AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾದಗಿರಿ ಆರ್‌ಟಿಒ ಕಚೇರಿ ನಿರ್ಮಾಣ: 15 ಕೋಟಿ ಬಿಡುಗಡೆ ಮಾಡಿದ್ದ ಬಿಜೆಪಿ ಸರ್ಕಾರ, ಕೆಲಸ ನಿಲ್ಲಿಸುವಂತೆ ಕಾಂಗ್ರೆಸ್ ಶಾಸಕ ವಾರ್ನಿಂಗ್​​!

ಹೊಸ RTO ಕಟ್ಟಡ ಜೊತೆಗೆ ಟೆಸ್ಟಿಂಗ್ ಟ್ರ್ಯಾಕ್ ಮಾಡಲು 15 ಕೋಟಿ ಬಿಡುಗಡೆ ಮಾಡಿದ್ದ ಹಿಂದಿನ ಬಿಜೆಪಿ ಸರ್ಕಾರ. ಆದ್ರೆ ಈಗ ಕಾಂಗ್ರೆಸ್ ಶಾಸಕರು ಕಾಮಗಾರಿಯನ್ನ ಬಂದ್ ಮಾಡುವಂತೆ ಅಧಿಕಾರಿಗಳನ್ನ ಒತ್ತಾಯ ಮಾಡುತ್ತಿದ್ದಾರೆ. ಮೊನ್ನೆ ನಡೆದ ಜಿಲ್ಲಾ ಉಸ್ತುವಾರಿ ಸಚಿವರ ಪ್ರಗತಿ ಪರಿಶೀಲನಾ ಸಭೆಯಲ್ಲೂ ಸಹ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡು ಕಾಮಗಾರಿ ನಿಲ್ಲಿಸುವಂತೆ ಆಜ್ಞೆ ಮಾಡಿದ್ದಾರೆ.

ಯಾದಗಿರಿ ಆರ್‌ಟಿಒ ಕಚೇರಿ ನಿರ್ಮಾಣ: 15 ಕೋಟಿ ಬಿಡುಗಡೆ ಮಾಡಿದ್ದ ಬಿಜೆಪಿ ಸರ್ಕಾರ, ಕೆಲಸ ನಿಲ್ಲಿಸುವಂತೆ ಕಾಂಗ್ರೆಸ್ ಶಾಸಕ ವಾರ್ನಿಂಗ್​​!
ಯಾದಗಿರಿ ಆರ್‌ಟಿಒ ಕಚೇರಿ ನಿರ್ಮಾಣ ಬೇಡವೆನ್ನುತ್ತಿರುವ ಕಾಂಗ್ರೆಸ್ ಶಾಸಕ!
TV9 Web
| Updated By: ಸಾಧು ಶ್ರೀನಾಥ್​|

Updated on: Jan 31, 2024 | 12:27 PM

Share

ಸರ್ಕಾರ ಆ ಜಿಲ್ಲೆಯ ಹೊಸ ಆರ್‌ಟಿಒ ಕಚೇರಿ ಹಾಗೂ ಟೆಸ್ಟಿಂಗ್ ಟ್ರ್ಯಾಕ್‌ ನಿರ್ಮಾಣಕ್ಕೆ ಕೋಟ್ಯಾಂತರ ಬಿಡುಗಡೆ ಮಾಡಿದೆ. ಹಿಂದಿನ ಸರ್ಕಾರದಲ್ಲೇ ಹಣ ಮಂಜೂರು ಆಗಿದ್ದಕ್ಕೆ ಕೆಲಸ ಆರಂಭವಾಗಿ ತಿಂಗಳುಗಳು ಕಳೆದಿದೆ. ಆದ್ರೆ ಈಗ ಸರ್ಕಾರ ಬದಲಾಗಿದ್ದಕ್ಕೆ ಕೆಲಸಕ್ಕೆ ಬ್ರೇಕ್ ಹಾಕುವಂತೆ ಕಾಂಗ್ರೆಸ್ ಶಾಸಕರೇ ದುಂಬಾಲು ಬಿದ್ದಿದ್ದಾರೆ. ಕಾರಣ ಆರ್‌ಟಿಒ ಕಚೇರಿ ದೂರ ಆಗುತ್ತೆ ಅಂತ ಹೇಳ್ತಾಯಿದ್ದಾರೆ.

ಆರಂಭವಾದ ಹೊಸ ಆರ್‌ಟಿಒ ಕಚೇರಿ ಕಟ್ಟಡ ನಿರ್ಮಾಣ ಕಾಮಗಾರಿ.. ಹಾಲಿ ಮಾಜಿ ಶಾಸಕ ಮಧ್ಯೆ ಗುದ್ದಾಟಕ್ಕೆ ಕಾರಣವಾದ ಹೊಸ ಕಟ್ಟಡ ಕಾಮಗಾರಿ.. ದೂರ ಆಗುತ್ತೆ ಅಂತ ಕೆಲಸ ನಿಲ್ಲಿಸುವಂತೆ ಆರೋಪಿಸುತ್ತಿರುವ ಕಾಂಗ್ರೆಸ್ ಶಾಸಕರು.. ಕೆಲಸ ಪೂರ್ಣಗೊಂಡ್ರೆ ಬಿಜೆಪಿ ಹೆಸರು ಬರುತ್ತೆ ಅಂತ ಮಾಜಿ ಶಾಸಕರ ಆರೋಪ.. ಯಸ್ ಈ ದೃಶ್ಯಗಳು ಕಂಡು ಬಂದಿದ್ದು ಯಾದಗಿರಿ ತಾಲೂಕಿನ ಅಬ್ಬೆತುಮಕುರ ಗ್ರಾಮದ ಬಳಿ..

ಹೌದು ಯಾದಗಿರಿ ನಗರದಲ್ಲಿರುವ ಜಿಲ್ಲಾ ಆರ್‌ಟಿಒ ಕಚೇರಿ ಕಟ್ಟಡ ಹಳೆದಾಗಿದ್ದು ಬೇರೆ ಇಲಾಖೆಗೆ ಸೇರಿದ್ದಾಗಿದೆ. ಇದೆ ಕಾರಣಕ್ಕೆ ಹಿಂದಿನ ಬಿಜೆಪಿ ಸರ್ಕಾರ ಹೊಸ ಸ್ವಂತ ಕಟ್ಟಡಕ್ಕೆ ಅನುದಾನ ಬಿಡುಗಡೆ ಮಾಡಿದೆ. ಹೊಸ ಕಟ್ಟಡ ಜೊತೆಗೆ ಟೆಸ್ಟಿಂಗ್ ಟ್ರ್ಯಾಕ್ ಮಾಡಲು ಸುಮಾರು 15 ಕೋಟಿ ಹಣವನ್ನ ಹಿಂದಿನ ಬಿಜೆಪಿ ಸರ್ಕಾರ ಬಿಡುಗಡೆ ಮಾಡಿದೆ.

ಹಣ ಬಿಡುಗಡೆ ಆಗ್ತಾಯಿದ್ದ ಹಾಗೆ ಹಿಂದಿನ ಬಿಜೆಪಿ ಶಾಸಕರು ಹಾಗೂ ಅಧಿಕಾರಿಗಳು ಯಾದಗಿರಿ ತಾಲೂಕಿನ ಅಬ್ಬೆತುಮಕುರ ಬಳಿ ಹತ್ತು ಎಕರೆ ಜಮೀನು ಗುರುತು ಮಾಡಿದ್ರು. ಜಾಗ ಗುರುತು ಮಾಡಿದ ಬಳಿಕ ಹಣ ಬಿಡುಗಡೆ ಅದ ಕೂಡ್ಲೇ ಹಿಂದಿನ ಸರ್ಕಾರದ ಅವಧಿಯಲ್ಲಿಯೇ ಹೊಸ ಟೆಸ್ಟಿಂಗ್ ಟ್ರ್ಯಾಕ್ ನಿರ್ಮಾಣದ ಕಾಮಗಾರಿಯನ್ನ ಗುತ್ತಿಗೆ ಪಡೆದ ಗುತ್ತಿಗೆದಾರ ಕಾಮಗಾರಿಯನ್ನ ಆರಂಭಿಸಿದ್ದಾನೆ.

ಆರಂಭದಲ್ಲಿ 9 ಕೋಟಿ ವೆಚ್ಚದಲ್ಲಿ ಟೆಸ್ಟಿಂಗ್ ಟ್ರ್ಯಾಕ್ ಕಾಮಗಾರಿ ಆರಂಭವಾಗಿ ತಿಂಗಳು ಕಳೆದಿವೆ‌. ಬಳಿಕ ಕೆಲಸ ತಿಂಗಳ ಹಿಂದೆ ಇದೇ ಟೆಸ್ಟಿಂಗ್ ಟ್ರ್ಯಾಕ್ ಬಳಿ ಹೊಸ ಆರ್‌ಟಿಒ ಕಚೇರಿಯ ಕಟ್ಟಡ ನಿರ್ಮಾಣ ಕಾಮಗಾರಿ ಕೂಡ ಆರಂಭವಾಗಿದೆ. ಆದ್ರೆ ಕಾಮಗಾರಿ ಆರಂಭವಾಗಿ ತಿಂಗಳುಗಳು ಕಳೆದ ಬಳಿಕ ಸರ್ಕಾರ ಬದಲಾಗಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಿದೆ.

ಆದ್ರೆ ಈಗ ಕಾಂಗ್ರೆಸ್ ಶಾಸಕರು ಕಾಮಗಾರಿಯನ್ನ ಬಂದ್ ಮಾಡುವಂತೆ ಅಧಿಕಾರಿಗಳನ್ನ ಒತ್ತಾಯ ಮಾಡುತ್ತಿದ್ದಾರೆ. ಮೊನ್ನೆ ನಡೆದ ಜಿಲ್ಲಾ ಉಸ್ತುವಾರಿ ಸಚಿವರ ಪ್ರಗತಿ ಪರಿಶೀಲನಾ ಸಭೆಯಲ್ಲೂ ಸಹ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡು ಕಾಮಗಾರಿ ನಿಲ್ಲಿಸುವಂತೆ ಆಜ್ಞೆ ಮಾಡಿದ್ದಾರೆ. ಕಾಮಗಾರಿ ಬಂದ್ ಮಾಡದೆ ಇದ್ರೆ ಸಂಬಂಧಿಸಿದ ಸಚಿವರಿಗೆ ಹೇಳ್ತೆನೆ ಅಂತ ವಾರ್ನ್ ಮಾಡಿದ್ದಾರೆ.

Also Read: ದೇವದುರ್ಗದಲ್ಲಿ ಕೋಟ್ಯಂತರ ರೂ​​​ ನರೇಗಾ ಅಕ್ರಮ, ಉಸ್ತುವಾರಿ ಸಚಿವ ಶರಣ ಪ್ರಕಾಶ್ ಪಾಟೀಲ್ ಹೇಳಿದ್ದೇನು?

ಇಷ್ಟಕ್ಕೂ ಶಾಸಕರು ಹೊಸ ಕಟ್ಟಡ ಕಾಮಗಾರಿ ಬಂದ್ ಮಾಡುವಂತೆ ಒತ್ತಾಯ ಮಾಡೋದ್ದಕ್ಕೆ ಕಾರಣ ಅಂದ್ರೆ ಯಾದಗಿರಿ ನಗರದಿಂದ ದೂರ ಆಗುತ್ತೆ ಅಂತ ಹೇಳ್ತಾಯಿದ್ದಾರೆ. ಯಾಕೆಂದ್ರೆ ಹೊಸದಾಗಿ ನಿರ್ಮಾಣವಾಗುತ್ತಿರುವ ಹೊಸ ಕಟ್ಟಡ ಯಾದಗಿರಿ ನಗರದಿಂದ ಸುಮಾರು ಎಂಟು ಕಿ.ಮೀ ದೂರ ಆಗ್ತಾಯಿದೆ. ಇದೆ ಕಾರಣಕ್ಕೆ ನಗರದ ಜನರಿಗೆ ಯಾವುದೇ ಕೆಲಸ ಆಗಬೇಕು ಅಂದ್ರೆ ಎಂಟು ಕಿ‌.ಮೀ ದೂರ ಹೋಗಬೇಕಾಗುತ್ತೆ ಹೀಗಾಗಿ ಟೆಸ್ಟಿಂಗ್ ಟ್ರ್ಯಾಕ್ ಈಗ ಮಾಡುವ ಸ್ಥಳದಲ್ಲೇ ಮಾಡಿ ಆದ್ರೆ ಕಚೇರಿ ಮಾತ್ರ ನಾನು ಹೊಸದಾಗಿ ಯಾದಗಿರಿ ನಗರದಲ್ಲೇ ಸ್ಥಳವನ್ನ ತೋರಿಸುತ್ತೆನೆ ಅಲ್ಲೇ ಮಾಡಿ ಅಂತ ಒತ್ತಾಯ ಮಾಡುತ್ತಿದ್ದಾರೆ.

ಆದ್ರೆ ಶಾಸಕರ ಆಜ್ಞೆಯನ್ನ ಅಧಿಕಾರಿಗಳು ನುಂಗಲು ಆಗದೆ ಉಗುಳಲು ಆಗದ ಪರಸ್ಥಿತಿಯಲ್ಲಿದ್ದಾರೆ. ಯಾಕೆಂದ್ರೆ ಈಗ ಕೆಲಸ ಸುಮಾರು 40% ಮುಗಿದಿದೆ ಹೀಗಾಗಿ ಬಂದ್ ಮಾಡಲು ಸಾಧ್ಯವಿಲ್ಲ. ಹೀಗಾಗಿ ಅಧಿಕಾರಿಗಳು ಸಂಕಷ್ಟ ಸಿಲುಕಿದ್ದಾರೆ.. ಇನ್ನು ಇತ್ತ ಬಿಜೆಪಿಯ ಮಾಜಿ ಶಾಸಕರು ಕಾಂಗ್ರೆಸ್ ನ ಹಾಲಿ ಶಾಸಕರ ನಡೆಯಿಂದ ತೀವ್ರ ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ. ಯಾಕೆಂದ್ರೆ ನಮ್ಮ ಸರ್ಕಾರದಲ್ಲಿ ಮಂಜೂರಾದ ಅನುದಾನದಲ್ಲಿ ಕೆಲಸ ಆಗ್ತಾಯಿದೆ ಹೀಗಾಗಿ ಕೆಲಸ ಪೂರ್ಣಗೊಂಡ್ರೆ ಬಿಜೆಪಿ ಹೆಸರು ಬರುತ್ತೆ ಅಂತ ಶಾಸಕರು ಈ ರೀತಿ ವರ್ತನೆ ಮಾಡುತ್ತಿದ್ದಾರೆ ಅಂತ ಬಿಜೆಪಿ ಮಾಜಿ ಶಾಸಕರ ಆರೋಪವಾಗಿದೆ.

ಒಟ್ನಲ್ಲಿ ಯಾದಗಿರಿ ಜಿಲ್ಲೆಯ ಒಂದು ದಶಕದ ಬಳಿಕ ಹೊಸದಾಗಿ ಟೆಸ್ಟಿಂಗ್ ಟ್ರ್ಯಾಕ್ ಹಾಗೂ ಹೊಸ ಕಟ್ಟಡ ನಿರ್ಮಾಣ ಆಗ್ತಾಯಿದೆ. ಆದ್ರೆ ಹೊಸ ಕಟ್ಟಡದ ವಿಚಾರಕ್ಕೆ ಹಾಲಿ ಹಾಗೂ ಮಾಜಿ ಶಾಸಕ ಮಧ್ಯೆ ಗುದ್ದಾಟಕ್ಕೆ ಕಾರಣವಾಗಿದೆ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.