KGF: ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿ ಗನ್ ಮ್ಯಾನ್ ಮೇಲೆ ಹಲ್ಲೆ; ಐವರು ದುಷ್ಕರ್ಮಿಗಳು ಅಂದರ್ ಆದರು
ಇಲಕ್ಕಿಯಾ ಅವರು ಭಾನುವಾರ ರಾತ್ರಿ ಕೆಜಿಎಫ್‌ನ ಅಜ್ಜಪಲ್ಲಿ ರಸ್ತೆಯಲ್ಲಿ ವಾಯುವಿಹಾರಕ್ಕೆ ಹೋಗಿದ್ದಾಗ 5 ಮಂದಿ ದುಷ್ಕರ್ಮಿಗಳು ಬೈಕ್‌ಗಳಲ್ಲಿ ಹಿಂಬಾಲಿಸಿ ಬಂದು ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ದರೋಡೆಗೆ ಯತ್ನಿಸಿದ್ದಾರೆ ಎಂದು ಸೋಮವಾರ ಸಂಜೆ ವದಂತಿ ಹಬ್ಬಿತ್ತು.
ಕೋಲಾರ ಜಿಲ್ಲೆಯ ಕೆಜಿಎಫ್ ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಇಲಕ್ಕಿಯಾ ಕರುಣಾಗರನ್ ಅವರ ಅಂಗರಕ್ಷಕನ ಮೇಲೆ ದುಷ್ಕರ್ಮಿಗಳು ಭಾನುವಾರ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಮುನಿರತ್ನಂ ಹಲ್ಲೆಗೊಳಗಾದ ಗನ್ ಮ್ಯಾನ್. ಭಾನುವಾರ ಸಂಜೆ ಬಂಗಾರಪೇಟೆಯಿಂದ ಬೈಕ್ ನಲ್ಲಿ ಕೆಜಿಎಫ್ ಗೆ ವಾಪಸ್ಸಾಗುವ ವೇಳೆ, ಅಜ್ಜಪ್ಪಲ್ಲಿ ಬಳಿ ಬೈಕ್ ಅಡ್ಡಗಟ್ಟಿದ ಐವರು ಚಾಕು ತೋರಿಸಿ ಹಲ್ಲೆ ಮಾಡಿದ್ದಾರೆ. ಈ ವೇಳೆ ಗಾಯಗೊಂಡಿದ್ದ ಮುನಿರತ್ನಂ ಅವರನ್ನು ಕೆಜಿಎಫ್ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ. ಈ ವೇಳೆ ಮುನಿರತ್ನಂ ದುಷ್ಕರ್ಮಿಗಳ ಬೈಕ್ ನಂಬರ್ ನೆನಪಿನಲ್ಲಿಟ್ಟುಕೊಂಡಿದ್ದರ ಫಲವಾಗಿ ಕೆಲವೇ ಗಂಟೆಗಳಲ್ಲಿ ಹಲ್ಲೆ ಮಾಡಿದ್ದ ಐವರು ಆರೋಪಗಳನ್ನು ಬಂಧಿಸಲಾಗಿದೆ.
ಕೆಜಿಎಫ್ ಎಸ್ಪಿ ಮೇಲೆ ಹಲ್ಲೆ ಮಾಡಲಾಗಿದೆ ಎಂಬ ವದಂತಿ..
ಕೆಜಿಎಫ್ ಎಸ್ಪಿ ಇಲಕ್ಕಿಯಾ ಕರುಣಾಗರನ್ ಅವರ ಗನ್ ಮ್ಯಾನ್ ಮೇಲೆ ಹಲ್ಲೆ ವಿಚಾರ ಎಸ್ಪಿ ಮೇಲೆ ದುಷ್ಕರ್ಮಿಗಳು ಅಟ್ಯಾಕ್ ಮಾಡಿದ್ರಾ ಎಂದು ವದಂತಿ ಹಬ್ಬಿತ್ತು,ವದಂತಿಗಳನ್ನು ತಳ್ಳಿಹಾಕಿದ ಎಸ್ಪಿ ಇಲಕ್ಕಿಯಾ ಅವರು ತಮ್ಮ ಬೆಂಗಾವಲು ಸಿಬ್ಬಂದಿ ಮೇಲೆ ಹಲ್ಲೆ ನಡೆದಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಏನದು ವದಂತಿ.. ವದಂತಿ ಹರಡುವುದಕ್ಕೆ ಕಾರಣ ಏನು..?
ಇಲಕ್ಕಿಯಾ ಅವರು ಭಾನುವಾರ ರಾತ್ರಿ ಕೆಜಿಎಫ್‌ನ ಅಜ್ಜಪಲ್ಲಿ ರಸ್ತೆಯಲ್ಲಿ ವಾಯುವಿಹಾರಕ್ಕೆ ಹೋಗಿದ್ದಾಗ 5 ಮಂದಿ ದುಷ್ಕರ್ಮಿಗಳು ಬೈಕ್‌ಗಳಲ್ಲಿ ಹಿಂಬಾಲಿಸಿ ಬಂದು ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ದರೋಡೆಗೆ ಯತ್ನಿಸಿದ್ದಾರೆ ಎಂದು ಸೋಮವಾರ ಸಂಜೆ ವದಂತಿ ಹಬ್ಬಿತ್ತು.
ಈ ಕುರಿತು ಪ್ರತಿಕ್ರಿಯಿಸಿದ ಇಲಕ್ಕಿಯಾ ಅವರು, ‘ನನ್ನ ಬೆಂಗಾವಲು ಸಿಬ್ಬಂದಿ ಮುನಿರತ್ನ ಅವರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಚಿನ್ನಾಭರಣ ದೋಚಲು ಯತ್ನಿಸಿದ್ದಾರೆ. ಘಟನೆ ನಡೆದಿರುವ ಅಜ್ಜಪಲ್ಲಿ ರಸ್ತೆಯಲ್ಲಿ ನಾನು ಪ್ರತಿನಿತ್ಯ ಸಂಜೆ ವಾಯುವಿಹಾರಕ್ಕೆ ಹೋಗುತ್ತಿದ್ದೆ. ಹೀಗಾಗಿ ನನ್ನ ಮೇಲೆಯೇ ಹಲ್ಲೆ ನಡೆದಿದೆ ಎಂಬ ವದಂತಿ ಹಬ್ಬಿದೆ’ ಎಂದು ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದರು.
ಘಟನೆ ಸಂಬಂಧ ಐವರು ಆರೋಪಿಗಳ ಅರೆಸ್ಟ್..!
ಘಟನೆ ಸಂಬಂಧ ಕಾರ್ಯ ಪ್ರೌರುತ್ತರಾದ ಉರಿಗಾಂ ಪೊಲೀಸ್ ಠಾಣಾ ಸರ್ಕಲ್ ಇನ್ಸ್ ಸ್ಪೆಕ್ಟರ್ ವೆಂಕಟರಮಣಪ್ಪ ಹಾಗೂ ಸಿಬ್ಬಂದಿ ಘಟನೆ ನಡೆದ ಕೆಲವೇ ಘಂಟೆಗಳಲ್ಲಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರು ಅವಿನಾಶ್ ರಾಜ್, ಸ್ಯಾಮ್ ಸ್ಟೀಫನ್, ರಂಜಿತ್, ಅಜಯ್, ಪ್ರಕಾಶ್, ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಮದ್ದೂರು: ಮಾಜಿ ಪೊಲೀಸಪ್ಪನ ಪ್ರತಿಷ್ಠೆ, ದೊಡ್ಡರಸಿನಕೆರೆ ಗ್ರಾಮದಲ್ಲಿ ದೇಗುಲಕ್ಕೆ ಬೀಗ, ಬೀದಿಯಲ್ಲೇ ಉಳಿದ ಪವಾಡ ಬಸವ
(Attack on kgf sp gunman 5 youths arrested)
Published On - 9:39 am, Tue, 28 September 21