ರೈತ ಮಹಿಳೆ‌ ಮೇಲೆ ಲೇಡಿ ಪಿಎಸ್ಐ ದರ್ಪ; ಗುರುಮಿಠಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು

ಹಿಂಗಾರು ಬಿತ್ತನೆಯ ಬೀಜ ಪಡೆಯಲು ಬಂದಿದ್ದ ವೇಳೆ ಸಾಲಾಗಿ ನಿಂತಿಲ್ಲ ಎನ್ನುವ ಕಾರಣಕ್ಕೆ ಜಾಡಿಸಿ ತಳ್ಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸದ್ಯ ಲೇಡಿ ಪಿಎಸ್ಐ ದರ್ಪಕ್ಕೆ ಸಾರ್ವಜನಿಕ ವಲಯದಲ್ಲಿ ಬಾರಿ ಆಕ್ರೋಶ ವ್ಯಕ್ತವಾಗಿದೆ.

ರೈತ ಮಹಿಳೆ‌ ಮೇಲೆ ಲೇಡಿ ಪಿಎಸ್ಐ ದರ್ಪ; ಗುರುಮಿಠಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು
ಪಿಎಸ್ಐ ಗಂಗಮ್ಮ
Edited By:

Updated on: Sep 29, 2021 | 10:39 AM

ಯಾದಗಿರಿ: ರೈತ ಮಹಿಳೆಯ ಮೇಲೆ ಮಹಿಳಾ ಪಿಎಸ್‌ಐ ದರ್ಪ ತೋರಿಸಿದ್ದು, ಲೇಡಿ ಪಿಎಸ್‌ಐ ತಳ್ಳಿದ್ದ ಹಿನ್ನೆಲೆ ರೈತ ಮಹಿಳೆ ಗಾಯಗೊಂಡಿದ್ದಾರೆ. ಮಹಿಳೆ ಕೈ, ಬೆನ್ನಿನ ಭಾಗದಲ್ಲಿ ಗಂಭೀರ ಗಾಯವಾಗಿದೆ. ಸದ್ಯ ಗಾಯಾಳು ಮಹಿಳೆ ಗುರುಮಿಠಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯಾದಗಿರಿ ಜಿಲ್ಲೆ ಗುರುಮಿಠಕಲ್ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಿನ್ನೆ ಪಿಎಸ್‌ಐ ಮಹಿಳೆಯನ್ನು ತಳ್ಳಿದ್ದಾರೆ.

ಶೆಂಗಾ ಬೀಜ ಪಡೆಯಲು ಬಂದಿದ್ದ ಮಹಿಳೆಯನ್ನು ಲೇಡಿ ಪಿಎಸ್ಐ ತಳ್ಳಿದ್ದು, ಮಾರುದ್ದ ಕುರ್ಚಿ ಮುರಿಯುವ ಹಾಗೆ ಹೋಗಿ ಮಹಿಳೆ ಬಿದ್ದಿದ್ದಾಳೆ. ಗುರುಮಠಕಲ್‌ ಠಾಣೆಯ ಪಿಎಸ್ಐ ಗಂಗಮ್ಮ ರೈತ ಮಹಿಳೆ ಮಣೆಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. ಹಿಂಗಾರು ಬಿತ್ತನೆಯ ಬೀಜ ಪಡೆಯಲು ಬಂದಿದ್ದ ವೇಳೆ ಸಾಲಾಗಿ ನಿಂತಿಲ್ಲ ಎನ್ನುವ ಕಾರಣಕ್ಕೆ ಜಾಡಿಸಿ ತಳ್ಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸದ್ಯ ಲೇಡಿ ಪಿಎಸ್ಐ ದರ್ಪಕ್ಕೆ ಸಾರ್ವಜನಿಕ ವಲಯದಲ್ಲಿ ಬಾರಿ ಆಕ್ರೋಶ ವ್ಯಕ್ತವಾಗಿದೆ.

ಬೇಕೆಂದು ಮಹಿಳೆಯನ್ನು ತಳ್ಳಿಲ್ಲ ಎಂದ ಪಿಎಸ್ಐ
ರೈತ ಮಹಿಳೆ ಮೇಲೆ ಮಹಿಳಾ ಪಿಎಸ್ಐ ದರ್ಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಾದಗಿರಿ ಎಸ್‌ಪಿ ಡಾ.ವೇದಮೂರ್ತಿ ಪ್ರತಿಕ್ರಿಯೆ ನೀಡಿದ್ದು, ತನಿಖೆ ನಡೆಯುತ್ತಿದೆ. ಪಿಎಸ್‌ಐ ತಪ್ಪು ಮಾಡಿದ್ದರೆ ಕ್ರಮ ಕೈಗೊಳ್ಳಲಾಗುತ್ತದೆ. ತನಿಖೆ ವೇಳೆ ಬೇಕೆಂದು ಮಹಿಳೆಯನ್ನು ತಳ್ಳಿಲ್ಲ ಎಂದು ಮಹಿಳಾ ಪಿಎಸ್ಐ ತಿಳಿಸಿದ್ದಾರೆ ಎಂದು ಹೇಳಿದ್ದಾರೆ.

ರೈತ ಸಂಪರ್ಕ ಕೇಂದ್ರದ ಬಳಿ ಜನ ಕ್ಯೂನಲ್ಲಿ ನಿಂತಿದ್ದರು. ಈ ವೇಳೆ ಮಹಿಳೆ ಏಕಾಏಕಿ ಮುಂದೆ ನುಗ್ಗಿ ಬಂದಿದ್ದರು. ಇದೇ ಕಾರಣಕ್ಕೆ ಕ್ಯೂನಲ್ಲಿ ಇದ್ದ ಜನ ಗಲಾಟೆ ಮಾಡಿದರು. ಈ ವೇಳೆ ಮಹಿಳೆಯನ್ನು ಹಿಂದಕ್ಕೆ ಹೋಗಲು ಹೇಳಿದರು. ಮಹಿಳೆ ಹೋಗದ ಹಿನ್ನೆಲೆ ಪಿಎಸ್‌ಐ ತಳ್ಳಿದ್ದಾರೆ. ಹೀಗಾಗಿ ಮಹಿಳಾ ಪಿಎಸ್‌ಐಗೆ ಎಚ್ಚರಿಕೆ ನೀಡಿದ್ದೇನೆ ಎಂದು ಯಾದಗಿರಿ ಎಸ್‌ಪಿ ಡಾ.ವೇದಮೂರ್ತಿ ತಿಳಿಸಿದ್ದಾರೆ.

ಇದನ್ನೂ ಓದಿ:
KGF: ಕೆಜಿಎಫ್ ಪೊಲೀಸ್​ ವರಿಷ್ಠಾಧಿಕಾರಿ ಗನ್ ಮ್ಯಾನ್ ಮೇಲೆ ಹಲ್ಲೆ; ಐವರು ದುಷ್ಕರ್ಮಿಗಳು ಅಂದರ್​ ಆದರು

ಮೈಸೂರು: ಪಾರ್ಕ್​ನಲ್ಲಿ ಮೂತ್ರ ವಿಸರ್ಜನೆ ಮಾಡದಂತೆ ಬುದ್ಧಿ ಹೇಳಿದ ಕಾನ್ಸ್​ಟೇಬಲ್​ ಮೇಲೆ ಹಲ್ಲೆ

YouTube video player

Published On - 9:32 am, Wed, 29 September 21

TV9 Web

TV9 Kannada

Read More
Loading...
Unable to load recommendations.
Follow Us