯಾಯ ಕೊಡಿಸಿ ಮೋಸಗಾರರನ್ನ ಮಟ್ಟ ಹಾಕಬೇಕಾಗಿದೆ.

ವರದಿ: ಅಮೀನ್ ಹೊಸುರ್ ಟಿವಿ9 ಯಾದಗಿರಿ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ