AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

100 ಕೋಟಿಯ ಒಡೆಯ ಈಗ ಜೈನ ಮುನಿ! ಆಸ್ತಿ, ಐಷಾರಾಮಿ ಬಂಗಲೆ ಬಿಟ್ಟ ಯಾದಗಿರಿ ಉದ್ಯಮಿ

ಯಾದಗಿರಿ ತಾಲ್ಲೂಕಿನ ಸೈದಾಪುರದ ದಿಲೀಪ್ ಕುಮಾರ್ ದೋಖಾ ಎಂಬ 55 ವರ್ಷದ ಕೋಟ್ಯಾಧಿಪತಿ, ಅಮೆರಿಕದಲ್ಲಿನ ಯಶಸ್ವಿ ವ್ಯವಹಾರ ಮತ್ತು ಕೋಟಿ ಕೋಟಿ ಆಸ್ತಿಯನ್ನು ತ್ಯಜಿಸಿ ಜೈನ ಮುನಿಯಾಗಿ ದೀಕ್ಷೆ ಸ್ವೀಕರಿಸಿದ್ದಾರೆ. ಪತ್ನಿ ಮತ್ತು ಮಕ್ಕಳನ್ನು ಬಿಟ್ಟು ಈ ಕಠಿಣ ನಿರ್ಧಾರ ಕೈಗೊಂಡಿದ್ದಾರೆ.

100 ಕೋಟಿಯ ಒಡೆಯ ಈಗ ಜೈನ ಮುನಿ! ಆಸ್ತಿ, ಐಷಾರಾಮಿ ಬಂಗಲೆ ಬಿಟ್ಟ ಯಾದಗಿರಿ ಉದ್ಯಮಿ
ದಿಲೀಪ್ ಕುಮಾರ್ ದೋಖಾ
ಅಮೀನ್​ ಸಾಬ್​
| Updated By: ಗಂಗಾಧರ​ ಬ. ಸಾಬೋಜಿ|

Updated on:May 22, 2025 | 12:13 PM

Share

ಯಾದಗಿರಿ, ಮೇ 22: ಇತ್ತೀಚೆಗೆ ನಗರದ ಜೈನ್ ಬಡಾವಣೆಯ ನಿವಾಸಿ ನಿಖಿತಾ ಎಂಬ ಯುವತಿ ಕೇವಲ ತನ್ನ 26ನೇ ವಯಸ್ಸಿಗೆ ಜೈನ ಮುನಿ (monasticism) ಆಗಿದ್ದರು. ಕೋಟ್ಯಾಧೀಶ್ವರರ ಮನೆಯಲ್ಲಿ ಬಾಯಿಯಲ್ಲಿ ಬಂಗಾರದ ಚಮಟ ಇಟ್ಟುಕೊಂಡು ಹುಟ್ಟಿ, ಬೆಳೆದಿದ್ದ ಯುವತಿ ಐಷಾರಾಮಿ ಜೀವನವನ್ನು ತ್ಯಜಿಸಿದ್ದರು. ಇದೀಗ ಇಂತಹದ್ದೆ ಮತ್ತೊಂದು ಘಟನೆ ನಡೆದಿದೆ. 100 ಕೋಟಿ ರೂ ಆಸ್ತಿ ಒಡೆಯ, ಮೂವರು ಹೆಣ್ಣು ಮಕ್ಕಳು ಮತ್ತು ಪತ್ನಿಯನ್ನು ಬಿಟ್ಟು ಇದೀಗ ಜೈನ ಮುನಿ (Jain monk) ಆಗಲು ಹೊರಟಿದ್ದಾರೆ.

ಯಾದಗಿರಿ ತಾಲೂಕಿನ ಸೈದಾಪುರ ಪಟ್ಟಣದ ನಿವಾಸಿ ದಿಲೀಪ್ ಕುಮಾರ್ ದೋಖಾ ಎಂಬುವವರು ಜೈನ್ ದೀಕ್ಷೆ ಪಡೆದಿದ್ದಾರೆ. ಆ ಮೂಲಕ ಪತ್ನಿ ಮಕ್ಕಳನ್ನ ಬಿಟ್ಟು ಜೈನ ಮುನಿಯಾಗಲು ಹೊರಟಿದ್ದಾರೆ. ನೂರು ಕೋಟಿ ಆಸ್ತಿ ಐಷಾರಾಮಿ ಬಂಗಲೆ, ಕಾರು, ವ್ಯಾಮೋಹದ ಜೀವನ ತ್ಯಜಿಸಿ ಸನ್ಮಾರ್ಗದ ಕಡೆ ಪ್ರಯಾಣ ಬೆಳೆಸಿದ್ದಾರೆ.

ಇದನ್ನೂ ಓದಿ: ಕೂಲಿಗೆ ಬೈ ಬ್ಯುಸಿನೆಸ್​​ಗೆ ಜೈ: ಗೃಹ ಲಕ್ಷ್ಮೀ ಯೋಜನೆಯಿಂದ ಬದಲಾದ ಮಹಿಳೆಯ ಬದುಕು

ದಿಲೀಪ್ ಕುಮಾರ್ ದೋಖಾ ಅವರು ಕಳೆದ 12 ವರ್ಷಗಳಿಂದ ಅಮೆರಿಕಾದಲ್ಲಿ ಮೆಡಿಸಿನ್ ಉತ್ಪಾದನಾ ವ್ಯವಹಾರ ಮಾಡುತ್ತಿದ್ದರು. ಬೆಂಗಳೂರಿನಲ್ಲೂ ಆಸ್ತಿ ಹೊಂದಿದ್ದಾರೆ. ದಿಲೀಪ್ ಕುಮಾರ್ ದೋಖಾ ಅವರಿಗೆ ಮದುವೆ ಕೂಡ ಆಗಿದ್ದು, ಮೂರು ಹೆಣ್ಣು ಮಕ್ಕಳ ತಂದೆಯಾಗಿದ್ದಾರೆ. ಮಕ್ಕಳ ಮದುವೆ ಮಾಡಿ ಇದೀಗ  ಪತ್ನಿಯನ್ನ ಒಬ್ಬೊಂಟಿಯಾಗಿ ಬಿಟ್ಟು ಜೈನ ಮುನಿ ಆಗಿ ಪರಿವರ್ತನೆ ಆಗಿದ್ದಾರೆ.

Yadgiri

ಅದ್ದೂರಿ ಮೆರವಣಿಗೆ

55 ವರ್ಷದ ದಿಲೀಪ್ ಕುಮಾರ್ ದೋಖಾ ಅವರು 14 ವರ್ಷದಲ್ಲೇ ಜೈನ್ ದೀಕ್ಷೆ ಪಡೆಯಲು ಹೋಗಿದ್ದರು. ಪೋಷಕರು ಬೇಡ ಅಂದಿದ್ದಕ್ಕೆ ವಾಪಸ್ ಆಗಿದ್ದರು. ಆದರೆ ಇದೀಗ ಜೈನ್ ದೀಕ್ಷೆ ಪಡೆದುಕೊಳ್ಳುವ ಮೂಲಕ ಬರೋಬ್ಬರಿ 41 ವರ್ಷದ ಬಳಿಕ ತಾವು ಹಿಂದೆ ಮಾಡಲು ಆಗದ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: ಯಾದಗಿರಿ: ತಾಪಮಾನ ಏರಿಕೆ ಪರಿಣಾಮ ನವಜಾತ ಶಿಶುಗಳಲ್ಲಿ ಕಿಡ್ನಿ ಬಾವು, ಆರೋಗ್ಯ ಸಮಸ್ಯೆ ಹೆಚ್ಚಳ

ಇನ್ನು ಜೈನ್ ದೀಕ್ಷೆ ಪಡೆದಿದ್ದಕ್ಕೆ ಕುಟುಂಬಸ್ಥರು ಹಾಗೂ ಸಂಬಂಧಿಕರಿಂದ ಕೊನೆಯದಾಗಿ ಅದ್ದೂರಿಯಾಗಿ ಮೆರವಣಿಗೆ ಮಾಡುವ ಮೂಲಕ ಬಿಳ್ಕೋಡುಗೆ ನೀಡಲಾಗಿದೆ. ಸೈದಾಪುರ ಪಟ್ಟಣದ ಪ್ರಮುಖ ಬೀದಿಯಲ್ಲಿ ಸಾರೋಟದಲ್ಲಿ ಮೆರವಣಿಗೆ ಮಾಡಿದ್ದಾರೆ.

ಕಠಿಣ ಹಾದಿಯಲ್ಲಿ ಸಾಗಿದ ಪತಿ: ಪತ್ನಿ ಕಣ್ನೀರು

ಜೈನ್ ದೀಕ್ಷೆ ಬಳಿಕ ಐಷಾರಾಮಿ ಕಾರು ಬಿಟ್ಟು ಓಡಾಡಬೇಕು. ಕಾಲಿಗೆ ಚಪ್ಪಲಿ ಸಹ ಹಾಕದೇ ಬರಿಗಾಲಲ್ಲಿ ಊರಿಂದ ಊರಿಗೆ ನಡೆದುಕೊಂಡೆ ಸಾಗಬೇಕು. ತಲೆ ಕೂದಲು ಕಿತ್ತಿಕೊಳ್ಳಬೇಕು, ಬಿಳಿ ಬಟ್ಟೆ ಮಾತ್ರ ಧರಿಸಬೇಕು‌‌. ಮನೆ ಮನೆಗೆ ಹೋಗಿ ಭಿಕ್ಷೆ ಬೇಡಿಕೊಂಡು ಊಟ ಮಾಡಬೇಕು. ಇಂತಹ ಕಠಿಣ ಹಾದಿಯಲ್ಲಿ ಸಾಗಲು ದಿಲೀಪ್ ಅವರು ಮುಂದಾಗಿದ್ದು, ಇತ್ತ ಪತ್ನಿ ಕಣ್ಣೀರು ಹಾಕಿದ್ದಾರೆ. ಬೇಡ ಅಂತ ಹೇಳಿದರು ನನನ್ನು ಒಬ್ಬಂಟಿ ಮಾಡಿ ಹೊರಟಿದ್ದಾರೆ ಎಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:44 am, Thu, 22 May 25

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ