ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ಮೂರೂವರೆ ವರ್ಷದ ಬಾಲಕನ ಹೆಸರು ದಾಖಲು

ಏಪ್ರಿಲ್ 24 2021 ರಂದು ಹರ್ಯಾಣ ರಾಜ್ಯದ ಫರಿದಾಬಾದ್​ನಲ್ಲಿರುವ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ಮೂರುವರೆ ವರ್ಷದ ನಿನಾದ್​ನ ಸಾಧನೆ ದಾಖಲಾಗಿದೆ. ಲಾಕ್​ಡೌನ್​ನಿಂದಾಗಿ ಇತ್ತಿಚೇಗಷ್ಟೇ ನಿನಾದ್​ಗೆ ಪ್ರಶಸ್ತಿ ಪತ್ರ ಲಭಿಸಿದೆ.

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ಮೂರೂವರೆ ವರ್ಷದ ಬಾಲಕನ  ಹೆಸರು ದಾಖಲು
ನಿನಾದ್​
Follow us
preethi shettigar
|

Updated on: May 31, 2021 | 8:37 AM

ದಾವಣಗೆರೆ: ಸಾಮಾನ್ಯವಾಗಿ ಮಕ್ಕಳು ಸ್ಪಷ್ಟವಾಗಿ ಮಾತನಾಡಲು ಕಲಿಯುವುದೇ 5ವರ್ಷದ ನಂತರದಲ್ಲಿ ಇನ್ನು ಪುಸ್ತಕದ ವಿಷಯಗಳನ್ನು ನೆನಪಿನ್ನಲ್ಲಿಟ್ಟುಕೊಂಡು ಹೇಳುವುದಕ್ಕೆ ಇನ್ನು ಕೊಂಚ ಸಮಯ ಬೇಕಾಗುತ್ತದೆ. ಆದರೆ ವಿಜಯನಗರ ಜಿಲ್ಲೆ ಹರಪನಹಳ್ಳಿ ಪಟ್ಟಣದ ಮಕ್ಕಳ ವೈದ್ಯರಾದ ಡಾ. ಅಮರ್.ಪಿ ಹಾಗೂ ದಂತ ವೈದ್ಯೆ ಡಾ. ಚಂದನ ಅವರ ಪುತ್ರ ನಿನಾದ್ ಗುಪ್ತ ಅಪ್ರತಿಮ ಸ್ಮರಣಾ ಶಕ್ತಿ ಹೊಂದಿರುವ ಮೂರುವರೆ ವರ್ಷದ ಬಾಲಕ. ಈ ಪುಟ್ಟ ಬಾಲಕ ‘ಬೃಹಸ್ಪತಿ ಹಿಂದೂ ಸಂವತ್ಸರ ಚಕ್ರದ ಸಂವತ್ಸರಗಳನ್ನು ಕೇವಲ 62 ಸೆಕೆಂಡ್​ಗಳಲ್ಲಿ ಹೇಳುವ ಮೂಲಕ ಸಾಧನೆ ಮಾಡಿದ್ದಾನೆ.

ಏಪ್ರಿಲ್ 24 2021 ರಂದು ಹರ್ಯಾಣ ರಾಜ್ಯದ ಫರಿದಾಬಾದ್​ನಲ್ಲಿರುವ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ಮೂರುವರೆ ವರ್ಷದ ನಿನಾದ್​ನ ಸಾಧನೆ ದಾಖಲಾಗಿದೆ. ಲಾಕ್​ಡೌನ್​ನಿಂದಾಗಿ ಇತ್ತಿಚೇಗಷ್ಟೇ ನಿನಾದ್​ಗೆ ಪ್ರಶಸ್ತಿ ಪತ್ರ ಲಭಿಸಿದೆ. 1 ವರ್ಷದವನಿದ್ದಾಗಲೇ ಚಿತ್ರಪಟಗಳಲ್ಲಿರುವ ವಿವಿಧ ಬಗೆಯ ಪಕ್ಷಿಗಳು, ಪ್ರಾಣಿಗಳು, ಕೀಟಗಳು , ಜಗತ್ತಿನ ಅದ್ಭುತಗಳು ಮತ್ತು ಪ್ರಸಿದ್ಧ ವ್ಯಕ್ತಿಗಳನ್ನ ನಿನಾದ್​ ಗುರುತಿಸುತ್ತಿದ್ದ ಎಂದು ಬಾಲಕನ ತಂದೆ ಡಾ. ಅಮರ್.ಪಿ ತಿಳಿಸಿದ್ದಾರೆ.

ನಿನಾದ್​ 15 ತಿಂಗಳಿದ್ದಾಗಲೇ ವಿವಿಧ ಬಗೆಯ ಆಕಾರಗಳು ಮತ್ತು ಬಣ್ಣಗಳನ್ನು ಗುರುತಿಸತೊಡಗಿದ್ದ. ಈ ಆಕಾರ ಮತ್ತು ಬಣ್ಣ ಗುರುತಿಸುವ ಸಾಮರ್ಥ್ಯವು ಸಾಮಾನ್ಯವಾಗಿ ಮಕ್ಕಳಲ್ಲಿ ಮೂರು ವರ್ಷಕ್ಕೆ ಪಕ್ವವಾಗುತ್ತದೆ ಆದರೆ ನಿನಾದ್​ ಅತ್ಯಂತ ವೇಗವಾಗಿ ಇದನ್ನು ಗುರುತಿಸಿದ್ದ. ಆದರೆ ಕೊವಿಡ್​ನಿಂದ ಪ್ಲೇ ಗ್ರೂಪ್​ಗೆ ಸೇರಿಸಲಾಗಲಿಲ್ಲ. ಹಾಗಾಗಿ ಈತನಿಗೆ ಮನೆಯೇ ಮೊದಲ ಪಾಠಶಾಲೆಯಾಗಿ ಬಿಟ್ಟಿದೆ. ಈತನ ಅಜ್ಜಿ ಸುಜಾತ ಗುಪ್ತ ರವರು ಶಿಕ್ಷಕಿಯಾಗಿದ್ದರು. ಈಗ ಅವರೇ ಈತನಿಗೆ ಮನೆ ಪಾಠ ಹೇಳಿಕೊಡುತ್ತಿದ್ದಾರೆ ಎಂದು ಬಾಲಕನ ತಾಯಿ ಡಾ. ಚಂದನ ತಿಳಿಸಿದ್ದಾರೆ.

ಮೂರುವರೆ ವರ್ಷದ ಈತ ಈಗ ಪ್ರಪಂಚದ 196 ರಾಷ್ಟ್ರಗಳ ರಾಜಧಾನಿಗಳನ್ನ ಸ್ಮರಿಸಬಲ್ಲ, 0 ಇಂದ 20 ರವರೆಗೆ ಗಣಿತ ಮಗ್ಗಿಗಳನ್ನ ನಿರರ್ಗಳವಾಗಿ ಹೇಳಬಲ್ಲ, ಸೌರ ಮಂಡಲದ 30 ಕ್ಕೂ ಹೆಚ್ಚ್ಚು ಕಾಯಗಳ ಹೆಸರುಗಳನ್ನ ಹೇಳುತ್ತಾನೆ. ಅಲ್ಲದೆ ಈತನಿಗೆ ಸಂಖ್ಯೆಗಳು ಮತ್ತು ಗಣಿತವೆಂದರೆ ತುಂಬಾ ಒಲವು. ಈಗಲೇ ಈತ ಮೂರನೇ ತರಗತಿ ಪಠ್ಯದ ಸಾಮಾನ್ಯ ಗಣಿತದ ಲೆಕ್ಕಗಳನ್ನು ಬಿಡಿಸುತ್ತಾನೆ. ಇನ್ನು ಟ್ರಿಲಿಯನ್, ಬಿಲಿಯನ್​ಗಳ ಸಂಖ್ಯೆಗಳನ್ನ ಗುರುತಿಸುತ್ತಾನೆ. 3000 ಸಾವಿರವರೆಗಿನ ಸಂಖ್ಯೆಗಳನ್ನ ರೋಮನ್ ಸಂಖ್ಯೆಗಳಾಗಿ ಪರಿವರ್ತಿಸಿ ಹೇಳುತ್ತಾನೆ. ಸುಲಭವಾಗಿ ಕನ್ನಡ ಮತ್ತು ಇಂಗ್ಲಿಷ್ ಭಾಷೆ ಓದುತ್ತಾನೆ.

ಒಟ್ಟಾರೆ ಪುಟ್ಟ ವಯಸ್ಸಿನಲ್ಲಿಯೇ ಇಷ್ಟೋಂದು ಜ್ಞಾನವಂತನಾಗಿರುವುದು ನಿಜಕ್ಕೂ ಹೆಮ್ಮೆಯ ವಿಚಾರ. ನಿನಾದ್ ಮುಂದಿನ ದಿನಗಳಲ್ಲಿ ಇನ್ನಷ್ಟೂ ನೂತನ ಸಾಧನೆಗಳನ್ನು ಮಾಡಲಿ, ಆ ಮೂಲಕ ದೇಶಕ್ಕೆ ಉತ್ತಮ ಹೆಸರು ತಂದುಕೊಡಲಿ ಎನ್ನುವುದು ನಮ್ಮ ಆಶಯ.

ಇದನ್ನೂ ಓದಿ:

ಸಂಗೀತ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ: ಬಾಲ ವಿಕಾಸ ಅಕಾಡೆಮಿಯ ಬಾಲ ಗೌರವ ಪ್ರಶಸ್ತಿಗೆ ಯಾದಗಿರಿ ಜಿಲ್ಲೆಯ ಬಾಲಕಿ ಆಯ್ಕೆ

ಕಡಿಮೆ ಸಮಯದಲ್ಲಿ 170 ಬಾರಿ ಸೂರ್ಯ ನಮಸ್ಕಾರ ಮಾಡಿ ಗಿನ್ನಿಸ್ ದಾಖಲೆ ಬರೆದ ಉಡುಪಿ ಮಹಿಳೆ

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್