AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲಬುರಗಿ ಬಳಿಕ ಯಾದಗಿರಿಯಲ್ಲೂ RSS ಪಥಸಂಚಲನಕ್ಕೆ ಅಡ್ಡಿ: ಅಷ್ಟಕ್ಕೂ ಆಗಿದ್ದೇನು?

ಯಾದಗಿರಿಯ ಕೆಂಭಾವಿಯಲ್ಲಿ ನ.4 ರಂದು ಪಥಸಂಚಲನ ನಡೆಸಲು ಉದ್ದೇಶಿಸಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಅಡ್ಡಿ ಉಂಟಾಗಿದೆ. ದಂಡ (ದೊಣ್ಣೆ) ಹಿಡಿದು ಪಥಸಂಚಲನ ನಡೆಸಬಾರದು ಎಂದು ದಲಿತ ಸಂಘರ್ಷ ಸಮಿತಿ ಹೇಳಿದ್ದು, ಈ ಕುರಿತು ತಾಲೂಕು ಆಡಳಿತ ನಡೆಸಿದ ಸಂಧಾನ ಸಭೆಯೂ ವಿಫಲವಾಗಿದೆ.

ಕಲಬುರಗಿ ಬಳಿಕ ಯಾದಗಿರಿಯಲ್ಲೂ RSS ಪಥಸಂಚಲನಕ್ಕೆ ಅಡ್ಡಿ: ಅಷ್ಟಕ್ಕೂ ಆಗಿದ್ದೇನು?
RSS ಪಥಸಂಚಲನ (ಸಾಂದರ್ಭಿಕ ಚಿತ್ರ)Image Credit source: Google
ಅಮೀನ್​ ಸಾಬ್​
| Edited By: |

Updated on:Nov 02, 2025 | 3:16 PM

Share

ಯಾದಗಿರಿ, ನವೆಂಬರ್​ 02: ಕಲಬುರಗಿಯ ಚಿತ್ತಾಪುರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಥಸಂಚಲನ ವಿಚಾರ ರಾಜ್ಯಾದ್ಯಂತ ಸದ್ದು ಮಾಡಿದ್ದು, ವಿಷಯ ಕೋರ್ಟ್​ ಕಟಕಟೆಯಲ್ಲಿದೆ. ಈ ನಡುವೆ ಇತ್ತ ಯಾiದಗಿರಿಯಲ್ಲೂ RSS ಮತ್ತು DSS (ದಲಿತ ಸಂಘರ್ಷ ಸಮಿತಿ) ನಡುವೆ ಪಥಸಂಚಲನ ಫೈಟ್​ ಶುರುವಾಗಿದೆ. ಕೆಂಭಾವಿಯಲ್ಲಿ ನ.4 ರಂದು ಪಥಸಂಚಲನ ನಡೆಸಲು ಅನುಮತಿ ಕೋರಿ ಎರಡೂ ಸಂಘಟನೆಗಳು ಅರ್ಜಿ ಸಲ್ಲಿಸಿದ್ದು, ತಾಲೂಕಾಡಳಿತದ ಸಂಧಾನ ಸಭೆಯೂ ವಿಫಲವಾಗಿದೆ.

RSS ಗಣವೇಶದ ಭಾಗವಾದ ದಂಡಕ್ಕೆ(ದೊಣ್ಣೆ) DSS ತಕರಾರು ತೆಗೆದಿದ್ದು, ನೋಂದಣಿ ಇಲ್ಲದ RSS ನವರು ದಂಡ ಹಿಡಿದು ಪಥ ಸಂಚಲನ ನಡೆಸಲು ಅನುಮತಿ ನೀಡಬಾರದು ಎಂದು ಡಿಎಸ್​ಎಸ್​ ಆಗ್ರಹಿಸಿದೆ. ಆದರೆ ಸ್ವಯಂಸೇವಕರು ಪಥಸಂಚಲನದಲ್ಲಿ ಪೂರ್ಣ ಗಣವೇಷ ಧರಿಸುವುದು RSS ಅನುಶಾಸನ. ಪೂರ್ಣ ಗಣವೇಶದಲ್ಲಿ ಸುಮಾರು ಏಳು ಭಾಗಗಳಿರುತ್ತವೆ. ಕಪ್ಪು ಟೋಪಿ, ದಂಡ(ದೊಣ್ಣೆ), ಬಿಳಿ ಅಂಗಿ, ಕಂದು ಬಣ್ಣದ ಬೆಲ್ಟ್, ಖಾಕಿ ಬಣ್ಣದ ಪ್ಯಾಂಟ್, ಕಾಲುಚೀಲ(ಸಾಕ್ಸ್), ಲೇಸ್ ಇರುವ ಕಪ್ಪು ಬಣ್ಣದ ಬೂಟು ಧರಿಸಿಯೇ ಮಾತನಾಡದೆ ಪಥಸಂಚಲನ ಮಾಡಬೇಕು. ಹೀಗಾಗಿ ದಂಡ ಇಲ್ಲದ ಪಥಸಂಚಲನ ಅಪೂರ್ಣ ಎಂಬುದು ಆರೆಸ್ಸೆಸ್​ ವಾದ.

ಇದನ್ನೂ ಓದಿ: ಕಲಬುರಗಿ ಹೈಕೋರ್ಟ್ ಮಹತ್ವದ ಸೂಚನೆ: ನ. 2ರಂದು ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ಮುಂದಾಗಿದ್ದ RSSಗೆ ಹಿನ್ನಡೆ

ಇನ್ನು ಇದೇ ವಿಚಾರವಾಗಿ ತಾಲೂಕು ಆಡಳಿತ ನಡೆಸಿದ್ದ ಸಂಧಾನ ಸಭೆಯೂ ವಿಫಲವಾಗಿದೆ. ದಂಡ ಇಲ್ಲದೆ ಆರೆಸ್ಸೆಸ್​ನವರು ಪಥಸಂಚಲನ ನಡೆಸಲಿ ಎಂದು ಡಿಎಸ್​ಎಸ್​ ಆಗ್ರಹಿಸಿದ ಕಾರಣ ಸಭೆಯಲ್ಲಿ ಯಾವುದೇ ಅಂತಿಮ ನಿರ್ಧಾರವನ್ನು ಕೈಗೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ಈ ಬಗ್ಗೆ ಜಿಲ್ಲಾಡಳಿತಕ್ಕೆ ವರದಿ ನೀಡಲು ತಾಲೂಕಾಡಳಿತ ಮುಂದಾಗಿದೆ.

ಇತ್ತ ಚಿತ್ತಾಪುರ ಆರ್​​ಎಸ್​ಎಸ್​​ ಪಥಸಂಚಲನ ಜಟಾಪಟಿಯೂ ಮುಂದುವರೆದಿದೆ. ಶಾಂತಿ ಸಭೆ ಅಶಾಂತಿಯಲ್ಲಿ ಅಂತ್ಯಗೊಂಡಿದ್ದ ಬಗ್ಗೆ ಕಲಬುರಗಿ ಹೈಕೋರ್ಟ್ ವಿಭಾಗೀಯ ಪೀಠ ಅಸಮಾಧಾನ ವ್ಯಕ್ತಪಡಿಸಿದ್ದಲ್ಲದೆ, ನ. 5ರಂದು ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನ ಅಡ್ವೊಕೇಟ್ ಜನರಲ್ ಕಚೇರಿಯಲ್ಲಿಯೇ ಶಾಂತಿ ಸಭೆ ನಡೆಸಲು ಸೂಚಿಸಿ ವಿಚಾರಣೆಯನ್ನು ನವೆಂಬರ್ 7ಕ್ಕೆ ಮುಂದೂಡಿತ್ತು. ಹೀಗಾಗಿ ಇಂದು (ನ.2) ಕಲಬುರಗಿಯ ಚಿತ್ತಾಪುರದಲ್ಲಿ ಪಥಸಂಚಲನ ನಡೆಸಲು ತಯಾರಿ ನಡೆಸಿದ್ದ RSSಗೆ ಹಿನ್ನಡೆ ಆಗಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:00 pm, Sun, 2 November 25

2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?
ಚಿತ್ರದುರ್ಗ ಬಳಿ ಬಸ್​​ ದುರಂತ: ಮಕ್ಕಳು ನಾಪತ್ತೆ, ಪೋಷಕರ ಗೋಳಾಟ
ಚಿತ್ರದುರ್ಗ ಬಳಿ ಬಸ್​​ ದುರಂತ: ಮಕ್ಕಳು ನಾಪತ್ತೆ, ಪೋಷಕರ ಗೋಳಾಟ
ಹೋಟೆಲ್ ರೆಸ್ಟೋರೆಂಟ್, ಬೇಕರಿ ತಿಂಡಿ ತಿನ್ನುವ ಮೊದಲು ಎಚ್ಚರ
ಹೋಟೆಲ್ ರೆಸ್ಟೋರೆಂಟ್, ಬೇಕರಿ ತಿಂಡಿ ತಿನ್ನುವ ಮೊದಲು ಎಚ್ಚರ
ಹೊಸೂರು ಬಳಿ ಹಳ್ಳಿಗೆ ನುಗ್ಗಿದ 40ಕ್ಕೂ ಹೆಚ್ಚು ಕಾಡಾನೆ ಹಿಂಡು!
ಹೊಸೂರು ಬಳಿ ಹಳ್ಳಿಗೆ ನುಗ್ಗಿದ 40ಕ್ಕೂ ಹೆಚ್ಚು ಕಾಡಾನೆ ಹಿಂಡು!
ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: ಮೂವರು ನಾಪತ್ತೆ
ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: ಮೂವರು ನಾಪತ್ತೆ
ಕ್ಯಾಥೆಡ್ರಲ್ ಚರ್ಚ್​ನಲ್ಲಿ ಕ್ರಿಸ್ಮಸ್ ಪ್ರಾರ್ಥನೆಯಲ್ಲಿ ಭಾಗವಹಿಸಿದ ಮೋದಿ
ಕ್ಯಾಥೆಡ್ರಲ್ ಚರ್ಚ್​ನಲ್ಲಿ ಕ್ರಿಸ್ಮಸ್ ಪ್ರಾರ್ಥನೆಯಲ್ಲಿ ಭಾಗವಹಿಸಿದ ಮೋದಿ
‘10 ಬಾರಿ ನೋಡಿದ್ರೂ ಬೇಸರ ಬರಲ್ಲ’; ‘ಮಾರ್ಕ್’ ನೋಡಿ ಫ್ಯಾನ್ಸ್ ರಿಯಾಕ್ಷನ್
‘10 ಬಾರಿ ನೋಡಿದ್ರೂ ಬೇಸರ ಬರಲ್ಲ’; ‘ಮಾರ್ಕ್’ ನೋಡಿ ಫ್ಯಾನ್ಸ್ ರಿಯಾಕ್ಷನ್
ಡಿವೈಡರ್ ಹಾರಿ ಬಸ್​ಗೆ ಗುದ್ದಿದ ಲಾರಿ: ಪ್ರತ್ಯಕ್ಷದರ್ಶಿ ಹೇಳಿದ್ದೇನು ನೋಡಿ
ಡಿವೈಡರ್ ಹಾರಿ ಬಸ್​ಗೆ ಗುದ್ದಿದ ಲಾರಿ: ಪ್ರತ್ಯಕ್ಷದರ್ಶಿ ಹೇಳಿದ್ದೇನು ನೋಡಿ
ಟಿ20 ಪಂದ್ಯದಲ್ಲಿ 50 ಎಸೆತಗಳಲ್ಲಿ 61 ರನ್ ಬಾರಿಸಿದ RCB ದಾಂಡಿಗ..!
ಟಿ20 ಪಂದ್ಯದಲ್ಲಿ 50 ಎಸೆತಗಳಲ್ಲಿ 61 ರನ್ ಬಾರಿಸಿದ RCB ದಾಂಡಿಗ..!