ಯಾದಗಿರಿ, ನವೆಂಬರ್: ಲಾರಿ ಡಿಕ್ಕಿ ಹೊಡೆದ (Lorry collision) ಪರಿಣಾಮ ಟಾಟಾ ಏಸ್ ವಾಹನದಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವಂತಹ ಘಟನೆ ಯಾದಗಿರಿ ತಾಲೂಕಿನ ಆರ್.ಹೊಸಳ್ಳಿ ಬಳಿ ತಡರಾತ್ರಿ ನಡೆದಿದೆ. ಮನ್ನು ಚವ್ಹಾಣ್(35), ಹಣಮಂತ(30) ಮೃತರು. ಅಪಘಾತದಲ್ಲಿ ಸಾವಿಗೀಡಾದ ಇಬ್ಬರು ಮುದ್ನಾಳ್ ತಾಂಡಾದ ನಿವಾಸಿಗಳು. ಸ್ಥಳಕ್ಕೆ ಯಾದಗಿರಿ ಗ್ರಾಮಾಂತರ ಪೋಲಿಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಯಾದಗಿರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಕೊಪ್ಪಳ: ಹಳೆ ವೈಷಮ್ಯದ ಹಿನ್ನೆಲೆ ಎರಡು ಗುಂಪುಗಳು ನಡುವೆ ಮಾರಾಮಾರಿ ನಡೆದಿರುವಂತಹ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಗ್ರಾಮದಲ್ಲಿ ನಡೆದಿದೆ. ಮತ್ತೊಂದು ಗುಂಪ್ಪಿನಿಂದ ಹಿಗ್ಗಾಮುಗ್ಗ ಥಳಿಸಿದ್ದಾರೆ.
ಇದನ್ನೂ ಓದಿ: ಮೈಸೂರು: ಮಗನ ಸಾವಿನ ಆಘಾತ ತಾಳಲಾರದೆ ಹೃದಯಾಘಾತದಿಂದ ತಾಯಿ ಸಾವು
ಹಲ್ಲೆಯ ವಿಡಿಯೋ ಎಲ್ಲಡೆ ವೈರಲ್ ಆಗಿದೆ. ಶಶಿಧರ್ ಅನ್ನೋ ವ್ಯಕ್ತಿಗೆ ಗಂಭೀರ ಗಾಯವಾಗಿದ್ದು, ಹುಬ್ಬಳ್ಳಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಂಗಾವತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ವ್ಯಕ್ತಿಯೋರ್ವನ ಮೇಲೆ ಮಾರಣಾಂತಿಕವಾಗಿ ಕರಡಿ ದಾಳಿ ಮಾಡಿರುವಂತಹ ಘಟನೆ ಕೊಪ್ಪಳ ತಾಲೂಕಿನ ಇರಕಲಗಡ್ ಗ್ರಾಮದ ಬಳಿ ನಡೆದಿದೆ. ಹೊಸೂರು ಗ್ರಾಮದ ನಿವಾಸಿ ಈರಣ್ಣ ಜಾಲಿಗಿಡ ಕರಡಿ ದಾಳಿಗೆ ಒಳಗಾಗಿರುವವರು.
ಇದನ್ನೂ ಓದಿ: ತುಮಕೂರು: ಸಾಲಬಾಧೆ ತಾಳಲಾರದೆ ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಶರಣು
ನಿನ್ನೆ ಸಂಜೆ ಹೊಸೂರು ಗ್ರಾಮದಿಂದ ಹುಲಗಿಗೆ ಹುಲಿಗೆಮ್ಮ ದೇವಸ್ಥಾನಕ್ಕೆ ಪಾದಯಾತ್ರೆ ಹೊರಟಿದ್ದರು. ಗಾಯಾಳುವನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ಮಂಗಳೂರು: 1.57 ಕೋಟಿ ರೂ. ಮೌಲ್ಯದ ಅಂಬರ್ಗ್ರೀಸ್ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರನ್ನು ಮಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ಪಂಪ್ವೆಲ್ ಬಳಿ ಮಾರಾಟಕ್ಕೆ ಯತ್ನಿಸಿದ್ದರು. ಬಂಟ್ವಾಳ ತಾಲೂಕಿನ ವಿಟ್ಲ ನಿವಾಸಿ ಪ್ಯಾರೇಜಾನ್ ಅಲಿಯಾಸ್ ಸೇಟು, ಬದ್ರುದ್ದೀನ್ ಅಲಿಯಾಸ್ ಬದ್ರು, ತಮಿಳುನಾಡಿನ ಆರ್.ರಾಜೇಶ್ ಬಂಧಿತರು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:32 am, Mon, 27 November 23