AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾದಗಿರಿ: ಕಲುಷಿತ ನೀರು ಸೇವನೆ ಶಂಕೆ, 19 ಜನರಲ್ಲಿ ವಾಂತಿ ಭೇದಿ

ಯಾದಗಿರಿ ಜಿಲ್ಲೆಯಲ್ಲಿ ಆಗಾಗ ಕಲುಷಿತ ನೀರು ಸೇವಿಸಿ ಜನರು ವಾಂತಿ ಭೇದಿ ಬಳಲುತ್ತಿದ್ದಾರೆ. ಈ ಕುರಿತು ಅನೇಕ ಪ್ರಕರಣಗಳು ವರದಿಯಾಗಿದ್ದರೂ, ಸರ್ಕಾರ ಅಗತ್ಯ ಕ್ರಮ ಕೈಗೊಳ್ಳದೆ ನಿದ್ದೆಗೆ ಜಾರಿದ್ದು ಮಾತ್ರ ಕೇದರದ ಸಂಗತಿ. ಇದೀಗ ಮತ್ತೆ ಜಿಲ್ಲೆಯ ಗುರುಮಠಕಲ್​ ತಾಲೂಕಿನ ಗಾಜರಕೋಟ ಹಾಗೂ ಶಿವಪುರ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 19 ಜನರು ವಾಂತಿ, ಭೇದಿಯಿಂದ ಬಳಲುತ್ತಿದ್ದಾರೆ.

ಯಾದಗಿರಿ: ಕಲುಷಿತ ನೀರು ಸೇವನೆ ಶಂಕೆ, 19 ಜನರಲ್ಲಿ ವಾಂತಿ ಭೇದಿ
ಅಸ್ವಸ್ಥಗೊಂಡಿರುವ ಜನ
ಅಮೀನ್​ ಸಾಬ್​
| Updated By: ವಿವೇಕ ಬಿರಾದಾರ|

Updated on:Aug 22, 2023 | 7:08 PM

Share

ಯಾದಗಿರಿ: ಜಿಲ್ಲೆಯಲ್ಲಿ ಆಗಾಗ ಕಲುಷಿತ ನೀರು (Contaminated water) ಸೇವಿಸಿ ಜನರು ವಾಂತಿ ಭೇದಿ ಬಳಲುತ್ತಿದ್ದಾರೆ. ಈ ಕುರಿತು ಅನೇಕ ಪ್ರಕರಣಗಳು ವರದಿಯಾಗಿದ್ದರೂ, ಸರ್ಕಾರ ಅಗತ್ಯ ಕ್ರಮ ಕೈಗೊಳ್ಳದೆ ನಿದ್ದೆಗೆ ಜಾರಿದ್ದು ಮಾತ್ರ ಖೇದರದ ಸಂಗತಿ. ಇದೇ ವರ್ಷ ಫೆಬ್ರವರಿಯಲ್ಲಿ ಗುರುಮಠಕಲ್ (Gurmitkal)​ ತಾಲೂಕಿನ ಅನಪುರ ಗ್ರಾಮದ 35 ವರ್ಷದ ಸಾವಿತ್ರಮ್ಮ ಕಲುಷಿತ ನೀರು ಸೇವಿಸಿ ಮೃತಪಟ್ಟಿದ್ದರು. ಇದೀಗ ಮತ್ತೆ ಜಿಲ್ಲೆಯ ಇದೇ ಗುರುಮಠಕಲ್​ ತಾಲೂಕಿನ ಗಾಜರಕೋಟ ಹಾಗೂ ಶಿವಪುರ ಗ್ರಾಮದ 19 ಜನರು ವಾಂತಿ, ಭೇದಿಯಿಂದ ಬಳಲುತ್ತಿದ್ದು, ಇದಕ್ಕೆ ಕಲುಷಿತ ನೀರು ಸೇವನೆ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. ಇನ್ನು ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡವರಿಗೆ ಗಾಜರಕೋಟ, ಗುರುಮಠಕಲ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮಕ್ಕೆ ಹೆಚ್ಚುವರಿ ಡಿಎಚ್‌ಒ ಡಾ.ಸಾಜೀದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದೇ ವರ್ಷ ಫೆಬ್ರವರಿಯಲ್ಲಿ ಇದೇ ಗುರುಮಠಕಲ್‌ ತಾಲೂಕಿನ ಅನಪುರ ಗ್ರಾಮದ 30 ಜನರು ಕಲುಷಿತ ನೀರು ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದರು. ಇವರಲ್ಲಿ 35 ವರ್ಷದ ಸಾವಿತ್ರಮ್ಮ ಎಂಬುವರಿಗೆ ವಾಂತಿ ಭೇದಿ ಉಲ್ಬಣಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಯಾದಗಿರಿ ನಗರಸಭೆ ಅಕ್ರಮ ಬಯಲಿಗೆಳೆದ ಪೌರಾಯುಕ್ತರಿಗೆ ಜೀವ ಬೆದರಿಕೆ

ನಂತರ ಜೂನ್​ ತಿಂಗಳಲ್ಲಿ ಮತ್ತೆ ಗುರುಮಠಕಲ್ ತಾಲೂಕಿನ ಇಮ್ಲಾಪುರ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 54 ಮಂದಿಗೆ ವಾಂತಿ ಮತ್ತು ಭೇದಿ ಶುರುವಾಗಿತ್ತು. ಈ ಪೈಕಿ 22 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಿಂಗಳು ಕಳೆಯುವುದರ ಒಳಗಾಗಿ ಮೇಲಿಂದ ಮೇಲೆ ಈ ರೀತಿ ಸಂಭವಿಸುತ್ತಿದ್ದರೂ ಜಿಲ್ಲಾಡಳಿತ ಮತ್ತು ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು ಅಗತ್ಯ ಕ್ರಮ ಕೈಗೊಳ್ಳದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:00 pm, Tue, 22 August 23