ಶಾಸಕ ಶರಣಗೌಡ ಕಂದಕೂರ​​ ಹೇಳಿಕೆಗೆ ಆಕ್ರೋಶ: ಬೆಂಕಿ ಹಚ್ಚಿ ಎಂದು ನೂರಾರು ಟಿಪ್ಪರ್​​ ಸಮೇತ ಬಂದ ಮಾಲೀಕರು

ಜೆಡಿಎಸ್ ಶಾಸಕ ಶರಣಗೌಡ ಕಂದಕೂರ​​ ಹೇಳಿರುವ ಅದೊಂದು ಹೇಳಿಕೆಯಿಂದ ಯಾದಗಿರಿಯಲ್ಲಿ ಟಿಪ್ಪರ್ ಮಾಲೀಕರು ಸಿಡಿದೆದಿದ್ದಾರೆ. ಬಹಿರಂಗ ಕ್ಷಮೆ ಕೇಳದ ಕಾರಣ 250ಕ್ಕೂ ಹೆಚ್ಚು ಟಿಪ್ಪರ್‌ಗಳೊಂದಿಗೆ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಅಕ್ರಮ ಮರಳು ದಂಧೆ ತಡೆಯುವ ಆಕ್ರೋಶದಲ್ಲಿ ಶಾಸಕರು ಈ ಹೇಳಿಕೆ ನೀಡಿದ್ದರೂ, ಮಾಲೀಕರು ಈಗ ಶಾಸಕರ ವಿರುದ್ಧ ದೂರು ದಾಖಲಿಸಲು ಆಗ್ರಹಿಸಿದ್ದಾರೆ.

ಶಾಸಕ ಶರಣಗೌಡ ಕಂದಕೂರ​​ ಹೇಳಿಕೆಗೆ ಆಕ್ರೋಶ: ಬೆಂಕಿ ಹಚ್ಚಿ ಎಂದು ನೂರಾರು ಟಿಪ್ಪರ್​​ ಸಮೇತ ಬಂದ ಮಾಲೀಕರು
ಟಿಪ್ಪರ್ ಮಾಲೀಕರ ಪ್ರತಿಭಟನೆ
Image Credit source: tv9 kannada
Edited By:

Updated on: Oct 12, 2026 | 4:28 PM

ಮುಖ್ಯಾಂಶಗಳು

  • ಶಾಸಕ ಶರಣಗೌಡ ಕಂದಕೂರ ವಿರುದ್ಧ ಬೃಹತ್ ಪ್ರತಿಭಟನೆ
  • ಶರಣಗೌಡ ಕಂದಕೂರ ಹೇಳಿಕೆ ಸಿಡಿದೆದ್ದ ಟಿಪ್ಪರ್​ ಮಾಲೀಕರ ಸಂಘ
  • ಶಾಸಕರ ವಿರುದ್ಧ ದೂರು ದಾಖಲಿಸುವಂತೆ ಆಗ್ರಹ

ಯಾದಗಿರಿ, ಅಕ್ಟೋಬರ್​​ 12: ‘ಟಿಪ್ಪರ್​ಗಳಿಗೆ ಬೆಂಕಿ ಹಚ್ಚುತ್ತೇನೆ’ ಎಂದು ಜೆಡಿಎಸ್ ಶಾಸಕ ಶರಣಗೌಡ ಕಂದಕೂರ​ ಹೇಳಿರುವ ಅದೊಂದು ಹೇಳಿಕೆ ಇದೀಗ ಸಾಕಷ್ಟು ಚರ್ಚೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಟಿಪ್ಪರ್​ಗಳ ಸಮೇತ ಯಾದಗಿರಿ ಜಿಲ್ಲಾ ಟಿಪ್ಪರ್ ಮಾಲೀಕರ ಸಂಘದಿಂದ ಪ್ರತಿಭಟನೆ ಮಾಡಿದರು.  ಬಹಿರಂಗ ಕ್ಷಮೆಯಾಚನೆಗೆ ಪಟ್ಟು ಹಿಡಿದಿದ್ದರು, ಆದರೆ ಶಾಸಕರು ಮಾತ್ರ ಕ್ಷಮೆ ಕೇಳಿಲಿಲ್ಲ. ಹಾಗಾಗಿ ಕ್ಷಮೆಯಾಚನೆ ಬೇಡ ಅವರ ಮೇಲೆ ಕೇಸ್ ದಾಖಲಿಸುವಂತೆ ಆಗ್ರಹಿಸಿದ್ದಾರೆ.

250ಕ್ಕೂ ಅಧಿಕ ಟಿಪ್ಪರ್​ಗಳ ಸಮೇತ ಮಾಲೀಕರ ಪ್ರತಿಭಟನೆ

ಯಾದಗಿರಿ ನಗರದಲ್ಲಿ ಇಂದು ಟಿಪ್ಪರ್ ಮಾಲೀಕರು ರಣಕಹಳೆ ಮೊಳಗಿಸಿದ್ದಾರೆ. ನಗರದಲ್ಲಿ ಹಾದು ಹೋಗುವ ಸಿಂದಗಿ-ಕೊಡಂಗಲ್ ರಾಜ್ಯ ಹೆದ್ದಾರಿ ತುಂಬಾ ಟಿಪ್ಪರ್​ಗಳು ಸಾಲಾಗಿ ನಿಂತಿದ್ದವು. ನಗರದ ಗಂಜ್ ನಿಂದ ಸುಭಾಷ್ ವೃತ್ತದ ವರೆಗೆ ಟಿಪ್ಪರ್​ಗಳ ಸಮೇತ ಮಾಲೀಕರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ಪ್ರತಿಭಟನೆಯಲ್ಲಿ ಒಂದಲ್ಲ ಎರಡಲ್ಲ ಸುಮಾರು 250ಕ್ಕೂ ಅಧಿಕ ಟಿಪ್ಪರ್​ಗಳ ಮಾಲೀಕರು ಪ್ರತಿಭಟನೆ ನಡೆಸಿದರು. ಜೋರಾಗಿ ಹಾರ್ನ್ ಹಾಕುವ ಮೂಲಕ ಟಿಪ್ಪರ್ ಚಾಲಕರು ಸುಮಾರು ಒಂದು ಕಿ.ಮೀವರೆಗೆ ಸಾಲಾಗಿ ನಿಂತಿದ್ದರು. ಈ ರೀತಿಯ ಟಿಪ್ಪರ್​ಗಳ ಪ್ರತಿಭಟನೆ ನೋಡಿ ಶಾಕ್ ಆಗಿದ್ದಾರೆ. ನಗರದ ಮುಖ್ಯ ರಸ್ತೆ ಟಿಪ್ಪರ್​ಗಳಿಂದ ತುಂಬಿ ಹೋಗಿತ್ತು. ‘ಬೆಂಕಿ ಹಚ್ಚಲು ಬನ್ನಿ’ ಎಂದು ಟಿಪ್ಪರ್ ಸಮೇತ ಮಾಲೀಕರು ಪ್ರತಿಭಟಿಸಿದರು. ಜೊತೆಗೆ ಶಾಸಕರ ವಿರುದ್ಧ ದೂರು ದಾಖಲಾಗಬೇಕು ಎಂದು ಆಗ್ರಹಿಸಿದ್ದಾರೆ.

ಜೆಡಿಎಸ್ ಶಾಸಕ ಶರಣಗೌಡ ಕಂದಕೂರ​ ಹೇಳಿದ್ದೇನು? 

ಅಷ್ಟಕ್ಕೂ ಟಿಪ್ಪರ್ ಮಾಲೀಕರ ಈ ಪ್ರತಿಭಟನೆಗೆ ಪ್ರಮುಖ ಕಾರಣವೆಂದರೆ ಇತ್ತೀಚೆಗೆ ಜಿಲ್ಲಾಧಿಕಾರಿ ಜೊತೆ ಚರ್ಚೆ ನಡೆಸುವಾಗ ಶಾಸಕ ಕಂದಕೂರ್​ ಹೇಳಿರುವ ಅದೊಂದು ಹೇಳಿಕೆ. ಜಿಲ್ಲೆಯಲ್ಲಿ ಸಾಕಷ್ಟು ಅಕ್ರಮ ಮರಳು ದಂಧೆ ನಡೆಯುತ್ತಿದೆ. ಅದರಲ್ಲೂ ಗುರುಮಠಕಲ್ ಕ್ಷೇತ್ರದಲ್ಲಿ ರಾಜಾರೋಷವಾಗಿ ಮರಳು ಸಾಗಿಸಲಾಗುತ್ತಿದೆ. ನಕಲಿ ರಾಯಲ್ಟಿ ಚೀಟಿ ಹಿಡಿದುಕೊಂಡು ಮರಳು ಸಾಗಿಸಲಾಗುತ್ತಿದೆ. ಇನ್ನು ಅರಣ್ಯ ಪ್ರದೇಶದಲ್ಲಿ ಸಾಕಷ್ಟು ಮರಗಳನ್ನ ಕಡಿದು ಸಾಗಾಟ ಮಾಡಲಾಗುತ್ತಿದೆ. ಇದೇ ಹೇಳಿಕೆ ಇದೀಗ ಟಿಪ್ಪರ್​ ಮಾಲೀಕರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಯಾದಗಿರಿ: ಸ್ವಂತ ಹಣದಲ್ಲಿ ಹೆದ್ದಾರಿಯ ನೂರಾರು ಗುಂಡಿಗಳನ್ನು ಮುಚ್ಚಿದ ಯುವಕರಪಡೆ

‘ಜೊತೆಗೆ ಸಾಕಷ್ಟು ಓವರ್ ಲೋಡ್ ವಾಹನಗಳ ಸಂಚಾರದಿಂದ ರಸ್ತೆಗಳು ಹಾಳಾಗುತ್ತಿವೆ. ಈ ಬಗ್ಗೆ ಎಸ್​ಪಿ ಅವರಿಗೆ ಸಾಕಷ್ಟು ಬಾರಿ ಹೇಳಿದರೂ ಕ್ರಮಕ್ಕೆ ಮುಂದಾಗಿಲ್ಲ. ಹೀಗಾಗಿ ಜಿಲ್ಲಾಧಿಕಾರಿ ಹಾಗೂ ಎಸ್​ಪಿ ಇದಕ್ಕೆ ಕಡಿವಾಣ ಹಾಕಬೇಕು. ನಿಮ್ಮ ಕೈಯಿಂದ ಈ ಕೆಲಸವಾಗಲ್ಲ ಅಂದರೆ ನಾನೇ ಟಿಪ್ಪರ್​ಗಳಿಗೆ ಬೆಂಕಿ ಹಚ್ಚುತ್ತೇನೆ’ ಎಂದು ಜಿಲ್ಲಾಧಿಕಾರಿ ಎದುರು ಆಕ್ರೋಶಗೊಂಡಿದ್ದರು.

ನಮಗೆ ನೋವಾಗಿದೆ ಎಂದ ಟಿಪ್ಪರ್ ಮಾಲೀಕರು

ಟಿಪ್ಪರ್ ಮಾಲೀಕರು ಶಾಸಕರ ಹೇಳಿಕೆಯನ್ನ ಖಂಡಿಸಿದ್ದಾರೆ. ‘ಅಕ್ರಮವಾಗಿ ಸಾಗಾಟ ಮಾಡಿದರೆ ಕ್ರಮಕೈಗೊಳ್ಳಬೇಕು, ಅದು ಬಿಟ್ಟು ಬೆಂಕಿ ಹಚ್ಚುತ್ತೇನೆ ಎಂದು ಹೇಳಿದ್ದು ಸರಿಯಲ್ಲ. ನಮಗೆ ನೋವಾಗಿದೆ, ಹೀಗಾಗಿ ಬಹಿರಂಗವಾಗಿ ಅವರು ಕ್ಷಮೆ ಕೇಳಬೇಕು’ ಅಂತ ಪಟ್ಟು ಹಿಡಿದ್ದರು. ಆದರೆ ಕ್ಷಮೆ ಕೇಳದ್ದಕ್ಕೆ ಈ ರೀತಿ ಟಿಪ್ಪರ್ ಸಮೇತ ಬಂದು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ಈ ಟಿಪ್ಪರ್​ಗಳ ಮಾಲೀಕರ ಹೋರಾಟಕ್ಕೆ ವಿವಿಧ ಸಂಘಟನೆಗಳು ಸಹ ಬೆಂಬಲ ನೀಡಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಜೊತೆಗೆ ಕಾಂಗ್ರೆಸ್ ಮುಖಂಡರು ಸಹ ಭಾಗಿಯಾಗಿ, ಶಾಸಕರ ವಿರುದ್ದರು ಆಕ್ರೋಶ ಹೊರಹಾಕಿದ್ದು, ದೂರು ದಾಖಲಾಗಬೇಕೆಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಬಸ್ ಸೌಲಭ್ಯವಿಲ್ಲದೇ ಶಾಲೆಗೆ ಹೋಗಲು ವಿದ್ಯಾರ್ಥಿಗಳಿಗೆ ಟಂಟಂಗಳೇ ಆಸರೆ: ಸ್ವಲ್ಪ ಯಾಮಾರಿದ್ರೂ ಪ್ರಾಣಕ್ಕೇ ಕುತ್ತು

ಒಟ್ಟಿನಲ್ಲಿ ಯಸದಗಿರಿ ನಗರದಲ್ಲಿ ಇಂದು ಟಿಪ್ಪರ್ ಸಮೇತ ಮಾಲೀಕರು ಬೃಹತ್ ಪ್ರಮಾಣದ ಪ್ರತಿಭಟನಾ ಮೆರವಣಿಗೆ ನಡೆಸುವ ಮೂಲಕ ಶಾಸಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಮುಂದೆ ಪೊಲೀಸರು ಶಾಸಕರ ವಿರುದ್ಧ ಕೇಸ್ ದಾಖಲು ಮಾಡುತ್ತಾರೆ ಕಾದು ನೋಡಬೇಕಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಅಮೀನ್​ ಸಾಬ್​

ಕಳೆದ ಹತ್ತು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿತ್ತಿದ್ದೆನೆ. ಬೆಂಗಳೂರಿನಿಂದ ಮಾಧ್ಯಮ ವೃತ್ತಿಯನ್ನ ಆರಂಬಿಸಿದ್ದು ಎರಡು ವರ್ಷಗಳ ಕಾಲ ಬೆಂಗಳೂರಿನಲ್ಲಿ ಮೆಟ್ರೊ ರಿಪೋರ್ಟರ್ ಆಗಿ ಕೆಲಸ‌ ನಿರ್ವಹಿದ್ದೆನೆ. ಸದ್ಯ ಯಾದಗಿರಿ ಜಿಲ್ಲೆಯಲ್ಲಿ ಕಳೆದ ಎಂಟು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದೆನೆ.. ನನ್ನ ಹವ್ಯಾಸ ಕ್ರಿಕೆಟ್ ಆಡೋದು,ಮಾನವೀಯ ಮೌಲ್ಯ ಮೌಲ್ಯಯುಳ್ಳ ಸುದ್ದಿಗಳನ್ನ ಮಾಡೋದು.

Read More
Loading...
Unable to load recommendations.
Follow Us