Success Story: ಎಲ್ಲ ಕಡೆ ಸೋಲುಂಡು, ಜವಾರಿ ಕೋಳಿ ಸಾಕಾಣಿಕೆ ಉದ್ಯಮಕ್ಕೆ ಕೈಹಾಕಿದ ರೈತನ ಸಕ್ಸಸ್​ ಸ್ಟೋರಿ ಇದು!

| Updated By: ಸಾಧು ಶ್ರೀನಾಥ್​

Updated on: Dec 07, 2022 | 6:06 AM

ಕೃಷಿಯಲ್ಲಿ ಕೈಸುಟ್ಟುಕೊಂಡು ಸಾಲಸೋಲ ಮಾಡಿ ಜಮೀನು ಮಾರಿಕೊಂಡಿದ್ದ ರೈತ ವಿರೂಪಾಕ್ಷಪ್ಪ ಗೌಡಗೆ ಈಗ ಕೋಳಿ ಸಾಕಾಣಿಕೆ ಉದ್ಯಮ ಕೈಹಿಡಿದಿದೆ. ಇವರ ಬಳಿ ಟ್ರೈನಿಂಗ್ ಪಡೆದು ಇನ್ನಷ್ಟು ಯುವಕರು ಕೋಳಿ ಉದ್ಯಮ ಆರಂಭಿಸಿ ಜೀವನ ಕಟ್ಟಿಕೊಳ್ಳಲಿ ಅನ್ನೋ ಆಶಯವಿದೆ.

Success Story: ಎಲ್ಲ ಕಡೆ ಸೋಲುಂಡು, ಜವಾರಿ ಕೋಳಿ ಸಾಕಾಣಿಕೆ ಉದ್ಯಮಕ್ಕೆ ಕೈಹಾಕಿದ ರೈತನ ಸಕ್ಸಸ್​ ಸ್ಟೋರಿ ಇದು!
ಜವಾರಿ ಕೋಳಿ ಸಾಕಾಣಿಕೆ ಉದ್ಯಮಕ್ಕೆ ಕೈಹಾಕಿದ ರೈತನ ಸಕ್ಸಸ್​ ಸ್ಟೋರಿ ಇದು!
Follow us on

ಆ ರೈತ ನಾನಾ ರೀತಿಯ ಬೆಳೆಗಳನ್ನ ಬೆಳೆದು ಬಹಳಷ್ಟು ನಷ್ಟ ಅನುಭವಿಸಿದ್ದ. ಜಮೀನು ಲೀಸ್ ಗೆ ಪಡೆದು ಬೆಳೆ ಬೆಳೆಯಲು ಹೋಗಿ ಕೈಸುಟ್ಟುಕೊಂಡು ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದ. ಆದ್ರೆ ಈಗ ಆ ರೈತನಿಗೆ ಕೈ ಹಿಡಿದಿರುವುದು ಮಾತ್ರ ಕೋಳಿ ಸಾಕಾಣಿಕೆ ಉದ್ಯಮ! ಜವಾರಿ ಕೋಳಿಗಳನ್ನ ಸಾಕಾಣಿಕೆ (Poultry farming) ಮಾಡ್ತಾಯಿರುವ ಈ ರೈತ ನಿತ್ಯ ಮೊಟ್ಟೆಗಳನ್ನೆ ಮಾರಿ ಸಾವಿರಾರು ರೂಪಾಯಿ ಲಾಭ ಪಡೆಯುತ್ತಿದ್ದಾನೆ. ಹೇಗಿದೆ ಅವರ ಕೋಳಿ ಸಾಕಾಣಿಕೆ ಉದ್ಯಮ ಅಂತೀರಾ? ಈ ಸಕ್ಸಸ್​ ಸ್ಟೋರಿ (Success Story) ನೋಡಿ..

ಕೃಷಿಯಲ್ಲಿ ನಷ್ಟಕ್ಕೆ ಒಳಗಾಗಿದ್ದ ರೈತನ ಕೈಹಿಡಿದ ಕೋಳಿ ಸಾಕಾಣಿಕೆ ಉದ್ಯಮ.. ಜವಾರಿ ಕೋಳಿ ಸಾಕಾಣಿಕೆ ಮಾಡಿ ಭರ್ಜರಿ ಲಾಭ ಪಡೆಯುತ್ತಿರುವ ರೈತ.. ಜವಾರಿ ಕೋಳಿ ಮೊಟ್ಟೆ ಮಾರಿ ನಿತ್ಯ ಸಾವಿರಾರು ರೂ. ಆದಾಯ ಗಳಿಕೆ.. ಯಸ್ ಈ ಉದಾಹರಣೆಗಳು ಕಂಡು ಬಂದಿದ್ದು ಯಾದಗಿರಿ (Yadgir) ಜಿಲ್ಲೆಯ ವಡಗೇರ ತಾಲೂಕಿನ ಮಾಚನೂರ ಗ್ರಾಮದಲ್ಲಿ. ಹೌದು ಗ್ರಾಮದಲ್ಲಿ ಜವಾರಿ ಕೋಳಿಗಳನ್ನ ಸಾಕಾಣಿಕೆ ಮಾಡಿ ಭರ್ಜರಿಯಾಗಿ ಲಾಭ ಪಡೆಯುತ್ತಿರುವ ರೈತ ಯಾರು ವಿರೂಪಾಕ್ಷಪ್ಪ ಗೌಡ (Virupakshappa Gowda).

ಈ ವಿರೂಪಾಕ್ಷಪ್ಪ ಗೌಡ ಅವರು ತಕ್ಕಮಟ್ಟಿಗೆ ಜಮೀನು ಹೊಂದಿದ್ದಾರೆ. ಜಮೀನಿನಲ್ಲಿ ನಾನಾ ರೀತಿಯ ಬೆಳೆಗಳನ್ನ ಬೆಳೆಯಬೇಕು ಹೊಸ ಹೊಸ ಪ್ರಯತ್ನಗಳನ್ನ ಮಾಡಬೇಕು ಅಂತ ಕೈ ಹಾಕಿದವರು ಇವರು.. ಆದ್ರೆ ಬಹುತೇಕ ಎಲ್ಲಾ ಪ್ರಯತ್ನಗಳು ವಿಫಲವಾಗಿದ್ದು ಕೈತುಂಬಾ ಸಾಲ ಮಾಡಿಕೊಂಡಿದ್ದರು.. ಮುಂದೇನು ಮಾಡಬೇಕು ಅಂತ ಯೋಚಿಸುತ್ತಿದ್ದಾಗ ಕೊನೆಗೆ ಹೊಳೆದಿದ್ದು ಕೋಳಿ ಸಾಕಾಣಿಕೆಯ ಐಡಿಯಾ..

ಎಲ್ಲಾ ಪ್ರಯತ್ನಗಳನ್ನ ಮಾಡಿದ್ದೇನೆ. ಇದೊಂದು ಮಾಡಿಯೇ ಬಿಡೋಣಾ ಅಂತಾ ಪ್ಲಾನ್ ಮಾಡಿದ ವಿರೂಪಾಕ್ಷಪ್ಪ ಗೌಡ ಅವರು ಇದರಲ್ಲಿ ಭರ್ಜರಿ ಸಕ್ಸಸ್ ಆಗಿದ್ದಾರೆ. ಆರಂಭದಲ್ಲಿ ಜವಾರಿ ಕೋಳಿಗಳು ಮಾತ್ರ ಸಾಕಾಣಿಕೆ ಮಾಡಬೇಕು ಅಂತ ಪ್ಲಾನ್ ಮಾಡಿದ ವಿರೂಪಾಕ್ಷಪ್ಪ ಗೌಡ ಅವರು ಸುಮಾರು 700 ಕ್ಕೂ ಅಧಿಕ ಜವಾರಿ ಕೋಳಿ ಮರಿಗಳನ್ನ ಸಾಕಾಣಿಕೆ ಮಾಡಿದ್ದರು. ಈಗ ಎಲ್ಲಾ ಮರಿಗಳು ಬೆಳೆದಿವೆ, ಇದೆ ಜವಾರಿ ಕೋಳಿಗಳಿಂದ ನಿತ್ಯ ಸಾವಿರಾರು ರೂ. ಲಾಭ ಕೂಡ ಪಡೆಯುತ್ತಿದ್ದಾರೆ.. ಪ್ರತಿನಿತ್ಯ 250ಕ್ಕೂ ಅಧಿಕ ಮೊಟ್ಟೆಗಳನ್ನ ಮಾರಾಟ ಮಾಡುವ ಮೂಲಕ ನಿತ್ಯ 2,500 ಸಾವಿರ ಹಣವನ್ನ ಗಳಿಕೆ ಮಾಡಯತ್ತಾ ಇದ್ದಾರೆ.

ಇನ್ನು ಕೇವಲ ಜವಾರಿ ಕೋಳಿಗಳನ್ನ ಸಾಕಾಣಿಕೆ ಮಾಡಿದ್ರೆ ಆಗಲ್ಲ ಅಂತ ವಿರೂಪಾಕ್ಷಪ್ಪ ಗೌಡ ಅವರು ಬಿವಿ 83 ಎಂಬ ತಳಿಯ ಕೋಳಿಗನ್ನ ಸಾಕಾಣಿಕೆ ಮಾಡಲು ಪ್ರಾರಂಭಿಸಿದ್ದಾರೆ. ದಾವಣಗೆರೆಯಿಂದ ಸುಮಾರು 250 ಬಿವಿ 83 ತಳಿಯ ಕೋಳಿಗಳನ್ನ ಖರೀದಿ ಮಾಡಿಕೊಂಡು ಬಂದಿದ್ದಾರೆ.. ಕೋಳಿಗಳನ್ನ ಗೂಡಿನ ಸಮೇತವಾಗಿ ಪ್ರತಿಯೊಂದು ಕೋಳಿಗೆ 950 ರೂ. ಕೊಟ್ಟು ಖರೀದಿ ಮಾಡಿಕೊಂಡು ಬಂದಿದ್ದಾರೆ..

ಎರಡು ತಿಂಗಳ ಮರಿಗಳು ಇದ್ದಾಗ ಕೋಳಿಗಳನ್ನ ಖರೀದಿ ಮಾಡಿಕೊಂಡು ಬಂದಿದ್ರು ಈಗ 7 ತಿಂಗಳ ಕೋಳಿಗಳಾಗಿದ್ದು ಮೊಟ್ಟೆ ಕೊಡಲು ಆರಂಭಿಸಿವೆ. ಪ್ರತಿನಿತ್ಯ 230 ರಿಂದ 240 ವರೆಗೆ ಮೊಟ್ಟೆಗಳನ್ನ ಎಲ್ಲಾ ಕೋಳಿಗಳು ನೀಡುತ್ತಿವೆ.. ಹೀಗಾಗಿ ವಿರೂಪಾಕ್ಷಪ್ಪ ಗೌಡ ಅವರು ಯಾದಗಿರಿ ನಗರದ ಪ್ರಮುಖ ಸೂಪರ್ ಬಜಾರ್ ಗಳಿಗೆ ತಾವೆ ಖುದ್ದಾಗಿ ಹೋಗಿ ಮಾರಾಟ ಮಾಡಿ ಬರುತ್ತಾರೆ.

ಈ ಬಿವಿ 83 ಕೋಳಿಗಳ ಮೊಟ್ಟೆಯಿಂದ ಮರಿಗಳನ್ನ ಮಾಡಲು ಮಷೀನ್ ತಂದಿದ್ದಾರೆ. ಇದರಲ್ಲಿ ಸುಮಾರು 160 ಮೊಟ್ಟೆಗಳನ್ನ ಹಾಕಿದ್ದು 21 ದಿನಗಳ ಕಾಲ ಕಾವು ಪಡೆದು ಮರಿಗಳು ಆಗುತ್ತೆವೆ.. ಇದಾದ ಬಳಿಕ ಜವಾರಿ ಕೋಳಿಗಳ ಮೊಟ್ಟೆಗಳನ್ನ ಕಾವಿಗಾಗಿ ಇಡಲು ಪ್ಲಾನ್ ಮಾಡಿದ್ದಾರೆ.. ಇನ್ನು ಸಾಕಷ್ಟು ಕಡೆ ಇದೇ ವಿರೂಪಾಕ್ಷಪ್ಪ ಗೌಡ ಅವರು ಜವಾರಿಗಳು ಕೋಳಿಗಳನ್ನ ಮಾರಾಟ ಮಾಡುತ್ತಿದ್ದಾರೆ.

Also Read: ಇದು ಅರಕಲಗೂಡು ತಹಶೀಲ್ದಾರ್ ಶ್ರೀನಿವಾಸರ ಸಾಧನೆ! ಅನ್ನದಾತರ ಕಣ್ಣೀರು ಒರೆಸಿ, ಹತ್ತೇ ತಿಂಗಳಲ್ಲಿ 3,000 ಪೌತಿ ಖಾತೆ ವಿತರಣೆ ಮಾಡಿದರು

ಸದ್ಯ ಜವಾರಿಗಳಿಗೆ ಸಾಕಷ್ಟು ಡಿಮ್ಯಾಂಡ್ ಕೂಡ ಇದೆ. ಹೀಗಾಗಿ ಜವಾರಿ ಕೋಳಿಗಳಿಗೆ ಭರ್ಜರಿಯಾಗಿ ಬೆಲೆ ಕೂಡ ಸಿಗ್ತಾಯಿದೆ. ಇನ್ನು ಈ ಬಿವಿ 83 ಕೋಳಿಗಳು ನಿರಂತರವಾಗಿ ಸುಮಾರು 14 ತಿಂಗಳ ಕಾಲ ಮೊಟ್ಟೆಗಳನ್ನ ಕೊಡುತ್ತವೆ. ಬಳಿಕ ಈ ಕೋಳಿಗಳನ್ನ ಮಾರಾಟ ಮಾಡಲಾಗುತ್ತೆ. 14 ತಿಂಗಳುಗಳ ಕಾಲ ಮೊಟ್ಟೆಯನ್ನ ಕೊಟ್ಟು ಖರೀದಿಸಿ, ಬಂದ ಬೆಲೆಗೆ ಮಾರಾಟ ಕೂಡ ಆಗುತ್ತವೆ ಅಂತಾರೆ ವಿರೂಪಾಕ್ಷಪ್ಪ ಗೌಡ ಅವರು.

ಕೇವಲ 3 ಲಕ್ಷ ಖರ್ಚು ಮಾಡಿ ಉದ್ಯಮ ಆರಂಭಿಸಿದ ವಿರೂಪಾಕ್ಷಪ್ಪ ಗೌಡ ಅವರು ಸಾಕಷ್ಟು ಲಾಭವನ್ನ ಪಡೆಯುತ್ತಿದ್ದಾರೆ. ಇನ್ನು ಈ ವಿರೂಪಾಕ್ಷಪ್ಪ ಗೌಡ ಅವರು ಸಾಕಷ್ಟು ಯುವಕರಿಗೆ ಮಾದರಿಯಾಗಿದ್ದಾರೆ. ನಿತ್ಯ ಇವರ ಕೋಳಿ ಫಾರ್ಮ್ ಗೆ ಬರುವ ಯುವಕರಿಗೆ ಕೋಳಿ ಸಾಕಾಣಿಕೆ ಬಗ್ಗೆ ಟ್ರೈನಿಂಗ್ ಸಹ ಕೊಡ್ತಾಯಿದ್ದಾರೆ. ಹೀಗಾಗಿ ಸಾಕಷ್ಟು ಯುವಕರು ಈಗ ಕೋಳಿ ಸಾಕಾಣಿಕೆ ಮಾಡಲು ಉತ್ಸುಕರಾಗಿದ್ದಾರೆ.

ಒಟ್ನಲ್ಲಿ ಕೃಷಿಯಲ್ಲಿ ಕೈಸುಟ್ಟುಕೊಂಡು ಸಾಕಷ್ಟು ಸಾಲ ಮಾಡಿಕೊಂಡು ಜಮೀನು ಮಾರಿಕೊಂಡಿದ್ದ ರೈತ ವಿರೂಪಾಕ್ಷಪ್ಪ ಗೌಡಗೆ ಈಗ ಕೋಳಿ ಸಾಕಾಣಿಕೆ ಉದ್ಯಮ ಕೈಹಿಡಿದಿದೆ. ವಿರೂಪಾಕ್ಷಪ್ಪ ಗೌಡ ಅವರ ಬಳಿ ಟ್ರೈನಿಂಗ್ ಪಡೆದು ಇನ್ನಷ್ಟು ಯುವಕರು ಕೋಳಿ ಉದ್ಯಮ ಆರಂಭಿಸಿ ಜೀವನ ಕಟ್ಟಿಕೊಳ್ಳಲಿ ಅನ್ನೋ ಆಶಯವಿದೆ. (ವರದಿ: ಅಮೀನ್ ಹೊಸುರ್, ಟಿವಿ 9, ಯಾದಗಿರಿ)

Also Read: Jangi Kushti: ಭಾಲ್ಕಿ -ದೂರದೂರುಗಳಿಂದ ಬಂದಿದ್ದ ಕುಸ್ತಿ ಪಟುಗಳು ಖುಷಿ ಖುಷಿಯಿಂದಲೇ ಕುಸ್ತಿಯಾಡಿ ಬಹುಮಾನ ಪಡೆದರು!