ಯಾದಗಿರಿ: ಮದುವೆಯ ಆಸೆ ತೋರಿಸಿ ವಿಧವೆಯ ಜೊತೆ ಲವ್, ದೈಹಿಕ ಸಂಬಂಧ, ಲಕ್ಷಾಂತರ ರೂ. ವಂಚನೆ

ಆಕೆ ಹತ್ತು ವರ್ಷದ ಹಿಂದೆ ಗಂಡನನ್ನು ಕಳೆದುಕೊಂಡ ವಿಧವೆ. ಒಬ್ಬ ಮಗನನ್ನು ಓದಿಸುತ್ತಾ ಹೇಗೋ ಸಂಸಾರ ಮಾಡುತ್ತಿದ್ದಳು. ಸಂಕಷ್ಟದ ಸಮಯದಲ್ಲಿ ವಿಧವೆಗೆ ಪರಿಚಯವಾದ ವ್ಯಕ್ತಿಯೊಬ್ಬ ಪ್ರೀತಿ-ಪ್ರೇಮದ ಹೆಸರಿನಲ್ಲಿ ಮದುವೆಯಾಗುವುದಾಗಿ ಹೇಳಿದ್ದಾನೆ. ನಯವಂಚಕನ ಬಣ್ಣದ ಮಾತಿಗೆ ಮರುಳಾದ ಆ ವಿಧವೆ ಮೋಸ ಹೋಗಿದ್ದಾಳೆ. ಕಿರಾತಕ ಲಕ್ಷಾಂತರ ರೂಪಾಯಿ ಹಣ ಲಪಟಾಯಿಸಿ ಆಕೆಯನ್ನು ನಡುನೀರಿನಲ್ಲಿ ಕೈಬಿಟ್ಟಿದ್ದಾನೆ. ಇದೀಗ ಆಕೆ ನ್ಯಾಯಕ್ಕಾಗಿ ಎಸ್​​ಪಿ ಕಚೇರಿ ಮುಂದೆ ಧರಣಿ ಮಾಡುವಂತಾಗಿದೆ.

ಯಾದಗಿರಿ: ಮದುವೆಯ ಆಸೆ ತೋರಿಸಿ ವಿಧವೆಯ ಜೊತೆ ಲವ್, ದೈಹಿಕ ಸಂಬಂಧ, ಲಕ್ಷಾಂತರ ರೂ. ವಂಚನೆ
ಶಹಾಪುರ ಪೊಲೀಸ್ ಠಾಣೆ ಮತ್ತು ಆರೋಪಿ ಮಾಳಪ್ಪ ಹತ್ತಿಕುಣಿ
Updated By: Ganapathi Sharma

Updated on: Mar 22, 2025 | 11:30 AM

ಯಾದಗಿರಿ, ಮಾರ್ಚ್ 22: ಯುವಕನೊಬ್ಬ ವಿಧವೆಯೊಬ್ಬಳನ್ನು (Widow) ಮದುವೆಯಾಗುವುದಾಗಿ ನಂಬಿಸಿ ಆಕೆಯ ಜತೆ ಪ್ರೀತಿಯ ನಾಟಕವಾಡಿ, ದೈಹಿಕ ಸಂಬಂಧವನ್ನೂ ಬೆಳೆಸಿದ್ದಲ್ಲದೆ ಆಕೆಯಿಂದ ಲಕ್ಷಾಂತರ ರೂ. ಹಣ ಎಗರಿಸಿದ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ (Shahapur) ತಾಲೂಕಿನ ಬಸವಂತಪುರ ಗ್ರಾಮದಲ್ಲಿ ನಡೆದಿದೆ. ಬಸವಂತಪುರ ಗ್ರಾಮದ ಮಹಿಳೆಯನ್ನು ದೂರದ ತೆಲಂಗಾಣದ ನಾರಾಯಣಪೇಟೆ ಜಿಲ್ಲೆಯ ಮಕ್ತಲ್ ತಾಲೂಕಿನ ಅಮೀನಾಪುರ ಗ್ರಾಮದ ಬಸನಗೌಡ ಎಂಬಾತನಿಗೆ ಸುಮಾರು ಹತ್ತು ವರ್ಷಗಳ ಹಿಂದೆ ಮದುವೆ ಮಾಡಿ ಕೊಡಲಾಗಿತ್ತು. ಮದುವೆಯಾದ ಒಂದು ವರ್ಷದಲ್ಲಿ ಮುದ್ದಾದ ಗಂಡು ಮಗು ಹುಟ್ಟಿತ್ತು. ಮಗು, ಗಂಡನ ಜೊತೆ ಸುಖ ಸಂಸಾರ ನಡೆಸುವಾಗಲೇ ಆಕೆಯ ಗಂಡ ಪಾರ್ಶ್ವವಾಯು ಸಮಸ್ಯೆಗೆ ಒಳಗಾಗಿ ಮೃತಪಟ್ಟು ಸಂಕಷ್ಟಕ್ಕೆ ಸಿಲುಕುವಂತಾಯಿತು. ನಂತರ ಆಕೆ ತವರು ಮನೆಯಾದ ಬಸವಂತಪುರಕ್ಕೆ ಬಬಂದಿದ್ದಾಳೆ. ನಂತರ ಅಬ್ಬೆತುಮಕೂರಿನ ಸ್ವಾಮೀಜಿಗಳ ಬಳಿ ತನ್ನ ಸಮಸ್ಯೆಯನ್ನು ಹೇಳಿಕೊಂಡಿದ್ದಳು. ಆಗ ಸ್ವಾಮೀಜಿ, ‘ನಿನ್ನ ಕಷ್ಟ ಸರಿ ಹೋಗುತ್ತದೆ, ದೇವರು ಒಳ್ಳೆಯದು ಮಾಡಲಿ’ ಎಂದು ಆಶೀರ್ವಾದ ಮಾಡಿದ್ದರು. ಅದಾದ ಬೆನ್ನಲ್ಲೇ ಅದೇ ಅಬ್ವೆತುಮಕೂರು ಮಠದಲ್ಲಿ ಮಾಳಪ್ಪ ಹತ್ತಿಕುಣಿ ಎಂಬಾತನ ಪರಿಚಯವಾಗಿದೆ. ಆತ ಬಣ್ಣ ಬಣ್ಣದ ಮಾತನಾಡಿ ವಿಧವೆ ಜತೆ ಸ್ನೇಹ ಬೆಳೆಸಿಕೊಂಡಿದ್ದಾನೆ.

ವಿಧವೆ ಜೊತೆ ಪ್ರೀತಿ-ಪ್ರೇಮದ ನಾಟಕವಾಡಿದ ಮಾಳಪ್ಪ, ‘‘ಪತಿಯನ್ನು ಕಳೆದುಕೊಂಡ‌ ನಿನಗೆ ಗಂಡನ ಸ್ಥಾನ ಕೊಡುತ್ತೇನೆ. ನಾವಿಬ್ಬರು ಹಾಲು-ಜೇನಿನಂತೆ ಸುಖ-ಸಂಸಾರದಿಂದ ಕೂಡಿ ಬಾಳೋಣ’’ ಎಂದು ಮರುಳು ಮಾಡುವ ಮಾತುಗಳನ್ನಾಡಿದ್ದಾನೆ. ಮಾಳಪ್ಪ ಮೇಲಿನ ಪ್ರೀತಿ, ವಿಶ್ವಾಸದಿಂದ ವಿಧವೆ, ತೆಲಂಗಾಣದಲ್ಲಿರುವ ತನ್ನ ನಾಲ್ಕೂವರೆ ಎಕರೆ ಜಮೀನನ್ನು ಮಾರಾಟ ಮಾಡಿದ್ದಾಳೆ. ಜಮೀನು ಮಾರಿದ ಸುಮಾರು 80 ಲಕ್ಷ ರೂ. ಹಣವನ್ನು ಆಕೆಯಿದ ಮಾಳಪ್ಪ ತೆಗೆದುಕೊಂಡಿದ್ದಾನೆ. ಆಕೆಯ ಹೆಸರಿನಲ್ಲಿದ್ದ ಆಸ್ತಿ-ಪಾಸ್ತಿ, ಬಂಗಾರವನ್ನು ಸಹ ಮಾರಿಕೊಂಡು ಹಣ ಗಳಿಸಿ ವಂಚಿಸಿದ್ದಾನೆ.

ಇದನ್ನೂ ಓದಿ: ಯಾದಗಿರಿಯಲ್ಲಿ ಡಬಲ್​ ಮರ್ಡರ್​: 2 ಪ್ರತ್ಯೇಕ ಗ್ಯಾಂಗ್​ನಿಂದ ದಲಿತ ಮುಖಂಡ, ಸಹಚರನ ಕೊಲೆ

ಇದನ್ನೂ ಓದಿ
ಪ್ರತಿಭಟನೆಗೆ ಬಂದ್ ಬಿಟ್ಟು ಪರ್ಯಾಯ ದಾರಿ ಹುಡುಕಬೇಕು: ಆಟೋರಿಕ್ಷಾ ಚಾಲಕರು
ಕನ್ನಡ ಸೇರಿ ಪ್ರಾದೇಶಿಕ ಭಾಷೆಗಳಲ್ಲೇ ಪತ್ರ ವ್ಯವಹಾರ: ಅಮಿತ್ ಶಾ ಘೋಷಣೆ
ಬೆಂಗಳೂರಿಗೆ ತಟ್ಟದ ಬಂದ್ ಬಿಸಿ: ಯಾವ ಜಿಲ್ಲೆಯಲ್ಲಿ ಹೇಗಿದೆ ಪರಿಸ್ಥಿತಿ?
ಕರ್ನಾಟಕ ಬಂದ್​ಗೆ ಕಾರಣವೇನು? ಏನೇನಿದೆ, ಏನೇನಿಲ್ಲ? ವಿವರ ಇಲ್ಲಿದೆ

ಈ ಬಗ್ಗೆ ಶಹಾಪುರ ಪೋಲಿಸ್ ಠಾಣೆಯಲ್ಲಿ ಮಾಳಪ್ಪನ ವಿರುದ್ಧ ವಿಧವೆ ದೂರು ನೀಡಿದ್ದು ಕೇಸ್ ಸಹ ದಾಖಲಾಗಿದೆ. ಆದರೆ ಆರೋಪಿಯ ಬಂಧವಾಗಿಲ್ಲ. ನ್ಯಾಯ ಬೇಕು ಎಂದು ವಿಧವೆ ಯಾದಗಿರಿ ಎಸ್​ಪಿ ಕಚೇರಿ ಮುಂದೆ ಧರಣಿ ನಡೆಸಿದ್ದಾಳೆ. ನ್ಯಾಯ ಸಿಗದಿದ್ದರೆ ಡಿಸೇಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ