ಯುವಕರಿಂದ ಬಾಲಕನಿಗೆ ಚಿತ್ರಹಿಂಸೆ, ಕಂಠೀರವ ಸ್ಟೇಡಿಯಂ ಕೆರೆಯಲ್ಲಿ ಪುಂಡಾಟ

ಬೆಂಗಳೂರು: ಯುವಕರ ಗುಂಪೊಂದು ಬಾಲಕನನ್ನು ನೀರಿನಲ್ಲಿ ಮುಳುಗಿಸಿ ಚಿತ್ರ ಹಿಂಸೆ ನೀಡಿದ ಅಮಾನವೀಯ ಘಟನೆಯೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಹರ್ಷವರ್ಧನ ಎಂಬ ಬಾಲಕನನ್ನು ಮ್ಯಾನುಯಲ್, ಸೂರ್ಯ , ಚರಣ್ ಮುಂತಾದ ಯುವಕರ ಗುಂಪು ನೀರಲ್ಲಿ ಮುಳುಗಿಸಿ ಚಿತ್ರಹಿಂಸೆ ಕೊಡುವುದು ವಿಡಿಯೋದಲ್ಲಿ ಸೆರೆಯಾಗಿದೆ. ಬೆಂಗಳೂರಿನ ಕಂಠೀರವ ಸ್ಟೇಡಿಯಂ ಬಳಿ ಇರುವ ಐತಿಹಾಸಿಕ ಕಲ್ಯಾಣಿಯಲ್ಲಿ ಈ ಘಟನೆ ನಡೆದಿದೆ. ಬಾಲಕ ಎಷ್ಟೇ ಅಂಗಲಾಚಿದರೂ, ಈಜು ಬರಲ್ಲ ಬಿಡಿ ಅಣ್ಣಾ, ಜೀವ ಹೋಗತ್ತೆ ಎಂದು ಚೀರಿದರೂ ಕ್ಯಾರೇ ಅನ್ನದೆ ಯುವಕರು ಚಿತ್ರಹಿಂಸೆ […]

ಯುವಕರಿಂದ ಬಾಲಕನಿಗೆ ಚಿತ್ರಹಿಂಸೆ, ಕಂಠೀರವ ಸ್ಟೇಡಿಯಂ ಕೆರೆಯಲ್ಲಿ ಪುಂಡಾಟ
ಸಾಧು ಶ್ರೀನಾಥ್​

Updated on: Nov 21, 2019 | 12:30 PM

ಬೆಂಗಳೂರು: ಯುವಕರ ಗುಂಪೊಂದು ಬಾಲಕನನ್ನು ನೀರಿನಲ್ಲಿ ಮುಳುಗಿಸಿ ಚಿತ್ರ ಹಿಂಸೆ ನೀಡಿದ ಅಮಾನವೀಯ ಘಟನೆಯೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಹರ್ಷವರ್ಧನ ಎಂಬ ಬಾಲಕನನ್ನು ಮ್ಯಾನುಯಲ್, ಸೂರ್ಯ , ಚರಣ್ ಮುಂತಾದ ಯುವಕರ ಗುಂಪು ನೀರಲ್ಲಿ ಮುಳುಗಿಸಿ ಚಿತ್ರಹಿಂಸೆ ಕೊಡುವುದು ವಿಡಿಯೋದಲ್ಲಿ ಸೆರೆಯಾಗಿದೆ. ಬೆಂಗಳೂರಿನ ಕಂಠೀರವ ಸ್ಟೇಡಿಯಂ ಬಳಿ ಇರುವ ಐತಿಹಾಸಿಕ ಕಲ್ಯಾಣಿಯಲ್ಲಿ ಈ ಘಟನೆ ನಡೆದಿದೆ.

ಬಾಲಕ ಎಷ್ಟೇ ಅಂಗಲಾಚಿದರೂ, ಈಜು ಬರಲ್ಲ ಬಿಡಿ ಅಣ್ಣಾ, ಜೀವ ಹೋಗತ್ತೆ ಎಂದು ಚೀರಿದರೂ ಕ್ಯಾರೇ ಅನ್ನದೆ ಯುವಕರು ಚಿತ್ರಹಿಂಸೆ ನೀಡಿದ್ದಾರೆ. ಪ್ರಕರಣ ಇದೀಗ ಸಂಪಂಗಿ ರಾಮ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

6ಆರೋಪಿಗಳ ಬಂಧನ:
ಪ್ರಕರಣದ ಸಂಬಂಧ ಪೊಲೀಸರು 6 ಮಂದಿಯನ್ನು ಬಂಧಿಸಿದ್ದಾರೆ. ಇದರಲ್ಲಿ ಐವರು ಅಪ್ರಾಪ್ತರು. ಅವರನ್ನ ಜ್ಯೂವೆನಲ್ ಕೋರ್ಟ್​ಗೆ ಹಾಜರುಪಡಿಸಿ ಪುನರ್ವಸತಿ ಕೇಂದ್ರಕ್ಕೆ ಕಳಿಸಲಾಗುವುದು. ಈ ಕೇಸಲ್ಲಿ ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ ಎಂದು ಡಿಸಿಪಿ ಚೇತನ್ ಸಿಂಗ್ ರಾತೋರ್ ತಿಳಿಸಿದ್ದಾರೆ.

Published On - 10:02 am, Thu, 21 November 19

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us