ಗುರುಮಠಕಲ್: ಸಾಂಪ್ರದಾಯಿಕ ಬೆಳೆಯಿಂದ ಕೈ ಸುಟ್ಟುಕೊಂಡಿದ್ದ ರೈತ, ತೋಟಗಾರಿಕೆ ಬೆಳೆಗಳ ಬೆಳೆದು ಯಶಸ್ವಿಯಾಗಿದ್ದಾರೆ

Horticulture crops: ಸಾಂಪ್ರದಾಯಿಕ ಬೆಳೆಗಳನ್ನ ಬೆಳೆದು ಕೈ ಸುಟ್ಟುಕೊಂಡಿದ್ದ ರೈತ ಈಗ ತೋಟಗಾರಿಕೆ ಬೆಳೆಗಳನ್ನ ಬೆಳೆದು ಸಮೃದ್ಧರಾಗಿದ್ದಾರೆ. ಈಗ ಈ ರೈತನ ನೋಡಿ ಇನ್ನಿತರ ರೈತರು ಕೂಡ ತೋಟಗಾರಿಕೆ ಬೆಳೆಗಳತ್ತ ಗಮನ ಹರಿಸಿ ಬದುಕು ಕಟ್ಟಿಕೊಳ್ಳುವಂತಾಗಿದೆ.

ಗುರುಮಠಕಲ್: ಸಾಂಪ್ರದಾಯಿಕ ಬೆಳೆಯಿಂದ ಕೈ ಸುಟ್ಟುಕೊಂಡಿದ್ದ ರೈತ, ತೋಟಗಾರಿಕೆ ಬೆಳೆಗಳ ಬೆಳೆದು ಯಶಸ್ವಿಯಾಗಿದ್ದಾರೆ
ಸಾಂಪ್ರದಾಯಿಕ ಬೆಳೆಯಿಂದ ಕೈ ಸುಟ್ಟುಕೊಂಡಿದ್ದ ರೈತ, ತೋಟಗಾರಿಕೆ ಬೆಳೆಗಳ ಬೆಳೆದು ಯಶಸ್ವಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Mar 04, 2023 | 12:52 PM

ಅದು ನೀರಾವರಿ ವಂಚಿತ ಪ್ರದೇಶ. ಮಳೆ ಬಂದ್ರೆಯಷ್ಟೇ ಬೆಳೆ, ಇಲ್ಲಾಂದ್ರೆ ಬರಗಾಲ ಎನ್ನುವಂತಿದೆ. ಆದ್ರೆ ಆ ರೈತ ಮಾತ್ರ ಬರದ ನಾಡಿನಲ್ಲಿ ಬಂಗಾರದಂತ ಬೆಳೆಯನ್ನ ಬೆಳೆದಿದ್ದಾರೆ. ಸಾಂಪ್ರದಾಯಿಕ ಬೆಳೆಗಳಿಗೆ ವಿದಾಯ ಹೇಳಿ ಸಮಗ್ರ ಕೃಷಿ ಪದ್ದತಿ ಅಳವಡಿಸಿಕೊಂಡು ಕೈ ತುಂಬ ಲಾಭ ಪಡೆಯುತ್ತಿದ್ದಾರೆ (Progressive Farmer). ತೋಟಗಾರಿಕೆ ಬೆಳೆಯನ್ನ (Horticulture crops) ಬೆಳೆದು ಇತರ ರೈತರಿಗೆ ಮಾದರಿಯಾಗಿದ್ದಾರೆ. ಬರದ ನಾಡಲ್ಲಿ ಬಂಗಾರದಂತ ಬೆಳೆ.. ಸಾಂಪ್ರದಾಯಿಕ ಬೆಳೆಗೆ ಗುಡ್ ಬೈ, ಸಮಗ್ರ ಕೃಷಿ ಆದ್ಯತೆ.. ವಿವಿಧ ತೋಟಗಾರಿಕೆ ಬೆಳೆ ಬೆಳೆದು ಕೈ ತುಂಬ ಲಾಭ ಪಡೆಯುತ್ತಿರುವ ರೈತ.. ಈ ದೃಶ್ಯಾವಳಿಗಳು ಕಂಡು ಬಂದಿದ್ದು ಯಾದಗಿರಿ (Yadgir) ಜಿಲ್ಲೆಯ ಗುರುಮಠಕಲ್ (Gurmitkal) ತಾಲೂಕಿನ ಅನಪುರ ಗ್ರಾಮದಲ್ಲಿ. ಹೌದು ಗಿರಿನಾಡು ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕು ಅಂದ್ರೆ ಸಾಕಷ್ಟು ಮಹಾ ನಗರಗಳಿಗೆ ಗೂಳೆ ಹೋಗುವುದರಲ್ಲಿ ಫುಲ್ ಫೇಮಸ್ ಆಗಿದೆ. ಇದಕ್ಕೆ ಕಾರಣ ಅಂದ್ರೆ ಜಮೀನು ಇದ್ದರೂ ಸರಿಯಾದ ಬೆಳೆ ಸಿಗದ ಕಾರಣ ರೈತರು ಗುಳೆ ಹೋಗಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ ಅಂದ್ರೆ ಯಾದಗಿರಿ ಜಿಲ್ಲೆಯ ಆರು ತಾಲೂಕುಗಳ ಪೈಕಿ ಐದು ತಾಲೂಕುಗಳು ನೀರಾವರಿಯನ್ನ ಹೊಂದಿವೆ (Success Story).

ಕೃಷ್ಣ ಮತ್ತು ಭೀಮಾ ನದಿ ನೀರು ಬಳಸಿಕೊಂಡು ರೈತರು ನಾನಾ ರೀತಿಯ ಬೆಳೆಯನ್ನ ಬೆಳೆದು ಬದುಕು ಕಟ್ಟಿಕೊಂಡಿದ್ದಾರೆ. ಆದ್ರೆ ಗುರುಮಠಕಲ್ ತಾಲೂಕಿನ ರೈತರು ಮಾತ್ರ ನೀರಾವರಿಯಿಂದ ವಂಚಿತರಾಗಿದ್ದಾರೆ. ಇಡೀ ತಾಲೂಕು ನೀರಾವರಿ ವಂಚಿತ ಪ್ರದೇಶವಾಗಿದೆ. ಮಳೆ ಬಂದ್ರೆಯಷ್ಟೇ ಬೆಳೆ, ಇಲ್ಲಾಂದ್ರೆ ಬರಗಾಲ ಎನ್ನುವಂತಹ ಸ್ಥಿತಿಯಿದೆ. ಆದ್ರೆ ಇಂತಹ ಬರದ ನಾಡನಲ್ಲೂ ರೈತನೋರ್ವ ಸಾಧನೆ ಮಾಡಿದ್ದಾರೆ.

ಪ್ರತಿ ವರ್ಷ ಸಾಂಪ್ರದಾಯಿಕ ಬೆಳೆಯನ್ನ ಬೆಳೆದು ಕೈ ಸುಟ್ಟುಕೊಳ್ಳುತ್ತಿದ್ದ ಅನಪುರ ಗ್ರಾಮದ ರೈತ ಬಸರೆಡ್ಡಿ ಈಗ ಸಾಂಪ್ರದಾಯಿಕ ಬೆಳೆಗೆ ಗುಡ್ ಬೈ ಹೇಳಿದ್ದಾರೆ. ಹೀಗಾಗಿ ತಮ್ಮ ಸ್ವಂತ 22 ಎಕರೆಯಲ್ಲಿ ನಾನಾ ರೀತಿಯ ತೋಟಗಾರಿಕೆ ಬೆಳೆಯನ್ನ ಬೆಳೆದು ಯಶಸ್ಸು ಕಂಡಿದ್ದಾನೆ. ತಮ್ಮ ಜಮೀನಿನಲ್ಲಿ ಮಾವು, ಪೇರಲ, ಕಲ್ಲಂಡಿಯನ್ನ ಬೆಳೆದು ಭರ್ಜರಿ ಲಾಭ ಪಡೆದು ಇತರ ರೈತರಿಗೆ ಮಾದರಿಯಾಗಿದ್ದಾರೆ.

ಬಸರಡ್ಡಿ ತಮ್ಮ 22 ಎಕರೆಯ ಪೈಕಿ 8 ಎಕರೆಯಲ್ಲಿ ಪೇರಲ ಹಾಕಿದ್ದಾರೆ. ಕಳೆದ ನಾಲ್ಕು ವರ್ಷಗಳ ಹಿಂದೆ ಪೇರಲ ಹಾಕಿದ್ದ ರೈತ ವರ್ಷಕ್ಕೆ ಪ್ರತಿ ಎಕರೆಗೆ ಖರ್ಚು ತೆಗೆದು 1.5 ಲಕ್ಷ ಲಾಭ ಪಡೆಯುತ್ತಿದ್ದಾರೆ. ಇನ್ನು ಕಳೆದ ವರ್ಷ 2 ಎಕರೆಯಲ್ಲಿ ಮಾವು ಹಾಕಿದ್ದಾರೆ. ಈ ವರ್ಷ ಮಾವಿನ ಫಲಸು ಬರ್ತಾಯಿದ್ದ ಕಾರಣ ಎರಡು ಎಕರೆಯಲ್ಲಿ ಸುಮಾರು 2 ಲಕ್ಷ ಲಾಭದ ನಿರೀಕ್ಷೆಯಿದ್ದಾರೆ.

ಇದರ ಜೊತೆಗೆ ಕಳೆದ ವರ್ಷದಿಂದ ಮೂರು ಎಕರೆಯಲ್ಲಿ ಕಲ್ಲಂಗಡಿಯನ್ನ ಹಾಕಿದ್ದಾರೆ. ಈ ವರ್ಷ ಕಲ್ಲಂಡಿ ಕಟಾವ್ ಆಗಿದ್ದರಿಂದ ಸುಮಾರು 2 ಲಕ್ಷ ಲಾಭ ಪಡೆದಿದ್ದಾರೆ. ಇನ್ನು 6 ಎಕರೆಯಲ್ಲಿ ಭತ್ತ ಕೂಡ ಹಾಕಿದ್ದು ವರ್ಷಕ್ಕೆ ಲಕ್ಷಾಂತರ ರೂ. ಲಾಭ ಪಡೆಯುತ್ತಿದ್ದಾರೆ. ತಮ್ಮ ಜಮೀನಿನಲ್ಲಿ ಎರಡೆ ಬೋರವೆಲ್ ಕೊರೆಸಿದ್ದರಿಂದ ಸಾಕಷ್ಟು ನೀರು ಕೂಡ ಸಿಗ್ತಾಯಿದೆ ಹೀಗಾಗಿ ನೀರು ಬಳಸಿಕೊಂಡು ತೋಟಗಾರಿಕೆ ಇಲಾಖೆಯಿಂದ ಸಾಕಷ್ಟು ಸವಲತ್ತು ಪಡೆದು ಲಾಭ ಮಾಡಿಕೊಳ್ಳುತ್ತಿದ್ದಾರೆ.

ಇನ್ನು ಬಸರೆಡ್ಡಿ ಅವರು ತಾವು ಮಾತ್ರ ತೋಟಗಾರಿಕೆ ಬೆಳೆಯನ್ನ ಬೆಳೆಯುತ್ತಿಲ್ಲ. ಸಾಕಷ್ಟು ರೈತರಿಗೆ ತೋಟಗಾರಿಕೆ ಬೆಳೆಯನ್ನ ಹೇಗೆ ಬೆಳೆಯಬೇಕು ಯಾವ ಟೈಮ್ ನಲ್ಲಿ ಯಾವ ಬೆಳೆಯನ್ನ ಹಾಕಿದ್ರೆ ಲಾಭ ಬರುತ್ತೆ ಅಂತ ರೈತರಿಗೆ ಟ್ರೈನಿಂಗ್ ಕೂಡ ನೀಡುತ್ತಿದ್ದಾರೆ. ಹೀಗಾಗಿ ನಿತ್ಯ ಬಸರಡ್ಡಿ ಜಮೀನಿಗೆ ಸುತ್ತಮುತ್ತಲಿನ ಗ್ರಾಮದ ರೈತರು ಬಂದು ಮಾಹಿತಿ ಪಡೆದುಕೊಂಡು ಹೋಗುತ್ತಾರೆ. ಬಸರೆಡ್ಡಿ ಅವರು ಬೆಳೆದ ಬೆಳೆಯನ್ನ ನೋಡಿ ಇತರ ರೈತರು ಸಹ ತೋಟಗಾರಿಕೆ ಬೆಳೆಯನ್ನ ಬೆಳೆಯೋಕೆ ಆಸಕ್ತಿ ತೋರಿಸುತ್ತಿದ್ದಾರೆ.

ಒಟ್ನಲ್ಲಿ ಸಾಂಪ್ರದಾಯಿಕ ಬೆಳೆಗಳನ್ನ ಬೆಳೆದು ಕೈ ಸುಟ್ಟುಕೊಂಡಿದ್ದ ರೈತ ಈಗ ತೋಟಗಾರಿಕೆ ಬೆಳೆಗಳನ್ನ ಬೆಳೆದು ಸಮೃದ್ಧರಾಗಿದ್ದಾರೆ. ಈಗ ಈ ರೈತನ ನೋಡಿ ಇನ್ನಿತರ ರೈತರು ಕೂಡ ತೋಟಗಾರಿಕೆ ಬೆಳೆಗಳತ್ತ ಗಮನ ಹರಿಸಿ ಬದುಕು ಕಟ್ಟಿಕೊಳ್ಳುವಂತಾಗಿದೆ.

ವರದಿ: ಅಮೀನ್ ಹೊಸುರ್, ಟಿವಿ9, ಯಾದಗಿರಿ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ