Yadagiri News: ಶಿಥಿಲಾವಸ್ಥೆಗೆ ತಲುಪಿದ ಸರ್ಕಾರಿ ಶಾಲೆ ಕಟ್ಟಡಗಳು; ಜೀವ ಕೈಯಲ್ಲಿ ಹಿಡಿದು ಪಾಠ ಕೇಳುವ ವಿದ್ಯಾರ್ಥಿಗಳು
ಬೇಸಿಗೆ ರಜೆ ಮುಗಿದು ಹೋಗಿ, ಮತ್ತೆ ಶಾಲೆಗಳು ಆರಂಭವಾಗಿವೆ. ಉತ್ಸಾಹದಿಂದ ಮಕ್ಕಳು ಶಾಲೆಗಳತ್ತ ಹೆಜ್ಜೆ ಹಾಕುತ್ತಿದ್ದು, ಎರಡು ತಿಂಗಳ ಬ್ರೇಕ್ ಬಳಿಕ ಶಿಕ್ಷಕರ ಪಾಠ ಕೇಳಲು ಮುಂದಾಗಿದ್ದಾರೆ. ಆದ್ರೆ, ಆ ಜಿಲ್ಲೆಯಲ್ಲಿ ಮಾತ್ರ ಶಾಲೆಗಳ ಸ್ಥಿತಿ ನೋಡಿದ್ರೆ, ವಿದ್ಯಾರ್ಥಿಗಳು ಹೆದರುವಂತಾಗಿದೆ. ಇವತ್ತೋ ನಾಳೆನೋ ಬಿಳುವ ಹಂತದಲ್ಲಿರುವ ಶಾಲೆಗಳಲ್ಲಿ ಕುಳಿತು, ಮಕ್ಕಳು ಅಂಗೈಯಲ್ಲಿ ಜೀವ ಹಿಡಿದುಕೊಂಡು ಪಾಠ ಕೇಳುವಂತಾಗಿದೆ.
ಯಾದಗಿರಿ: ಜಿಲ್ಲೆ ಮೊದಲೇ ಶೈಕ್ಷಣಿಕವಾಗಿ ಹಿಂದುಳಿದಿದ್ದು, ಅದರಲ್ಲೀಗ ಬಿಳುವ ಹಂತದಲ್ಲಿರುವ ಶಾಲೆಯ ಕೋಣೆಗಳಲ್ಲಿ ಕುಳಿತು ಪಾಠ ಕೇಳುತ್ತಿರುವ ಮಕ್ಕಳು. ಬೇಸಿಗೆ ರಜೆಯಲ್ಲಿ ಶಾಲೆಗಳನ್ನ ರಿಪೇರಿ ಮಾಡಬೇಕಿದ್ದ ಅಧಿಕಾರಿಗಳಿಂದ ನಿರ್ಲಕ್ಷ್ಯ. ಮಳೆ ಬಂದ್ರೆ, ಸೋರುತ್ತಿದ್ದು, ಸ್ವಲ್ಪ ಯಾಮಾರಿದ್ರು ಮೇಲ್ಚಾವಣಿ ಕುಸಿದು ಬಿಳುತ್ತೆ. ಹೌದು ರಾಜ್ಯಾದ್ಯಂತ ಇಂದಿನಿಂದ ಶಾಲೆಗಳು ಪುನಃ ಆರಂಭವಾಗಿವೆ. ಎರಡು ತಿಂಗಳ ಬೇಸಿಗೆ ರಜೆ ಬಳಿಕ ಮಕ್ಕಳು ಉತ್ಸಾಹದಿಂದ ಶಾಲೆಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಎರಡು ತಿಂಗಳ ಬಳಿಕ ಸಹಪಾಠಿಗಳ ಜೊತೆ ಸೇರಿ ಶಿಕ್ಷಕರ ಪಾಠವನ್ನ ಆಲಿಸಲಿದ್ದಾರೆ. ಪ್ರತಿ ವರ್ಷ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಫಲಿತಾಂಶದಲ್ಲಿ ಕೊನೆಯ ಸ್ಥಾನದಲ್ಲಿರುತ್ತೆ. ಇದಕ್ಕೆ ಕಾರಣ ಅಂದ್ರೆ, ಗುಣಮಟ್ಟದ ಶಿಕ್ಷಣ ಹಾಗೂ ಗುಣಮಟ್ಟದ ಶಾಲಾ ಕೊಠಡಿಗಳು ಇಲ್ಲದೇ ಇರುವುದು.
ಯಾದಗಿರಿ ಜಿಲ್ಲೆಯಲ್ಲಿ ಮಕ್ಕಳು ಸರ್ಕಾರಿ ಶಾಲೆಗಳಿಗೆ ಹೋಗಬೇಕು ಅಂದ್ರೆ, ಸಾಕು ಹೆದರುವಂತ ಪರಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ಬಹುತೇಕ ಕಡೆ ಇರುವ ಸರ್ಕಾರಿ ಶಾಲೆಯ ಕೊಠಡಿಗಳು ಶಿಥಿಲಾವಸ್ಥೆಗೆ ಬಂದಿದ್ದು, ಮೇಲ್ಚಾವಣಿಗಳು ಕುಸಿದು ಬಿಳುವ ಹಂತಕ್ಕೆ ಬಂದಿವೆ. ಮಳೆ ಬಂದ್ರೆ ಸಾಕು ಸೋರುತ್ತವೆ. ಆದ್ರೆ, ಬೇಸಿಗೆ ರಜೆ ಇದ್ದಾಗ ಅಧಿಕಾರಿಗಳು ಜಿಲ್ಲೆಯಲ್ಲಿರುವ ಶಿಥಿಲಾವಸ್ಥೆಗೆ ಬಂದಿರುವ ಕೋಣೆಗಳನ್ನ ರಿಪೇರಿ ಮಾಡುತ್ತೆವೆಂದು ಹೇಳಿದ್ರು. ಬೇಸಿಗೆ ರಜೆ ಮುಗಿದು ಮತ್ತೊಂದು ಶೈಕ್ಷಣಿಕ ವರ್ಷ ಆರಂಭವಾದ್ರು, ಶಾಲೆಗಳ ಸ್ಥಿತಿ ಅದೆ ರೀತಿಯಿದೆ. ಹೀಗಾಗಿ ಜನರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
ಇದನ್ನೂ ಓದಿ:School Reopen: ಇಂದಿನಿಂದ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳು ಪುನಾರಂಭ
ಶಿಥಿಲಾವಸ್ಥೆಗೆ ಬಂದ ನಾಯ್ಕಲ್ ಗ್ರಾಮದ ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆ
ಜಿಲ್ಲೆಯ ವಡಗೇರ ತಾಲೂಕಿನ ನಾಯ್ಕಲ್ ಗ್ರಾಮದ ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಯ ಕೋಣೆಗಳು ನೋಡಿದ್ರೆ, ಎಂತವರಿಗೂ ಸಹ ಭಯ ಶುರುವಾಗುತ್ತೆ. ಹೀಗಿರುವಾಗ ಮಕ್ಕಳ ಪರಸ್ಥಿತಿ ಏನಾಗಬಾರದು, ಗ್ರಾಮದ ಸರ್ಕಾರಿ ಶಾಲೆಯ ಕೋಣೆಗಳು ಸಂಪೂರ್ಣವಾಗಿ ಶಿಥಿಲಾವಸ್ಥೆಗೆ ಬಂದಿವೆ. ದಿನೇ ದಿನೇ ಶಾಲೆಯ ಕೋಣೆಗಳ ಮೇಲ್ಚಾವಣಿಗೆ ಕುಸಿದು ಬಿಳುತ್ತಿದೆ. ಅಪ್ಪಿತಪ್ಪಿ ಮಕ್ಕಳ ಮೇಲೆ ಮೇಲ್ಚಾವಣಿ ಕುಸಿದು ಬಿದ್ರೆ, ಯಾರು ಜವಾಬ್ದಾರರು ಆಗುತ್ತಾರೆ. ಇದೀಗ ರಜೆಯ ಬಳಿಕ ಮತ್ತೆ ಶಾಲೆಗಳು ಆರಂಭವಾಗಿದ್ದರಿಂದ ಮಕ್ಕಳು ಜೀವ ಭಯದಲ್ಲೇ ಪಾಠ ಕೇಳುವಂತಾಗಿದೆ.
ಇನ್ನು ಯಾದಗಿರಿ ತಾಲೂಕಿನ ಬಂದಹಳ್ಳಿ ಹಾಗೂ ಬಾಚವಾರ್ ಗ್ರಾಮದ ಶಾಲೆಗಳ ಕೋಣೆಗಳು ಸಹ ಇದೆ ರೀತಿಯ ಸ್ಥಿತಿಯಲ್ಲಿವೆ. ಈ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕನ್ನಡ ಮಾಧ್ಯಮ ಶಾಲೆಯ ಕೋಣೆಗಳ ಮೇಲ್ಚಾವಣಿ ಕುಸಿದು ಬಿಳುತ್ತಿದೆ. ಮಳೆ ಬಂದಾಗ ಕೋಣೆಗಳು ಸೋರುತ್ತಿದ್ದು, ಬೇರೆ ಕಡೆ ಕುರಿಸಿ ಪಾಠ ಮಾಡಬೇಕಾದ ಸ್ಥಿತಿ ಎದುರಾಗಿದೆ. ಯಾದಗಿರಿ ನಗರದ ಸ್ಟೇಷನ್ ಬಜಾರ್ ಸರ್ಕಾರಿ ಉರ್ದು ಶಾಲೆಯ ಕೋಣೆಗಳು ಶಿಥಿಲಾವಸ್ಥೆ ಬಂದಿದ್ದು, ಮೇಲ್ಚಾವಣಿ ಬಿಳಿಸಿ ಹೊಸ ಮೇಲ್ಚಾವಣಿಯನ್ನ ಹಾಕಲಾಗಿದೆ. ಆದ್ರೆ, ಕಾಮಗಾರಿ ಪೂರ್ಣವಾಗದ ಕಾರಣಕ್ಕೆ ಮಕ್ಕಳನ್ನ ಈಗಿರುವ ಕೋಣೆಗಳಲ್ಲಿ ಕುರಿಸಿ, ಶಿಕ್ಷಕರು ಪಾಠ ಮಾಡುತ್ತಿದ್ದಾರೆ.
ಇದನ್ನೂ ಓದಿ:ಮಳೆಗಾಲದಲ್ಲಿ ಶಾಲೆಗಳು ಆರಂಭ; ಮಕ್ಕಳನ್ನು ಶಾಲೆಗೆ ಕಳುಹಿಸುವ ಪೋಷಕರಿಗೆ ಕೆಲವು ಸಲಹೆಗಳು
ಇನ್ನು ಈ ಕುರಿತು ಯಾದಗಿರಿ ಜಿಲ್ಲಾ ಪಂಚಾಯತಿ ಸಿಇಒ ಅವರಿಗೆ ಕೇಳಿದ್ರೆ, ಪ್ರತಿಯೊಂದು ಶಾಲೆಗಳನ್ನ ರಿಪೇರಿ ಮಾಡುವ ಕೆಲಸ ಮಾಡುತ್ತೆವೆ ಮಕ್ಕಳಿಗೆ ತೊಂದರೆಯಾಗದ ರೀತಿಯಲ್ಲಿ ನೋಡಿಕೊಳ್ಳುತ್ತೆವೆ ಅಂತಾರೆ. ಒಟ್ಟಿನಲ್ಲಿ 2023-24 ರ ಶೈಕ್ಷಣಿಕ ವರ್ಷ ಆರಂಭವಾಗಿದ್ದು, ಮಕ್ಕಳು ಅತಿ ಉತ್ಸಾಹದಿಂದ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ. ಹೀಗಾಗಿ ಕೂಡಲೇ ಕೋಣೆಗಳನ್ನ ರಿಪೇರಿ ಮಾಡಿ ಮಕ್ಕಳಲ್ಲಿ ಇರುವ ಭಯದ ವಾತವರಣವನ್ನ ದೂರ ಮಾಡಬೇಕಾಗಿದೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ