ಪುರಾವೆ ಇಲ್ಲದ ರಾಚೇಶ್ವರರ ಹೆಸರಲ್ಲಿ ಮೋಸ ಆರೋಪ, ಕೊಡೆಕಲ್ ವಿರಕ್ತಮಠದ ಶ್ರೀಗಳ ಪ್ರವಚನಕ್ಕೆ ಬ್ರೇಕ್

ಕೊಡಕಲ್ ರಾಚೇಶ್ವರ ಮಹಾ ಶಿವಯೋಗಿಗಳ 555ನೇ ಪುಣ್ಯ ಸ್ಮರಣೆ ಹಾಗೂ ಶ್ರಾವಣ ಮಾಸ ಹಿನ್ನೆಲೆ ವಿರಕ್ತಮಠದ ನೀಲಕಂಠ ಸ್ವಾಮೀಜಿ ಅವರು ಪ್ರವಚನ ನಡೆಸಲು ಮುಂದಾಗಿದ್ದಾರೆ. ಆದರೆ, ಇದಕ್ಕೆ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯಿಂದ ವಿರೋಧ ವ್ಯಕ್ತವಾದ ಹಿನ್ನೆಲೆ ಹುಣಸಗಿ ತಹಶೀಲ್ದಾರ್ ಅವರು ಶ್ರೀಗಳ ಪ್ರವಚನಕ್ಕೆ ತಡೆ ನೀಡಿದ್ದಾರೆ.

ಪುರಾವೆ ಇಲ್ಲದ ರಾಚೇಶ್ವರರ ಹೆಸರಲ್ಲಿ ಮೋಸ ಆರೋಪ, ಕೊಡೆಕಲ್ ವಿರಕ್ತಮಠದ ಶ್ರೀಗಳ ಪ್ರವಚನಕ್ಕೆ ಬ್ರೇಕ್
ಕೊಡೆಕಲ್ ವಿರಕ್ತಮಠದ ಶ್ರೀಗಳ ಪ್ರವಚನಕ್ಕೆ ತಡೆ ನೀಡಿದ ಹುಣಸಗಿ ತಹಶೀಲ್ದಾರ್
Follow us
ಅಮೀನ್​ ಸಾಬ್​
| Updated By: Rakesh Nayak Manchi

Updated on: Aug 17, 2023 | 7:07 PM

ಯಾದಗಿರಿ, ಆಗಸ್ಟ್ 17: ಕೊಡಕಲ್ ರಾಚೇಶ್ವರ ಮಹಾ ಶಿವಯೋಗಿಗಳ 555ನೇ ಪುಣ್ಯ ಸ್ಮರಣೆ ಹಾಗೂ ಶ್ರಾವಣ ಮಾಸ ಹಿನ್ನೆಲೆ ವಿರಕ್ತಮಠದ ನೀಲಕಂಠ ಸ್ವಾಮೀಜಿ ಅವರು ಪ್ರವಚನ ನಡೆಸಲು ಮುಂದಾಗಿದ್ದಾರೆ. ಆದರೆ, ಇದಕ್ಕೆ ವೀರಶೈವ ಲಿಂಗಾಯತ (Veerashaiva Lingayat) ಸಂಘಟನಾ ವೇದಿಕೆಯಿಂದ ವಿರೋಧ ವ್ಯಕ್ತವಾದ ಹಿನ್ನೆಲೆ ಹುಣಸಗಿ ತಹಶೀಲ್ದಾರ್ ಅವರು ಶ್ರೀಗಳ ಪ್ರವಚನಕ್ಕೆ ತಡೆ ನೀಡಿದ್ದಾರೆ. ಅಲ್ಲದೆ, ಪ್ರವಚನ ಮಾಡುವ ಕಡೆಗಳಲೆಲ್ಲ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ.

ರಾಚೇಶ್ವರ ಮಹಾ ಶಿವಯೋಗಿಗಳ ಪುಣ್ಯ ಸ್ಮರಣೆ ಮತ್ತು ಶ್ರಾವಣ ಮಾಸ ಹಿನ್ನೆಲೆ ನೀಲಕಂಠ ಸ್ವಾಮೀಜಿ ಪ್ರವಚನಕ್ಕೆ ಮುಂದಾಗಿದ್ದರು. ಗ್ರಾಮಗಳಿಗೆ ಹೋಗಿ ಪ್ರವಚನ ನಡೆಸುವುದರ ಜೊತೆಗೆ ಮದ್ಯ ಸೇವನೆ ಮಾಡುವವರ ಮನ ಪರಿವರ್ತನೆ ಮಾಡಲು ಪ್ಲಾನ್ ಹಾಕಿಕೊಂಡಿದ್ದರು. ಆದರೆ, ಇದಕ್ಕೆ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಆಕ್ಷೇಪ ವ್ಯಕ್ತಪಡಿಸಿದೆ.

ನೀಲಕಂಠ ಅವರು ಪುರಾವೆ ಇಲ್ಲದ ರಾಚೇಶ್ವರರ ಹೆಸರಲ್ಲಿ ಮೋಸ ಮಾಡುತ್ತಿದ್ದಾರೆ. ನೀಲಕಂಠ ಎರಡು ಮದುವೆಯಾಗಿದ್ದು ವಿರಕ್ತದ ಯಾವುದೇ ನಿಯಮ ಪಾಲನೆ ಮಾಡಿಲ್ಲ.‌ ಜನರಿಗೆ ಮೋಸ ಮಾಡುತ್ತಿದ್ದಾರೆ, ಪ್ರವಚನಕ್ಕೆ ಅವಕಾಶ ಕೊಡಬಾರದು ಎಂದು ಹುಣಸಗಿ ತಹಶೀಲ್ದಾರ್ ಅವರಿಗೆ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ದೂರು ನೀಡಿತ್ತು.

ಇದನ್ನೂ ಓದಿ: ಸ್ಮಶಾಣದಲ್ಲಿ ಪಿಶಾಚಿ ಕುಣಿದಂತೆ ಆಗುತ್ತೆ -ಸಿದ್ದರಾಮಯ್ಯ ಸರ್ಕಾರದ ಬಗ್ಗೆ ಭವಿಷ್ಯ ಹೇಳಿದ ಕೋಡಿಮಠ ಸ್ವಾಮೀಜಿ

ದೂರು ಆಧರಿಸಿ ಪ್ರವಚನಕ್ಕೆ ಅವಕಾಶ ನೀಡದ ತಹಶೀಲ್ದಾರ್ ಅವರು, ಸಹಾಯಕ ಆಯುಕ್ತರ ಗಮನಕ್ಕೆ ತಂದ ಬಳಿಕ ಪ್ರವಚನ ನಡೆಸಲು ಯೋಜಿಸಿದ ಸ್ಥಳಗಳೆಲ್ಲಾ 144 ಸೆಕ್ಷನ್ ಜಾರಿ ಮಾಡಿದ್ದಾರೆ. ಚುನಾವಣೆಗೂ ಮುನ್ನ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಮಾರಮಾರಿ ಆಗಿತ್ತು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಒಂದು ತಿಂಗಳಗಳ ಕಾಲ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ.

ಆಗಸ್ಟ್ 17 ರಿಂದ ಸೆಪ್ಟೆಂಬರ್ 17 ರ ವರೆಗೆ ನಿಷೇಧಾಜ್ಞೆ ಜಾರಿ ಮಾಡಿ ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್ ಆದೇಶ ಹೊರಡಿಸಿದ್ದಾರೆ. ಹುಣಸಗಿ ತಾಲೂಕಿನ ಮಾರನಾಳ್ ಗ್ರಾಮದಲ್ಲಿ ಅಗಸ್ಟ್ 17 ರಿಂದ 21 ವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದ್ದರೆ, ಬೂದಿಹಾಳ್ ಗ್ರಾಮದಲ್ಲಿ ಆಗಸ್ಟ್ 22 ರಿಂದ 26 ವರೆಗೆ, ಹಗರಟಗಿಯಲ್ಲಿ 27 ರಿಂದ 31 ವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ.

ಸೆಪ್ಟೆಂಬರ್ 1 ರಿಂದ 5 ವರೆಗೆ ರಾಜನಕೊಳೂರ ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರಲಿದ್ದು, 6 ರಿಂದ 10 ರ ವರೆಗೆ ಯಣ್ಣಿ ವಡಗೇರ ಹಾಗೂ ಕೊಡೆಕಲ್ ಗ್ರಾಮದಲ್ಲಿ 11 ರಿಂದ 17 ವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ.

ಇದೇ ವಿಚಾರವಾಗಿ ಸುರಪುರದ ಮಾಜಿ ಶಾಸಕ ರಾಜುಗೌಡ ಬೆಂಬಲಿಗರು ಹಾಗೂ ಹಾಲಿ ಶಾಸಕ ರಾಜಾ ವೆಂಕಟಪ್ಪ ನಾಯಕ ಬೆಂಬಲಿಗರು ಎಂಟ್ರಿ ಕೊಡುವ ಸಾಧ್ಯತೆ ಇದೆ. ನೀಲಕಂಠ ಸ್ವಾಮಿ ಪರ ರಾಜುಗೌಡ ಬೆಂಬಲಿಗರು, ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಪರ ರಾಜಾ ವೆಂಕಟಪ್ಪ ನಾಯಕ ಬೆಂಬಲಿಗರು ಬೆಂಬಲ ಕೊಡುವ ಸಾಧ್ಯತೆ ಇದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು