AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾದಗಿರಿ: 21 ವರ್ಷದ ಬಳಿಕ ಶಾಲೆಗೆ ಬಿಸಿಯೂಟದ ಭಾಗ್ಯ!

Bisi Uta: 2002 ರಲ್ಲಿ ಬಿಸಿಯೂಟ ಸಹಾಯಕಿಯರ ನೇಮಕದ ವಿಚಾರದಲ್ಲಿ ಗಲಾಟೆ ನಡೆದಿತ್ತು. ಮೀಸಲಾತಿ ಪ್ರಕಾರ ಓರ್ವ ದಲಿತ ಮಹಿಳೆಗೆ ಅಡುಗೆ ಸಹಾಯಕಿ ಹುದ್ದೆಗೆ ತೆಗೆದುಕೊಳ್ಳಬೇಕಾಗಿತ್ತು. ಆದ್ರೆ ದಲಿತರು ಮಾಡಿದ ಅಡುಗೆ ನಾವು ತಿನ್ನಬಾರದು ಎಂದು ಸವರ್ಣೀಯರು ತಗಾದೆ ತೆಗೆದಿದ್ದರು. ಇದೇ ಕಾರಣಕ್ಕೆ ಅಂದಿನಿಂದ ಶಾಲೆಯಲ್ಲಿ ಬಿಸಿಯೂಟನೇ ಮಾಡಿರಲಿಲ್ಲ!

ಯಾದಗಿರಿ: 21 ವರ್ಷದ ಬಳಿಕ ಶಾಲೆಗೆ ಬಿಸಿಯೂಟದ ಭಾಗ್ಯ!
ಯಾದಗಿರಿ: 21 ವರ್ಷದ ಬಳಿಕ ಶಾಲೆಗೆ ಬಿಸಿಯೂಟದ ಭಾಗ್ಯ!
ಅಮೀನ್​ ಸಾಬ್​
| Edited By: ಸಾಧು ಶ್ರೀನಾಥ್​|

Updated on: Aug 24, 2023 | 12:41 PM

Share

ಯಾದಗಿರಿ, ಆಗಷ್ಟ್​ 24: ಯಾದಗಿರಿ (Yadagiri) ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಬರೋಬ್ಬರಿ 21 ವರ್ಷಗಳ ಬಳಿಕ ಮಕ್ಕಳಿಗೆ ಬಿಸಿಯೂಟದ ಭಾಗ್ಯ ಒದಗಿಸಲಾಗಿದೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಚೆನ್ನೂರ್ (Chennur village in Hunasagi taluk) ಗ್ರಾಮದ ಶಾಲೆಯಲ್ಲಿ ಜಾತಿ ಸಂಘರ್ಷದಿಂದ ಬಿಸಿಯೂಟ (Mid Day Meal) ಬಂದ್ ಆಗಿತ್ತು. ಅಧಿಕಾರಿಗಳ ಸಂಧಾನದ ಬಳಿಕ ಬಿಸಿಯೂಟ ಕೊನೆಗೂ ಆರಂಭಗೊಂಡಿದೆ.

2002 ರಲ್ಲಿ ಬಿಸಿಯೂಟ (Bisi Uta) ಸಹಾಯಕಿಯರ ನೇಮಕದ ವಿಚಾರದಲ್ಲಿ ಗಲಾಟೆ ನಡೆದಿತ್ತು. ಮೀಸಲಾತಿ ಪ್ರಕಾರ ಓರ್ವ ದಲಿತ ಮಹಿಳೆಗೆ ಅಡುಗೆ ಸಹಾಯಕಿ ಹುದ್ದೆಗೆ ತೆಗೆದುಕೊಳ್ಳಬೇಕಾಗಿತ್ತು. ಆದ್ರೆ ದಲಿತರು ಮಾಡಿದ ಅಡುಗೆ ನಾವು ತಿನ್ನಬಾರದು ಎಂದು ಸವರ್ಣೀಯರು ತಗಾದೆ ತೆಗೆದಿದ್ದರು. ಇದೇ ಕಾರಣಕ್ಕೆ ಅಂದಿನಿಂದ ಶಾಲೆಯಲ್ಲಿ ಬಿಸಿಯೂಟನೇ ಮಾಡಿರಲಿಲ್ಲ!

ಇದನ್ನೂ ಓದಿ:  ಯಾದಗಿರಿ ನಗರಸಭೆ ಅಕ್ರಮ ಬಯಲಿಗೆಳೆದ ಪೌರಾಯುಕ್ತರಿಗೆ ಜೀವ ಬೆದರಿಕೆ

ಆದ್ರೆ ನಿನ್ನೆ ಜಿಲ್ಲಾ ಅಕ್ಷರದಾಸೋಹದ ಅಧಿಕಾರಿಗಳು ಗ್ರಾಮಕ್ಕೆ ಭೇಡಿ ಎರಡೂ ಕಡೆಯವರಿಗೆ ಮನವೊಲಿಸಿದ್ದಾರೆ. ಬಳಿಕ ನಿನ್ನೆ ಸದ್ಯಕ್ಕೆ ವಿಶ್ವಗಂಗ ಸಂಸ್ಥೆಯ ಮೂಲಕ ಬಿಸಿಯೂಟ ವಿತರಣೆ ಮಾಡಲಾಗಿದೆ. ಮಕ್ಕಳು ಹಾಗೂ ಪೋಷಕರು 21 ವರ್ಷದ ಬಳಿಕ ಶಾಲೆಗೆ ಬಿಸಿಯೂಟ ಬಂದಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. 1 ರಿಂದ 5 ನೇ ತರಗತಿ ವರೆಗೆ ಇರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇದಾಗಿದೆ. SDMC ರಚನೆ ಬಳಿಕ SDMC (School Development and Monitoring Committee) ತೀರ್ಮಾನದಂತೆ ಬಿಸಿಯೂಟ ಸಹಾಯಕಿಯರ ನೇಮಕ‌ ಮಾಡಲಾಗುತ್ತೆ ಎಂದು ತಿಳಿದುಬಂದಿದೆ.

ಯಾದಗಿರಿ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಅಮೀನ್​ ಸಾಬ್​
ಅಮೀನ್​ ಸಾಬ್​

ಕಳೆದ ಹತ್ತು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿತ್ತಿದ್ದೆನೆ. ಬೆಂಗಳೂರಿನಿಂದ ಮಾಧ್ಯಮ ವೃತ್ತಿಯನ್ನ ಆರಂಬಿಸಿದ್ದು ಎರಡು ವರ್ಷಗಳ ಕಾಲ ಬೆಂಗಳೂರಿನಲ್ಲಿ ಮೆಟ್ರೊ ರಿಪೋರ್ಟರ್ ಆಗಿ ಕೆಲಸ‌ ನಿರ್ವಹಿದ್ದೆನೆ. ಸದ್ಯ ಯಾದಗಿರಿ ಜಿಲ್ಲೆಯಲ್ಲಿ ಕಳೆದ ಎಂಟು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದೆನೆ.. ನನ್ನ ಹವ್ಯಾಸ ಕ್ರಿಕೆಟ್ ಆಡೋದು,ಮಾನವೀಯ ಮೌಲ್ಯ ಮೌಲ್ಯಯುಳ್ಳ ಸುದ್ದಿಗಳನ್ನ ಮಾಡೋದು.

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್