
ಯಾದಗಿರಿ, ಜೂನ್ 17: ಶತಮಾನಗಳ ಹಿಂದೆ ಹೈದರಾಬಾದ್ ನಿಜಾಮರ ಆಳ್ವಿಕೆ ಸಮಯದಲ್ಲಿ ಯಾದಗಿರಿಯ (Ydagiri) ಹೊರ ಭಾಗದಲ್ಲಿ ನಿರ್ಮಾಣವಾಗಿರುವ ಅತ್ಯಂತ ಪ್ರಮುಖ ಸೇತುವೆ (Bridge) ಈಗ ಅಪಾಯದ ಅಂಚಿನಲ್ಲಿದೆ. ವಿಜಯಪುರ-ಹೈದರಾಬಾದ್ ಮಧ್ಯೆ ಸಂಪರ್ಕ ಕಲ್ಪಿಸುವುದಕ್ಕೆ ಶತಮಾನಗಳ ಹಿಂದೆ ಹೈದರಾಬಾದಿನ ನಿಜಾಮರು ಭೀಮಾ ನದಿಗೆ (Bhima River) ಅಡ್ಡಲಾಗಿದೆ ಈ ಸೇತುವೆಯನ್ನು ನಿರ್ಮಿಸಿದ್ದಾರೆ. ಇತಿಹಾಸ ಉಳ್ಳ ಸೇತುವೆ ಈಗ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಒಳಗಾಗಿ ಅವನತಿಯ ಹಂತಕ್ಕೆ ಬಂದಿದೆ.
ಈ ಸೇತುವೆ ವಿಜಯಪುರದಿಂದ ಹೈದರಾಬಾದ್ಗೆ ಸಂಪರ್ಕ ಕಲ್ಪಿಸುವುದರಿಂದ ಸಾವಿರಾರು ವಾಹನಗಳು ಸಂಚರಿಸುತ್ತವೆ. ಆದರೆ, ಈಗ ವಾಹನ ಸವಾರರು ಸೇತುವೆ ಮೇಲೆ ಸಂಚಾರ ಮಾಡಲು ಹಿಂದೇಟು ಹಾಕುವಂತಾಗಿದೆ. ಏಕೆಂದರೆ, ಈ ಸೇತುವೆಗೆ ಸಿಮೆಂಟ್ ಕಂಬಗಳಿಲ್ಲ. ಸೇತುವೆಯನ್ನು ಸಂಪೂರ್ಣ ಕಲ್ಲಿನಿಂದ ನಿರ್ಮಾಣ ಮಾಡಲಾಗಿದೆ. ಇದರಿಂದ ಸೇತುವೆಯ ಗೊಡೆಗಳ ಮೇಲೆ ಸಣ್ಣ ಸಣ್ಣ ಆಲದ ಗಿಡಗಳು ಬೆಳೆದಿವೆ. ಆಲದ ಗಿಡಗಳು ದೊಡ್ಡದಾಗಿ ಬೆಳೆಯುತ್ತಿದ್ದು, ಕಾರಣಕ್ಕೆ ಸೇತುವೆಯ ಗೋಡೆಯಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿದೆ. ಗೋಡೆಯ ಕಲ್ಲುಗಳು ಸಡಿಲಗೊಂಡಿದ್ದು ಸೇತುವೆ ಕುಸಿದು ಬೀಳುವ ಆತಂಕ ಎದುರಾಗಿದೆ.
ಈ ಸೇತುವೆಯ ಎರಡು ಬದಿಯಲ್ಲಿ ಗಿಡಗಳ ಬೆಳೆದಿವೆ. ಸಿಮೆಂಟ್ ರಹಿತ ಸೇತುವೆಯಾಗಿದ್ದರಿಂದ ಕಲ್ಲುಗಳು ಸಡಿಲವಾಗುತ್ತಿವೆ. ಕೆಲ ಕಡೆ ಗೊಡೆಯ ಕಲ್ಲುಗಳು ಸರಿದಿದ್ದರಿಂದ ಗೊಡೆಗಳಲ್ಲಿ ಬಿರುಕು ಬಿಟ್ಟಿದೆ.
ಯಾದಗಿರಿ ಜಿಲ್ಲಾ ಕೇಂದ್ರದಿಂದ ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಇದೆ ಸೇತುವೆ ಸಂಪರ್ಕ ಕಲ್ಪಿಸುತ್ತದೆ. ನಿತ್ಯ ಸಾವಿರಾರು ಬೃಹತ್ ಗಾತ್ರದ ವಾಹನಗಳು ಇದೆ ಸೇತುವೆಯಲ್ಲಿ ಸಂಚರಿಸುತ್ತವೆ. ಜಿಲ್ಲೆಯ ಎಲ್ಲಾ ಉನ್ನತ ಮಟ್ಟದ ಅಧಿಕಾರಿಗಳು ಹಾಗೂ ಶಾಸಕರು ಇದೆ ಸೇತುವೆ ಮೇಲೆ ಸಂಚಾರ ಮಾಡುತ್ತಾರೆ. ಆದರೆ, ಇವರ ಕಣ್ಣಿಗೆ ಸೇತುವೆ ಬಿರುಕು ಬಿಟ್ಟಿರುವುದು ಕಾಣಿಸಿಲ್ವಾ ಎಂಬುವುದು ವಾಹನ ಸವಾರರು ಪ್ರಶ್ನೆಯಾಗಿದೆ.
ಮುಖ್ಯಮಂತ್ರಿಗಳು, ಸಚಿವರು ಬರುತ್ತಿದ್ದಾರೆ ಅಂತಾ ಗೊತ್ತಾದರೆ ಸಾಕು ಮೇಲೆಂದ ಗಿಡಗಳನ್ನು ಸಣ್ಣದಾಗಿ ಕಟ್ ಮಾಡಲಾಗುತ್ತೆ. ಆದರೆ, ಸಂಪೂರ್ಣವಾಗಿ ಬುಡ ಸಮೇತ ಗಿಡಗಳನ್ನು ಕಿತ್ತೆಸೆಯುತ್ತಿಲ್ಲ. ಸಣ್ಣದಾಗಿ ಮೇಲಿಂದ ಗಿಡಗಳನ್ನ ಕಟ್ ಮಾಡಿದ್ದರಿಂದ ಪ್ರಮುಖರು ಸಂಚರಿಸುವಾಗ ಗೊಡೆಗಳ ಮೇಲೆ ಗಿಡಗಳು ಇಲ್ಲ ಎನ್ನುವ ರೀತಿಯಲ್ಲಿ ಕಂಡು ಬರುತ್ತದೆ. ಆದರೆ, ಪ್ರತಿ ಬಾರಿ ಗಿಡಗಳನ್ನು ಕಟ್ ಮಾಡುತ್ತಿದ್ದ ಕಾರಣಕ್ಕೆ ಬೇರುಗಳು ಆಳಕ್ಕೆ ಇಳಿದಿವೆ. ಹೀಗಾಗಿ, ಆಳಕ್ಕೆ ಇಳಿದಿರುವ ಮರಗಳ ಬೇರುಗಳಿಂದ ಸೇತುವೆ ಬಿರುಕು ಬಿಡುತ್ತಿದೆ. ಕೆಲ ಕಡೆ ಸಣ್ಣದಾಗಿ ಬಿರುಕು ಕೂಡ ಬಿಟ್ಟಿದೆ. ಇದರಿಂದ ಶತಮಾನದಷ್ಟು ಹಳೆಯದಾದ ಸೇತುವೆ ಬಿಳುವ ಆತಂಕ ಸ್ಥಳೀಯರಲ್ಲಿ ಕಾಡುತ್ತಿದೆ.
ಪ್ರತಿ ವರ್ಷ ಸೇತುವೆ ದುರಸ್ಥಿಗಾಗಿ ಸಾಕಷ್ಟು ಅನುದಾನ ಹರಿದು ಬರುತ್ತದೆ. ಆದರೆ, ಅಧಿಕಾರಿಗಳು ಅನುದಾನ ಎಲ್ಲಿ ಖರ್ಚು ಮಾಡುತ್ತಾರೆ ದೇವರಿಗೆ ಗೊತ್ತು. ಐತಿಹಾಸಿಕ ಸೇತುವೆಯನ್ನು ಅಧಿಕಾರಿಗಳು, ಜನಪ್ರತಿನಿಧಿಗಳು ಉಳಿಸಿಕೊಳ್ಳುವ ಕೆಲಸ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: 100 ಕೋಟಿಯ ಒಡೆಯ ಈಗ ಜೈನ ಮುನಿ! ಆಸ್ತಿ, ಐಷಾರಾಮಿ ಬಂಗಲೆ ಬಿಟ್ಟ ಯಾದಗಿರಿ ಉದ್ಯಮಿ
ಒಟ್ಟಿನಲ್ಲಿ ಶತಮಾನದಷ್ಟು ಹಳೆಯದಾದ ಸೇತುವೆ ಅವನತಿ ಕಾಣುವ ಮೊದಲೆ ಅಧಿಕಾರಿಗಳು ಉಳಿಸಿಕೊಳ್ಳಬೇಕಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ವಾಹನ ಸವಾರರ ಹಿತವನ್ನು ಕಾಪಡಬೇಕಾದರೆ ಸೇತುವೆಯ ಗೋಡೆಗಳ ಮೇಲೆ ಬೆಳೆದು ನಿಂತಿರುವ ಆಲದ ಗಿಡಗಳನ್ನು ಬುಡ ಸಮೇತ ಕಿತ್ತು ಹಾಕಿ ಸೇತುವೆ ದುರಸ್ಥಿಗೆ ಕ್ರಮಕೈಗೊಳ್ಳಬೇಕಾಗಿದೆ.