ಯಾದಗಿರಿ: ಕಲುಷಿತ ನೀರು ಹಾಗೂ ಫುಡ್ ಪಾಯಿಸನ್ನಿಂದ ಮಕ್ಕಳು ಸೇರಿ 24 ಜನರಿಗೆ ವಾಂತಿ ಭೇದಿ
ಕೊಳವೆ ಬಾವಿಯ ನೀರು ಸೇವಿಸಿದ 16 ಮಕ್ಕಳಿಗೆ ವಾಂತಿ ಭೇದಿಯಾಗಿದ್ದು ಮಕ್ಕಳನ್ನು ಸುರಪುರ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹಾಗೂ ಫುಡ್ ಪಾಯಿಸನ್ ನಿಂದ ಪಶ್ಚಿಮ ಬಂಗಾಳ ಮೂಲದ 8 ಕಾರ್ಮಿಕರಿಗೆ ವಾಂತಿ ಭೇದಿಯಾಗಿದೆ. ಸರಿಯಾಗಿ ಬೇಯಿಸದೆ ಮೀನು ಆಹಾರ ಸೇವಿಸಿದ ಹಿನ್ನೆಲೆ ಕಾರ್ಮಿಕರಿಗೆ ವಾಂತಿ ಭೇದಿಯಾಗಿದೆ ಎನ್ನಲಾಗುತ್ತಿದೆ.
ಯಾದಗಿರಿ, ಆ.28: ಕಲುಷಿತ ನೀರು(Contaminated Water) ಸೇವಿಸಿ ಅಸ್ವಸ್ಥಗೊಳ್ಳುವ ಘಟನೆಗಳು ಯಾದಗಿರಿ ಜಿಲ್ಲೆಯಲ್ಲಿ ಮತ್ತೆ ಮತ್ತೆ ಮರುಕಳಿಸುತ್ತಿದೆ. ಇತ್ತೀಚೆಗೆ ಗುರುಮಠಕಲ್ ತಾಲೂಕಿನ ಅನಪುರ, ಶಿವಪುರ, ಮಾರಲಭಾವಿ, ಗಾಜರಕೋಟ್‌ನಲ್ಲಿ ಕಲುಷಿತ ನೀರು ಸೇವನೆಯಿಂದಾದ ಅನಾಹುತಗಳು ಮಾಸುವ ಮುನ್ನವೇ, ಇದೀಗ ಜಿಲ್ಲೆಯಲ್ಲಿ ಮತ್ತೊಂದು ಘಟನೆ ನಡೆದಿದೆ. ಕಲುಷಿತ ನೀರು ಹಾಗೂ ಫುಡ್ ಪಾಯಿಸನ್ ನಿಂದ(Food Poison) 24 ಜನರಿಗೆ ವಾಂತಿ ಭೇದಿಯಾಗಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಚಿಕ್ಕನಹಳ್ಳಿ ಗ್ರಾಮದಲ್ಲಿ ಕಂಡು ಬಂದಿದೆ.
ಕೊಳವೆ ಬಾವಿಯ ನೀರು ಸೇವಿಸಿದ 16 ಮಕ್ಕಳಿಗೆ ವಾಂತಿ ಭೇದಿಯಾಗಿದ್ದು ಮಕ್ಕಳನ್ನು ಸುರಪುರ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹಾಗೂ ಫುಡ್ ಪಾಯಿಸನ್ ನಿಂದ ಪಶ್ಚಿಮ ಬಂಗಾಳ ಮೂಲದ 8 ಕಾರ್ಮಿಕರಿಗೆ ವಾಂತಿ ಭೇದಿಯಾಗಿದೆ. ಸರಿಯಾಗಿ ಬೇಯಿಸದೆ ಮೀನು ಆಹಾರ ಸೇವಿಸಿದ ಹಿನ್ನೆಲೆ ಕಾರ್ಮಿಕರಿಗೆ ವಾಂತಿ ಭೇದಿಯಾಗಿದೆ ಎನ್ನಲಾಗುತ್ತಿದೆ. ಕಾರ್ಮಿಕರು ಸದ್ಯ ಸುರಪುರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಯಾದಗಿರಿ: ಕಲುಷಿತ ನೀರು ಸೇವನೆ ಶಂಕೆ, 19 ಜನರಲ್ಲಿ ವಾಂತಿ ಭೇದಿ
ಕಳೆದ ಕೆಲ ದಿನಗಳ ಹಿಂದೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಮಾರಲಭಾವಿ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ 10ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದರು. ಮಾರಲಭಾವಿ ಗ್ರಾಮದಲ್ಲಿ ಕುಡಿಯುವ ನೀರಿನಲ್ಲಿ ಕಲುಷಿತ ವಸ್ತು ಸೇರಿದ್ದು, ಇದನ್ನು ಸೇವಿಸಿದವರಿಗೆ ವಾಂತಿಬೇಧಿ ಉಂಟಾಗಿತ್ತು. ಮಕ್ಕಳು, ಯುವಕರು ಹಾಗೂ ವಯೋವೃದ್ಧರು ಸೇರಿದಂತೆ 10ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದು. ಈ ಗ್ರಾಮಕ್ಕೆ ಕುಡಿಯುವ ನೀರಿನ ಮೂಲವಾಗಿದ್ದ ಬಾವಿಯಲ್ಲಿ ಕೆಲವು ದಿನಗಳ ಹಿಂದೆ ಹಂದಿ ಸತ್ತು ಬಿದ್ದಿತ್ತಂತೆ, ಇದರ ಸ್ವಚ್ಛತೆಗೆ ಕ್ರಮ ಕೈಗೊಂಡಿರಲಿಲ್ಲ. ಈ ವಿಚಾರ ತಿಳಿಯದ ಕೆಲವರು ನೀರು ಸೇವಿಸಿ ಅಸ್ವಸ್ಥಗೊಂಡಿದ್ದರು ಎಂಬ ಮಾತು ಕೇಳಿ ಬಂದಿತ್ತು.
ಯಾದಗಿರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:15 am, Mon, 28 August 23