ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ಹನಿ ನೀರಿಗೂ ಹಾಹಾಕಾರ; ಹಣಕೊಟ್ಟು ಬಾಟಲಿ ನೀರು ಖರೀದಿಸುವ ಸ್ಥಿತಿ

ಜಿಲ್ಲಾಸ್ಪತ್ರೆಯಲ್ಲಿ ಜೀವ ಜಲಕ್ಕಾಗಿ ಹಾಹಾಕಾರ ಶುರುವಾಗಿದೆ. ಹನಿ ಹನಿ ನೀರಿಗೂ ತತ್ವಾರ ತಲೆದೊರಿದೆ. ರೋಗಿಗಳಿಗೆ ಒಂದು ಹನಿ ನೀರು ಸಿಗದೆ ಪರದಾಡುವಂತಾಗಿದೆ. ರೋಗಿ, ಸಿಬ್ಬಂದಿ ಹಾಗೂ ಜನರಿಗೆ ಖರೀದಿ ನೀರೆ ಗತಿಯಾಗಿದೆ. ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ತಲೆದೊರಿದ ಜೀವ ಜಲದ ಸಂಕಷ್ಟದ ಕಹಾನಿ ಇಲ್ಲಿದೆ.

ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ಹನಿ ನೀರಿಗೂ ಹಾಹಾಕಾರ; ಹಣಕೊಟ್ಟು ಬಾಟಲಿ ನೀರು ಖರೀದಿಸುವ ಸ್ಥಿತಿ
ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ಹನಿ ನೀರಿಗೂ ಹಾಹಾಕಾರ
Follow us
| Updated By: ಆಯೇಷಾ ಬಾನು

Updated on: Jun 25, 2024 | 3:12 PM

ಯಾದಗಿರಿ, ಜೂನ್.25: ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ( Yadgir District Hospital) ಹನಿ ಹನಿ ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದೆ (Water Crisis). ಈ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಅಂದಿನ ಸಿಎಂ, ಯಾದಗಿರಿ ಜಿಲ್ಲೆಯ ಜನರ ಆರೋಗ್ಯಕ್ಕಾಗಿ ಸುಸಜ್ಜಿತ ಆಸ್ಪತ್ರೆಯನ್ನು 2021 ರಲ್ಲಿ ಮಾಡಿದ್ರು. ಆಸ್ಪತ್ರೆ ಉದ್ಘಾಟನೆ ಮಾಡಿ ಮೂರು ವರ್ಷ ಕಳೆದಿದೆ. ಆದ್ರೆ, ಆಸ್ಪತ್ರೆಯಲ್ಲಿ ಅಧಿಕಾರಿಗಳು ಶುದ್ಧ ನೀರು ಸೌಲಭ್ಯ ಕಲ್ಪಿಸುವ ಕಾಳಜಿ ತೋರಿಲ್ಲ.

ಜಿಲ್ಲಾಸ್ಪತ್ರೆಯು ವೈಧ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಬರುತ್ತದೆ. ಯಾದಗಿರಿ ನಗರದ ಮುದ್ನಾಳ ಸಮೀಪದಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ ನೀರಿಗಾಗಿ ಪರದಾಡುವಂತಾಗಿದೆ. ರೋಗಿಗಳಿಗು ನೀರಿನ ಸೌಕರ್ಯ ಕಲ್ಪಿಸಿಲ್ಲ. ಅದೇ ರೀತಿ ಆಸ್ಪತ್ರೆಯಲ್ಲಿ ಕಾರ್ಯ ಮಾಡುವ ಸಿಬ್ಬಂದಿ ಹಾಗೂ ಸಾರ್ವಜನರಿಗೆ ನೀರಿನ ಸೌಕರ್ಯ ಕಲ್ಪಿಸಿಲ್ಲ. ಇದರಿಂದ ಆಸ್ಪತ್ರೆಯಲ್ಲಿ ರೋಗಿಗಳು,ಸಿಬ್ಬಂದಿ ವರ್ಗ ಹಾಗೂ ಜನರು ನೀರಿಗಾಗಿ ಸಮಸ್ಯೆ ಎದುರಿಸುತ್ತಿದ್ದಾರೆ. ರೋಗಿಗಳು ನೀರಿನ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ದಿನಾಂಕ ನಿಗದಿ

ಆಸ್ಪತ್ರೆಯಲ್ಲಿ ನೀರಿನ ಸೌಲಭ್ಯ ಸರಿಯಾಗಿ ಕಲ್ಪಿಸದ ಹಿನ್ನಲೆ ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ಸಮಸ್ಯೆ ಆಗುತ್ತಿದೆ. ರೋಗಿಗಳ ಸಂಬಂಧಿಕರು ಆಸ್ಪತ್ರೆ ಹೊರಭಾಗದ ಹೋಟೆಲ್​ಗೆ ತೆರಳಿ ಬಾಟಲ್ ನೀರು ಖರೀದಿ ಮಾಡಿ ನೀರಿನ ದಾಹ ತಿರಿಸಿಕೊಳ್ಳುತ್ತಿದ್ದಾರೆ. ಬಡ ರೋಗಿಗಳು ನೀರಿಗಾಗಿ ನಿತ್ಯವು ನೂರಾರು ರೂಪಾಯಿ ಹಣ ವೆಚ್ಚ ಮಾಡುವಂತಾಗಿದೆ. ಆಸ್ಪತ್ರೆಯಲ್ಲಿ ಕೇವಲ ಎರಡು ಶುದ್ದ ನೀರು ಪೂರೈಕೆ ಮಾಡುವ ಘಟಕಗಳಿವೆ. ಅದರಲ್ಲಿ ಒಂದು ಘಟಕದಿಂದ ನೀರು ಪೂರೈಕೆ ಮಾಡಲಾಗುತ್ತಿದೆ. ಮತ್ತೊಂದು ಘಟಕ ಬಂದ್ ಆಗಿದೆ. ಆದ್ರೆ, ಈ ಬಗ್ಗೆ ಜಿಲ್ಲಾ ಶಸ್ತ್ರಚಿಕಿತ್ಸಕಿ ಹಾಗೂ ಆಸ್ಪತ್ರೆಯ ಅಧೀಕ್ಷಕಿ ಡಾ.ರಿಜ್ವಾನ್ ಅವರು, ಆಸ್ಪತ್ರೆ ಮೇಲೆ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು ನೀರು ಪೂರೈಕೆ ಮಾಡುವ ಪೈಪ್ ಕೆಟ್ಟು ಹೋಗಿದ್ದು. ಕಾಮಗಾರಿ ನಡೆಯುತ್ತಿರುವದರಿಂದ ಪೈಪ್ ಲೈನ್ ನೀರು ಪೂರೈಕೆ ಬಂದ್ ಮಾಡಲಾಗಿದೆ. ನೀರಿನ ಕ್ಯಾನ್ ಗಳನ್ನು ಇಟ್ಟು ನೀರು ಪೂರೈಕೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬೃಹತ್ ನೀರಿನ ಘಟಕ ಅಳವಡಿಕೆ ಮಾಡಲಾಗುತ್ತದೆಂದರು.

ನೀರಿನ ಕ್ಯಾನ್ ಗಳನ್ನು ಇಡಲಾಗಿದೆ ಎಂದು ಅಧಿಕಾರಿಗಳು ಸುಳ್ಳು ಹೇಳುತ್ತಿದಾರೆಂಬುದು, ಆಸ್ಪತ್ರೆಯಲ್ಲಿನ ನೀರಿನ ಸಮಸ್ಯೆ ನಿದರ್ಶನವಾಗಿದೆ. ಈ ಬಗ್ಗೆ ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳು ಆಸ್ಪತ್ರೆಯಲ್ಲಿ ನೀರಿನ ಸಮಸ್ಯೆಯಾಗದಂತೆ ಅಗತ್ಯ ಕ್ರಮವಹಿಸಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ತಾಜಾ ಸುದ್ದಿ
Daily Devotional: ಕಾಗೆ ತಲೆಗೆ ಕುಕ್ಕಿದರೆ ಏನು ಅರ್ಥ? ಈ ವಿಡಿಯೋ ನೋಡಿ
Daily Devotional: ಕಾಗೆ ತಲೆಗೆ ಕುಕ್ಕಿದರೆ ಏನು ಅರ್ಥ? ಈ ವಿಡಿಯೋ ನೋಡಿ
Daily Horoscope: ಆಷಾಢ ಶುಕ್ರವಾರದ ದಿನಭವಿಷ್ಯ, ಗ್ರಹಗಳ ಚಲನವಲನ ತಿಳಿಯಿರಿ
Daily Horoscope: ಆಷಾಢ ಶುಕ್ರವಾರದ ದಿನಭವಿಷ್ಯ, ಗ್ರಹಗಳ ಚಲನವಲನ ತಿಳಿಯಿರಿ
ಈಡಿ ತನಿಖೆ ಸಿಎಂ, ಡಿಸಿಎಂರಲ್ಲಿ ಭಯ ಮತ್ತು ಆತಂಕ ಮೂಡಿಸಿದೆ: ವಿಜಯೇಂದ್ರ
ಈಡಿ ತನಿಖೆ ಸಿಎಂ, ಡಿಸಿಎಂರಲ್ಲಿ ಭಯ ಮತ್ತು ಆತಂಕ ಮೂಡಿಸಿದೆ: ವಿಜಯೇಂದ್ರ
ಕಾರವಾರ ಜಿಲ್ಲೆಯಲ್ಲಿ ಗುಡ್ಡ ಕುಸಿತದ ಮತ್ತೊಂದು ಪ್ರಕರಣ, ಪ್ರಾಣಾಪಾಯವಿಲ್ಲ
ಕಾರವಾರ ಜಿಲ್ಲೆಯಲ್ಲಿ ಗುಡ್ಡ ಕುಸಿತದ ಮತ್ತೊಂದು ಪ್ರಕರಣ, ಪ್ರಾಣಾಪಾಯವಿಲ್ಲ
ಸದನದ ಬಾವಿಗಿಳಿದು ಬಿಜೆಪಿ ಶಾಸಕರ ಪ್ರತಿಭಟನೆ, ಸಿದ್ದರಾಮಯ್ಯ ಅಸಹಾಯಕ
ಸದನದ ಬಾವಿಗಿಳಿದು ಬಿಜೆಪಿ ಶಾಸಕರ ಪ್ರತಿಭಟನೆ, ಸಿದ್ದರಾಮಯ್ಯ ಅಸಹಾಯಕ
ಹಿಂದುಳಿದ ವರ್ಗಗಳ ಬಗ್ಗೆ ಕಾಳಜಿ ಯಾವತ್ತೂ ಕಡಿಮೆಯಾಗಲ್ಲ: ಸಿದ್ದರಾಮಯ್ಯ
ಹಿಂದುಳಿದ ವರ್ಗಗಳ ಬಗ್ಗೆ ಕಾಳಜಿ ಯಾವತ್ತೂ ಕಡಿಮೆಯಾಗಲ್ಲ: ಸಿದ್ದರಾಮಯ್ಯ
ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟ: ಮಾಗುಂಡಿ ಸೇತುವೆ ಮುಳುಗಡೆ, ಸಂಪರ್ಕ ಕಡಿತ
ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟ: ಮಾಗುಂಡಿ ಸೇತುವೆ ಮುಳುಗಡೆ, ಸಂಪರ್ಕ ಕಡಿತ
ಭಾರೀ ಗಾಳಿಗೆ ಅಂಗಡಿಗಳ ಮೇಲೆ ಉರುಳಿ ಬಿದ್ದ ಮೊಬೈಲ್​ ಟವರ್; ತಪ್ಪಿದ ಅನಾಹುತ
ಭಾರೀ ಗಾಳಿಗೆ ಅಂಗಡಿಗಳ ಮೇಲೆ ಉರುಳಿ ಬಿದ್ದ ಮೊಬೈಲ್​ ಟವರ್; ತಪ್ಪಿದ ಅನಾಹುತ
ಪ್ರತಿ ವಿಷಯಕ್ಕೂ ಅಶ್ವಥ್ ನಾರಾಯಣ ಎದ್ದು ನಿಂತು ಮಾತಾಡೋದು ಸರಿಯಲ್ಲ: ಸಿಎಂ
ಪ್ರತಿ ವಿಷಯಕ್ಕೂ ಅಶ್ವಥ್ ನಾರಾಯಣ ಎದ್ದು ನಿಂತು ಮಾತಾಡೋದು ಸರಿಯಲ್ಲ: ಸಿಎಂ
ಅಶೋಕ್​ಗೆ ಸದನದಲ್ಲೇ ಮುಜುಗರವಾಗುವಂತೆ ಟಾಂಗ್ ಕೊಟ್ಟ ಯತ್ನಾಳ್
ಅಶೋಕ್​ಗೆ ಸದನದಲ್ಲೇ ಮುಜುಗರವಾಗುವಂತೆ ಟಾಂಗ್ ಕೊಟ್ಟ ಯತ್ನಾಳ್