ಪ್ರೀತಿಸಿ ಮದುವೆಯಾದ ಜೋಡಿಯಿಂದ ಆತ್ಮಹತ್ಯೆ ಬೆದರಿಕೆ! ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟ ನವ ದಂಪತಿ
ಬೆಂಗಳೂರಿನಲ್ಲಿ ಓದುವಾಗ ಪರಸ್ಪರ ಪ್ರೀತಿಸುತ್ತಿದ್ದರು. ಬೆಂಗಳೂರಿನಲ್ಲಿ ಯುವತಿ ಪೋಷಕರು ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದರು. ಇದೀಗ ಪೋಷಕರು ಕಿರುಕುಳ ನೀಡುತ್ತಿದ್ದಾರೆ ಅಂತ ಯುವತಿ ಆರೋಪಿಸಿದ್ದಾಳೆ.
ಯಾದಗಿರಿ: ಪ್ರೀತಿಸಿ (Love) ಮದುವೆಯಾದ ನವ ಜೋಡಿಯೊಂದು ಆತ್ಮಹತ್ಯೆ (Suicide) ಮಾಡಿಕೊಳ್ಳುವುದಾಗಿ ಬೆದರಿಸಿ ಸಾಮಾಜಿಕ ಜಾಲತಾಣದಲ್ಲಿ (Social Media) ವಿಡಿಯೋ ಹರಿಬಿಟ್ಟಿದೆ. ಯುವತಿಯ ಪೋಷಕರು, ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ವಿಡಿಯೋದಲ್ಲಿ ಆರೋಪಿಸಿದ್ದಾರೆ. ಯಾದಗಿರಿ ತಾಲೂಕಿನ ಹಳಗೇರ ನಿವಾಸಿ ಭೀಮರಾಯ ಮತ್ತು ಉತ್ತರ ಕನ್ನಡ ಜಿಲ್ಲೆಯ ಚಂದ್ರಕಲಾ ಪ್ರೀತಿಸಿ ಮದುವೆಯಾಗಿದ್ದರು. ಕಳೆದ ಜನವರಿ 31 ರಂದು ನೋಂದಣಿ ಕಚೇರಿಯಲ್ಲಿ ಮದುವೆಯಾಗಿದ್ದರು. ಆದರೆ ಪೋಷಕರು, ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಓದುವಾಗ ಪರಸ್ಪರ ಪ್ರೀತಿಸುತ್ತಿದ್ದರು. ಬೆಂಗಳೂರಿನಲ್ಲಿ ಯುವತಿ ಪೋಷಕರು ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದರು. ಇದೀಗ ಪೋಷಕರು ಕಿರುಕುಳ ನೀಡುತ್ತಿದ್ದಾರೆ ಅಂತ ಯುವತಿ ಆರೋಪಿಸಿದ್ದಾಳೆ. ಕಿರುಕುಳದಿಂದ ಮನನೊಂದು ಆತ್ಮಹತ್ಯೆಯ ಬೆದರಿಕೆ ಹಾಕಿದ್ದಾರೆ.
ಸರ್ಕಾರಿ ಶಾಲೆಯಲ್ಲಿ ಕಂಪ್ಯೂಟರ್, ಪ್ರಿಂಟರ್ ಕಳವು: ಬೆಳಗಾವಿ: ಸರ್ಕಾರಿ ಶಾಲೆಯಲ್ಲಿ ಕಂಪ್ಯೂಟರ್, ಪ್ರಿಂಟರ್ ಕಳುವಾಗಿದ್ದು, ಸಂಬರಗಿಯ ಸರ್ಕಾರಿ ಮರಾಠಿ ಪ್ರಾಥಮಿಕ ಶಾಲೆಯಲ್ಲಿ ಘಟನೆ ನಡೆದಿದೆ. ಕಂಪ್ಯೂಟರ್, ಪ್ರಿಂಟರ್ ಸೇರಿದಂತೆ ಶಾಲೆಯ ದಾಖಲಾತಿಯೂ ಕಳ್ಳತನವಾಗಿದೆ. ಘಟನೆಯಿಂದ ಗ್ರಾಮದಲ್ಲಿ ಆತಂಕ ವಾತಾವರಣ ನಿರ್ಮಾಣವಾಗಿದೆ. ಸದ್ಯ ಅಥಣಿ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.
ಕಳ್ಳತನ ಆರೋಪಿಗಳ ಬಂಧನ: ತುಮಕೂರು: ಪಾವಗಡ ತಾಲೂಕಿನ ಹಲವೆಡೆ ಮನೆ ಕಳ್ಳತನ ಮಾಡುತ್ತಿದ್ದ ಆರೋಪಿಗಳು ಬಂಧನಕ್ಕೊಳಗಾಗಿದ್ದಾರೆ. ಐವಾರ್ಲಹಳ್ಳಿ ಗ್ರಾಮದ ಜಯಪ್ರಕಾಶ್ ನಾಯ್ಕ್, ಲೋಕೇಶ್, ದೇವರಾಜ್ ಬಂಧಿತರು. ಬಂಧಿತರಿಂದ 11.60 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಹಾಗೂ ಬೈಕ್ ವಶಕ್ಕೆ ಪಡೆಯಲಾಗಿದೆ. ಕಳೆದ 2021 ಸೆಪ್ಟೆಂಬರ್ನಲ್ಲಿ ಸೇವಾಲಾಲ್ ಪುರ ಗ್ರಾಮದಲ್ಲಿ ಕಳವು ಮಾಡಿದ್ದರು. ಜೊತೆಗೆ ಪಾವಗಡ ಮಧುಗಿರಿ ತಾಲೂಕಿನ 8 ಮನೆಗಳಲ್ಲಿ ಕಳ್ಳತನ ಮಾಡಿದ್ದರು. ಕಳವು ಮಾಡಿದ್ದ ಆಭರಣಗಳನ್ನು ಮಹೇಶ್ ಎಂಬಾತರಿಗೆ ಮಾರಾಟ ಮಾಡಿದ್ದರು.
ಇದನ್ನೂ ಓದಿ
ಭಾರತದಲ್ಲಿ ಕೊವಿಡ್ 19 ಮೂರನೇ ಅಲೆ ಮಾರ್ಚ್ ತಿಂಗಳಷ್ಟೊತ್ತಿಗೆ ಕಡಿಮೆಯಾಗಲಿದೆ: ಐಸಿಎಂಆರ್ ಆರೋಗ್ಯ ತಜ್ಞರ ವರದಿ
ಯುವತಿಗೆ ಮೆಸೇಜ್ ಮಾಡಿದಕ್ಕೆ ದೇವನಹಳ್ಳಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ! ನಾಲ್ವರು ಅರೆಸ್ಟ್
Published On - 10:43 am, Sat, 5 February 22