ಮೂಡಬಿದಿರೆ: ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯಲ್ಲಿ ಯಕ್ಷಗಾನ ಮಾಡುತ್ತಿರುವಾಗ ಯಕ್ಷಗಾನ ಕಲಾವಿದ ವೇದಿಕೆಯಲ್ಲೇ ಕುಸಿದುಬಿದ್ದಿರುವ ಘಟನೆ ನಡೆದಿದೆ. ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು, ಯಕ್ಷಗಾನ ಕಲಾವಿದ ಮೋಹನ್ ಕುಮಾರ್ ಅಮ್ಮುಂಜೆ ಎಂಬುವವರು ಯಕ್ಷಗಾನ ಮಾಡುತ್ತಿದ್ದಾಗಲೇ ತಲೆ ತಿರುಗಿ ಬಿದ್ದಿದ್ದಾರೆ. ಬಳಿಕ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಮೂಡಬಿದಿರೆ ತಾಲೂಕಿನ ಅಲಂಗಾರು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ಇಲ್ಲಿ ನಿನ್ನೆ ರಾತ್ರಿ ನಡೆಯುತ್ತಿದ್ದ ‘ಕರ್ಣ ಪರ್ವ’ ಯಕ್ಷಗಾನ ಪ್ರಸಂಗದಲ್ಲಿ ಅರ್ಜುನ ಪಾತ್ರಧಾರಿಯಾಗಿದ್ದ ಮೋಹನ್ ಕುಮಾರ್ ಅಮ್ಮುಂಜೆ ಕರ್ಣನ ವೇಷಧಾರಿಯೊಂದಿಗೆ ವೇದಿಕೆಯಲ್ಲಿ ಸಂಭಾಷಣೆ ಮಾಡುತ್ತಾ ಕುಣಿಯುತ್ತಿದ್ದಾಗ ತಲೆ ತಿರುಗಿ ಬಿದ್ದಿದ್ದಾರೆ. ತಕ್ಷಣ ವೇದಿಕೆಯಲ್ಲಿದ್ದ ಕಲಾವಿದರು ಹಾಗೂ ಹಿಮ್ಮೇಳದವರು ಮೋಹನ್ ಕುಮಾರ್ ಅವರನ್ನು ಎತ್ತಿ ಕೂರಿಸಿದ್ದಾರೆ.
ಕೊರೊನಾದಿಂದಾಗಿ ಹಲವು ತಿಂಗಳಿಂದ ಯಕ್ಷಗಾನ ಪ್ರದರ್ಶನ ನಡೆಯದ ಕಾರಣ ಇದ್ದಕ್ಕಿದ್ದಂತೆ ವೇದಿಕೆ ಏರಿದಾಗ ಫೋಕಸ್ ಲೈಟ್ನಿಂದ ತಲೆ ತಿರುಗಿದೆ. ನಾನೀಗ ಆರೋಗ್ಯವಾಗಿದ್ದೇನೆ ಎಂದು ಮೋಹನ್ ಕುಮಾರ್ ತಿಳಿಸಿದ್ದಾರೆ. ಕೊಂಚ ಚೇತರಿಸಿಕೊಂಡ ಬಳಿಕ ನಿನ್ನೆ ತಾವೇ ಅರ್ಜುನನ ಪಾತ್ರವನ್ನು ಮೋಹನ್ ಕುಮಾರ್ ನಿಭಾಯಿಸಿದ್ದಾರೆ.
ಇದನ್ನೂ ಓದಿ: ಎರಡನೇ ಡೋಸ್ ಲಸಿಕೆ ಪಡೆದರೂ ನೆಗೆಟಿವ್ ರಿಪೋರ್ಟ್ ಕಡ್ಡಾಯ; ಮಂಗಳೂರು ವಿವಿ ಪದವಿ ಪರೀಕ್ಷೆಗೆ ವಿದ್ಯಾರ್ಥಿಗಳ ಪರದಾಟ
ಆನ್ಲೈನ್ ಯಕ್ಷಗಾನ; ಉಡುಪಿಯಿಂದಲೇ ಬ್ರಿಟನ್ ಮತ್ತು ಜರ್ಮನ್ನಲ್ಲಿರುವವರಿಗೆ ತರಬೇತಿ
(Yakshagana Artist Fell Down while Performing Yakshagana in Stage at Mudbidri)
Published On - 7:13 pm, Tue, 10 August 21