ನಾಯಕತ್ವ ಜಂಜಾಟದ ನಡುವೆ ಸದ್ದು ಮಾಡಿದ ಶಾಸಕರ ಫಾರಿನ್ ಟ್ರಪ್: ಈ ಪ್ರವಾಸದ ಹಿಂದಿನ ಗುಟ್ಟೇನು?
ರಾಜ್ಯ ಕಾಂಗ್ರೆಸ್, ನಾಯಕತ್ವ ಗೊಂದಲದ ಗೂಡಾಗಿದೆ. ಇದೇ ವಿಷಯದಲ್ಲಿ ಸಾಕಷ್ಟು ವಿವಾದ ಭುಗಿಲೆದ್ದಿದೆ. ಆದ್ರೆ ಇದೇ ಹೊತ್ತಲ್ಲೇ ಶಾಸಕರ ಫಾರಿನ್ ಟ್ರಪ್ ವಿಷಯ ಬೆಂಕಿಯಲ್ಲಿ ಅರಳಿದ ಹೂವಿನಂತೆ ಸದ್ದು ಮಾಡಿದೆ. ಯಾಕಂದ್ರೆ ಇಲ್ಲಿ ಫಾರಿನ್ ಟೂರ್ ಕೈಗೊಳ್ಳುತ್ತಿರುವುದು ಖುದ್ದು ಕಾಂಗ್ರೆಸ್ ಶಾಸಕರು ಎನ್ನುವುದೇ ಹಾಟ್ ಆಫ್ ದಿ ಟಾಪಿಕ್ ಆಗಿದೆ. ಹಾಗಾದ್ರೆ, ಯಾರೆಲ್ಲಾ ವಿದೇಶ ಪ್ರವಾಸಕ್ಕೆ ತೆರಳುತ್ತಿದ್ದಾರೆ? ಏಕೆ ಹೋಗುತ್ತಿದ್ದಾರೆ ಎನ್ನುವ ವಿವರ ಇಲ್ಲಿದೆ.

ಬೆಂಗಳೂರು, (ಫೆಬ್ರವರಿ 11): ಕರ್ನಾಟಕ (karnataka) ಕಾಂಗ್ರೆಸ್ ಶಾಸಕರಿಗೆ ವಿದೇಶ ಪ್ರವಾಸ (Congress MLAs foreign tour) ಯೋಗ ಬಂದಿದ್ದು, ಅಧ್ಯಯನ ನಿಮಿತ್ತ ಫಾರಿನ್ ಟೂರ್ ಆಯೋಜನೆ ಮಾಡಲಾಗಿದೆ. ಪಶುಸಂಗೋಪನಾ ಇಲಾಖೆಯಿಂದ ಅಧ್ಯಯನ ಪ್ರವಾಸ ಆಯೋಜಿಸಲಾಗಿದ್ದು, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಗೆ ಶಾಸಕರನ್ನು ಕಳುಹಿಸಲು ತೀರ್ಮಾನ ಮಾಡಲಾಗಿದೆ. ಅಧುನಿಕ ಪದ್ಧತಿ ಅಳವಡಿಕೆ ಹಾಗೂ ಪಶುಸಂಗೋಪನ ಇಲಾಖೆ ಉನ್ನತೀಕರಣದ ಉದ್ದೇಶದಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ನಡುವೆ ಈಗ ನಾಯಕತ್ವ ಯುದ್ದ ನಡೆಯುತ್ತಿದೆ. ಇಂತಹ ಸಮಯದಲ್ಲಿ ಶಾಸಕರು ಅವರವರ ನಾಯಕರ ಪರ ಮಾತು ಕೂಡ ಆಡುತ್ತಿದ್ದಾರೆ.. ಇಂತಹ ಸಮಯದಲ್ಲಿ ಬರೋಬ್ಬರಿ 25 ಶಾಸಕರು ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಟೂರ್ ಕೈಗೊಳ್ಳಲು ಸಜ್ಜಾಗಿದ್ದಾರೆ. ಆದ್ರೆ ಇದರ ಹಿಂದಿರೋ ರಾಜಕೀಯ ಕಾರಣದ ಗುಟ್ಟನ್ನ ಶಾಸಕರು ಬಿಟ್ಟು ಕೊಡುತ್ತಿಲ್ಲ.. ಫೆಬ್ರವರಿ 16ರಂದ ಮಾರ್ಚ್ 3ರವರೆಗೂ ಟೂರ್ ಗೆ ಪ್ಲಾನ್ ಮಾಡಲಾಗಿದೆ.
ಇದನ್ನೂ ಓದಿ: ಕಾಂಗ್ರೆಸ್ನಲ್ಲಿ ತಾರಕಕ್ಕೇರಲಿದೆ ಕುರ್ಚಿ ಕದನ: ಟೂರ್ ಪಾಲಿಟಿಕ್ಸ್ Vs ರೆಸಾರ್ಟ್ ಪಾಲಿಟಿಕ್ಸ್ಗೆ ಬಣಗಳ ಸಿದ್ಧತೆ
ವಿದೇಶ ಪ್ರವಾಸಕ್ಕೆ ಹೋಗುವವರು ಯಾರು?
ಸಿದ್ದರಾಮಯ್ಯ ಆಪ್ತ ಪಶುಸಂಗೋಪನೆ ಸಚಿವ ವೆಂಕಟೇಶ್ ನೇತೃತ್ವದಲ್ಲಿ ಪ್ರವಾಸ ಕೈಗೊಂಡಿದ್ದು, ಫೆಬ್ರವರಿ 16ರಂದು ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಪ್ರವಾಸಕ್ಕೆ ಕಾಂಗ್ರೆಸ್ನ 25 ಶಾಸಕರಿಗೆ ಟಿಕೆಟ್ ಬುಕ್ ಆಗಿದೆ. ಸಚಿವ ವೆಂಕಟೇಶ್, ಶಾಸಕರಾದ ಪುಟ್ಟರಂಗಶೆಟ್ಟಿ, ಅನಿಲ್ ಚಿಕ್ಕಮಾದು,ರಾಘವೇಂದ್ರ ಹಿಟ್ನಾಳ್, ಯಶವಂತರಾಯಗೌಡ ಪಾಟೀಲ್, ಬಿ.ಎಂ.ನಾಗರಾಜು, ಜೆ.ಟಿ.ಪಾಟೀಲ್, ಅಲ್ಲಮಪ್ರಭು ಪಾಟೀಲ್, ಬಸವನಗೌಡ ದದ್ದಲ್, ಬಸವನಗೌಡ ತುರವಿಹಾಳ್, ಎ.ಆರ್.ಕೃಷ್ಣಮೂರ್ತಿ ಸೇರಿ 25 ಶಾಸಕರು ವಿದೇಶಕ್ಕೆ ಹೋಗುತ್ತಿದ್ದಾರೆ.
ಶಾಸಕರ ಫಾರಿನ್ ಟ್ರಿಪ್ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಸ್ವಾರಸ್ಯಕರವಾಗಿ ಮಾತನಾಡಿದ್ದಾರೆ. ಶಾಸಕರು ಅವರ ಸ್ವಂತ ದುಡ್ಡಿನಲ್ಲಿ ಹೋದ್ರೆ ನಾನು ಬೇಡ ಅನ್ನೋಕೆ ಆಗುತ್ತಾ ಎಂದು ಮರು ಪ್ರಶ್ನೆ ಹಾಕಿದ್ದಾರೆ. MLA ಗಳು, MLC ಗಳು ಅವರ ಸ್ವಂತ ದುಡ್ಡಿನಲ್ಲಿ ಹೋಗುತ್ತಿದ್ದಾರೆ. ಶಾಸಕರು ಫಾರಿನ್ ಟ್ರಿಪ್ ಹೋಗುವುದು ನನ್ನ ಗಮನಕ್ಕೆ ಇಲ್ಲ ಎಂದು ಸಿಎಂ ಹೇಳಿದ್ದಾರೆ.
ಇದನ್ನೂ ನೋಡಿ: ಬಜೆಟ್ ನಡುವೆ ಶಾಸಕರಿಂದ ವಿದೇಶ ಪ್ರವಾಸ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಿಕೆಶಿ ಆಪ್ತ
ಈ ಬಗ್ಗೆ ನನಗೆ ಗೊತ್ತಿಲ್ಲ. ಆದ್ರೆ ಶಾಸಕರು ಯಾವಾಗ ಬೇಕಾದರೂ ಪ್ರವಾಸಕ್ಕೆ ಹೋಗಬಹುದು. ಅದಕ್ಕೆ ಅಡ್ಡಿ ಇಲ್ಲ ಅಂತ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಇತ್ತ ಡಿಸಿಎಂ ಡಿಕೆ ಸಹೋದರ ಡಿಕೆ ಸುರೇಶ್ ಅವರಂತೂ, ಡಿಕೆ ಗೂ ಮತ್ತು ಫಾರೇನ್ ಪ್ರವಾಸಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಅಲ್ಲದೇ ಬೇಕಂತಲೇ ಡಿಕೆಗೆ ಕೆಟ್ಟ ಹೆಸರು ತರೀ ಹುನ್ನಾರ ಇದು ಎಂದು ಆಕ್ರೋಶ ಹೊರಹಾಕಿದ್ದಾರೆ
ಇತ್ತ ಡಿಕೆ ಬಣದಲ್ಲಿ ಗುರುತಿಸಿಕೊಂಡಿರೋ ಶಾಸಕ ಬಾಲಕೃಷ್ಣ ಬೇರೆಯದ್ದೇ ರೀತಿ ಮಾತನಾಡಿದ್ದಾರೆ. ನನಗೂ ಕರೆದಿದ್ದರಯ, ನಾನು ಹೋಗಲ್ಲ ಅಂದೆ. ಪಶುಸಂಗೋಪನೆ ಅಧ್ಯಯನ ಅಂತ ಹೋಗ್ತಿದ್ದಾರೆ. ಹಾಲು ಎಷ್ಟು ಕರೆಯುತ್ತೆ ಅನ್ನೋದನ್ನ ನೋಡಿಕೊಂಡು ಬರಲು ಹೋಗ್ತಿದ್ದಾರೆ ಎಂದು ಲೇವಡಿ ಮಾಡಿದರು. ಹಾಗೆಯೇ ವಿದೇಶಿ ಪ್ರವಾಸದಲ್ಲಿ ಯಾವುದೇ ರಾಜಕೀಯ ಕಾರಣಕ್ಕೆ ಮಾಡುತ್ತಿಲ್ಲ ಎಂದು ಪುಟ್ಟರಂಗಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ. ಅತ್ತ ನಾನು ಯಾವ ಬಣದಲ್ಲೂ ಇಲ್ಲ.. ಕಾಂಗ್ರೆಸ್ ನಮ್ಮ ಬಣ, ಕಾಂಗ್ರೆಸ್ ಹೈಕಮಾಂಡ್ ಸ್ಟ್ರಾಂಗ್ ಆಗಿದೆ ಅಂತ ಕೋನರೆಡ್ಡಿ ಹೇಳಿದ್ದರು.
ಇಷ್ಟೆಲ್ಲದರ ನಡುವೆ, ಕಾಂಗ್ರೆಸ್ ಶಾಸಕರ ಫಾರಿನ್ ಟೂರ್, ಬಿಜೆಪಿ ಜೆಡಿಎಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಕಾಂಗ್ರೆಸ್ ಶಾಸಕರು ಭ್ರಮನಿರಸನರಾಗಿದ್ದಾರೆ. ಅದಕ್ಕೆ ಫಾರಿನ್ ಟೂರ್ ಹೋಗುತ್ತಿದ್ದಾರೆ. ಈ ಸರ್ಕಾರ ಸ್ವಯಂ ಕೃತಾಪರಾಧದಿಂದ ಕುಸಿದು ಬೀಳುತ್ತದೆ. ಹೀಗಾಗಿ ಫಾರಿನ್ ಟೂರ್ ಗೂ ಹೋಗುತ್ತಾರೆ, ರಾಜಕಾರಣವನ್ನೂ ಮಾಡುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸಕ್ಕೆ ಎಕ್ಸ್ ಖಾತೆಯಲ್ಲಿ ಜೆಡಿಎಸ್ ಟೀಕೆ ಮಾಡಿದೆ.. ಕುರ್ಚಿ ಉಳಿಸಿಕೊಳ್ಳುವ ಆತಂಕದಲ್ಲಿರುವ ಸಿದ್ದರಾಮಯ್ಯ ತಮ್ಮ ಬಣದ ಶಾಸಕರನ್ನು ಹಿಡಿದಿಟ್ಟಿಕೊಳ್ಳಲು ಸದ್ದಿಲ್ಲದೇ ಫಾರಿನ್ ಟ್ರಿಪ್ಪು ಕಳಿಸಲು ಪ್ಲಾನ್ ಮಾಡಿದ್ದಾರೆ. ಪಟ್ಟಕ್ಕಾಗಿ ದೆಹಲಿ ಯಾತ್ರೆಯಲ್ಲಿರುವ ಡಿಕೆ ಶಿವಕುಮಾರ್ ಹೇಗಾದರೂ ಮಾಡಿ ಕುರ್ಚಿ ಪಡೆಯಬೇಕು ಎಂದು ಹೈಕಮಾಂಡ್ ಹಿಂದೆ ಬಿದ್ದಿದ್ದಾರೆ.
ಬಜೆಟ್‌ನಲ್ಲಿ ಸಿಗುವ ಅನುದಾನಕ್ಕಿಂತ ಫಾರಿನ್ ಟೂರ್‌ನಲ್ಲಿ ಸಿಗುವ ‘ಸಮಾಧಾನ’ ದೊಡ್ಡದು ಅಂತ ಕೆಲ ಶಾಸಕರು ವಿಮಾನ ಹತ್ತಲು ರೆಡಿಯಾಗಿದ್ದಾರೆ. ಸಿದ್ದರಾಮಯ್ಯ ವರ್ಸಸ್ ಡಿಕೆಶಿ ಬಣಗಳ ರಾಜಕೀಯದ ಮಧ್ಯೆ ಬಜೆಟ್ ಕೇವಲ ಅಂಕಿ-ಅಂಶಗಳ ಆಟವಾಗಿದ್ರೆ, ಅಸಲಿ ಆಟವೆಲ್ಲಾ ಶಾಸಕರ ಹೈಜಾಕ್ ರಾಜಕಾರಣವಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಬರೀ “ಕುರ್ಚಿ ಉಳಿಸಿಕೊಳ್ಳುವ”, “ಕುರ್ಚಿ ಕಿತ್ತುಕೊಳ್ಳುವ” ಬೃಹನ್ನಾಟಕ ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿದೆ. ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ ಕಾಂಗ್ರೆಸ್ ಆಡಳಿತದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಅಧಿಕಾರಿಗಳು ಲಂಚವಿಲ್ಲದೇ ಯಾವುದೆ ಕೆಲಸ ಕಾರ್ಯಗಳನ್ನು ಮಾಡದ ಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ ಎಂದು ಆಕ್ರೋಶ ಹೊರಹಾಕಿದೆ..
ಅದೇನೇ ಹೇಳಿ, ಶಾಸಕರು ಫ್ಯಾಮಿಲಿ ಟ್ರಿಪ್, ಈಗ ಹೊಸದಾದ ದಾರಿ ಗೆ ರಿಬ್ಬನ್ ಕಟ್ ಮಾಡಿದೆ. ಇದು ಮತ್ತೊಂದು ಕಾಳಗಕ್ಕೆ ಶುಭಾರಂಭನಾ ಎಂಬ ಪ್ರಶ್ನೆಯೂ ಹುಟ್ಟುಹಾಕಿದೆ.
