ವಕ್ಫ್​ ಗುಮ್ಮ: ಜಂಟಿ ಸದನ ಸಮಿತಿ ಅಧ್ಯಕ್ಷರ ಆಗಮನಕ್ಕೆ ವಿರೋಧ, ಡೋಂಟ್ ಟಚ್ ವಕ್ಫ್​ ಎಂದ ಜಮೀರ್

ಕರ್ನಾಟಕದಲ್ಲಿ ವಕ್ಫ್​ ಆಸ್ತಿ ವಿವಾದ ತೀವ್ರಗೊಂಡಿದೆ. ರೈತರ ಜಮೀನ ಪಹಣಿಯಲ್ಲಿ ವಕ್ಫ್​ ಭೂಮಿ ಎಂದು ಹೆಸರು ಬರುತ್ತಿದೆ. ಇದರಿಂದ ರೈತರು ಆತಂಕಗೊಂಡಿದ್ದು, ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ. ಇನ್ನು ಸಂಬಂಧ ಬಿಜೆಪಿ ಪ್ರತಿಭಟನೆ ನಡೆಸಿದ್ದು, ಕೇಂದ್ರಕ್ಕೆ ಪತ್ರ ಬರೆದಿದೆ. ಹೀಗಾಗಿ ನಾಳೆ(ನವೆಂಬರ್ 07) ಜಂಟಿ ಸದನ ಸಮಿತಿ ಅಧ್ಯಕ್ಷ ಕರ್ನಾಟಕ್ಕೆ ಆಗಮಿಸಲಿದ್ದಾರೆ.ಆದ್ರೆ, ಇತ್ತ ಸಚಿವ ಜಮೀರ್ ಅಹಮ್ಮದ್ ಖಾನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ವಕ್ಫ್​ ಗುಮ್ಮ:  ಜಂಟಿ ಸದನ ಸಮಿತಿ ಅಧ್ಯಕ್ಷರ ಆಗಮನಕ್ಕೆ ವಿರೋಧ, ಡೋಂಟ್ ಟಚ್ ವಕ್ಫ್​ ಎಂದ ಜಮೀರ್
ಜಗದಾಂಬಿಕಾ ಪಾಲ್ - ಜಮೀರ್ ಅಹ್ಮದ್
Follow us
ಶಿವಕುಮಾರ್ ಪತ್ತಾರ್. ಹುಬ್ಬಳ್ಳಿ
| Updated By: ರಮೇಶ್ ಬಿ. ಜವಳಗೇರಾ

Updated on: Nov 06, 2024 | 6:50 PM

ಹುಬ್ಬಳ್ಳಿ, (ನವೆಂಬರ್ 06): ಕರ್ನಾಟಕ ಹಲವು ಜಿಲ್ಲೆಗಳಲ್ಲಿ ವಕ್ಫ್​ ಆಸ್ತಿ ವಿವಾದ ಭಾರೀ ಸುದ್ದು ಮಾಡಿದ್ದು, ಈ ಸಂಬಂಧ ರೈತರ ಸಮಸ್ಯೆ ಆಲಿಸಲು ಜಂಟಿ ಸದನ ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರು ನವೆಂಬರ್ 7 ರಂದು ಹುಬ್ಬಳ್ಳಿ ಮತ್ತು ವಿಜಯಪುರಕ್ಕೆ ಭೇಟಿ ನೀಡಿ, ರೈತರೊಂದಿಗೆ ಸಂವಾದ ನಡೆಸಲಿದ್ದಾರೆ. ಆದರೆ, ಇದಕ್ಕೆ ಸಚಿವ ಜಮೀರ್ ಅಹಮ್ಮದ್ ಖಾನ್ ವಿರೋಧ ವ್ಯಕ್ತಪಡಿಸಿದ್ದಾರೆ. ಅವರು ಬರುತ್ತಿರುವುದು ಅನಧಿಕೃತ. ಡೋಂಟ್ ಟಚ್ ವಕ್ಫ್​ ಎಂದು ಗುಡುಗಿದ್ದಾರೆ.

ಜಂಟಿ ಸದನ ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರು ನಾಳೆ ಕರ್ನಾಟಕಕ್ಕೆ ಭೇಟಿ ನೀಡುತ್ತಿರುವ ಬಗ್ಗೆ ಮಾತನಾಡಿರುವ ಜಮೀರ್ ಅಹಮ್ಮದ್ ಖಾನ್, ಪಾರ್ಲಿಮೆಂಟ್ ನಲ್ಲಿ ಬಿಲ್ ತರುವುದಕ್ಕೆ ಕಮಿಟಿ ಮಾಡಿರುವುದು. ಅವರು ಬರುತ್ತಿರುವುದೇ ಅನಧಿಕೃತ. ಜೆಪಿಸಿ ಮಾಡಿರೋದ್ಯಾಕೆ? ವಕ್ಫ್​ ಬಿಲ್​ಗೆ ಎಂದು ಮಾಡಿರುವುದು ಎಂದರು.

ಇದನ್ನೂ ಓದಿ: ವಕ್ಫ್​ ಆಸ್ತಿ ವಿವಾದ: ನ.7ಕ್ಕೆ ಕರ್ನಾಟಕಕ್ಕೆ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಭೇಟಿ!

ಪಾರ್ಲಿಮೆಂಟ್ ನಲ್ಲಿ ವಕ್ಫ್​ ಬಿಲ್ ತರುತ್ತಿದ್ದಾರೆ. ಅದಕ್ಕೆ ಅಂತಾ ಕಮಿಟಿ ಮಾಡುತ್ತಿದ್ದಾರೆ. ಇದಕ್ಕಲ್ಲ. ಇದರಲ್ಲಿ ಅವರು ಹೇಗೆ ಬರೋಕೆ ಆಗುತ್ತೆ? ಕೇಂದ್ರಕ್ಕೆ ಪವರ್ ಇದೆ, ಅದಕ್ಕೆ ಅಂತ ಸಪ್ರೇಟ್ ಕಮಿಟಿ ಮಾಡುಬೇಕು ಅಲ್ವಾ? ಕರ್ನಾಟಕದಲ್ಲಿ ಗೊಂದಲ ಆಗಿದೆ ಅಂತ ಕಮಿಟಿ ಮಾಡಲಿ ಎಂದು ಹೇಳಿದರು.

ಪ್ರಮೋದ್ ಮುತಾಲಿಕ್ ಹೇಳಿಕೆಗೆ ಜಮೀರ್ ಅಹ್ಮದ್ ಪ್ರತಿಕ್ರಿಯಿಸಿ, ಬಿಜೆಪಿ ಅವರಿಗೆ ಯಾವುದೇ ಇಶ್ಯೂ ಇಲ್ಲ. ಮುತಾಲಿಕ್, ಬಿಜೆಪಿ ಎರಡು ಒಂದೇ . ಏಕ್ ದಿಲ್ ದೋ ಜಾನ್ ತರಹ, ಅವರೆಲ್ಲಾ ಒಂದೇನೆ. ನಾವ್ಯಾಯಾರಿಗೂ ತೊಂದರೆ ಕೊಡೋಕೆ ಮಾಡಿಲ್ಲ . ವಕ್ಫ್​ ಆಸ್ತಿ ಇರೋದು 1ಲಕ್ಷ 12 ಸಾವಿರ ಎಕರೆ. ಈಗ ನಮ್ಮ ಬಳಿ 23 ಸಾವಿರ ಇದೆ . ಆಸ್ತಿ ಒಂದು ಇಂಚು ಬಿಡಬೇಡಿ ಎಂದು ಬೊಮ್ಮಾಯಿ ಹೇಳಿದ್ರು . ಈಗ ಉಲ್ಟಾ ಹೊಡೆಯುತ್ತಿದ್ದಾರೆ . ರೈತರು ನಮ್ಮ ಅನ್ನದಾತರು, ಅವರಿಗೆ ತೊಂದರೆ ಕೊಡಲ್ಲ . ರೈತರಿಗೆ ನೋಟಿಸ್ ಕೊಟ್ಟಿದ್ದಾರೆ ಅಂತ ಗೊಂದಲ ಸೃಷ್ಟಿ ಮಾಡಿದ್ರು, ವಾಪಸ್ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.

ನಾಳೆ ರಾಜ್ಯಕ್ಕೆ ಜಗದಾಂಬಿಕಾ ಪಾಲ್

ರಾಜ್ಯದಲ್ಲಿ ವಕ್ಫ ವಿವಾದ ಬುಗಿಲೆದ್ದ ಹಿನ್ನಲೆಯಲ್ಲಿ ಬಿಜೆಪಿ ನಾಯಕರು ಬರೆದಿದ್ದ ಪತ್ರಕ್ಕೆ ಜಾಯಿಂಟ್ ಪಾರ್ಲಿಮೆಂಟ್ ಕಮಿಟಿ ಸ್ಪಂದಿಸಿದ್ದು, ನಾಳೆ(ನವೆಂಬರ್ 07) ಜಂಟಿ ಸದನ ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರು ಮೊದಲು ಹುಬ್ಬಳ್ಳಿಗೆ ಭೇಟಿ ನೀಡಲಿದ್ದಾರೆ. ಬೆಳಿಗ್ಗೆ 8.45 ಆಗಮಿಸಲಿರೋ‌ ಕಮಿಟಿ, ರೈತರ ಬಲಿ ಮಾಹಿತಿ ಸಂಗ್ರಹಿಸಿ ಬಳಿಕ ಬೆಳಗಾವಿಗೆ ತೆರಳಲಿದೆ.

ಕರ್ನಾಟಕ ಸಂಬಂಧಿತ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Video: ಜಾರ್ಖಂಡ್​ನಲ್ಲಿ ಬಸ್ ಪಲ್ಟಿ, 7 ಮಂದಿ ಸಾವು
Video: ಜಾರ್ಖಂಡ್​ನಲ್ಲಿ ಬಸ್ ಪಲ್ಟಿ, 7 ಮಂದಿ ಸಾವು
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲೋದು: ಕುಮಾರಸ್ವಾಮಿ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲೋದು: ಕುಮಾರಸ್ವಾಮಿ
6,6,6,6,6,6,6,6: ಸಿಕ್ಸರ್​ಗಳ ಸುರಿಮಳೆ, 8 ಎಸೆತಗಳಲ್ಲಿ 8 ಸಿಕ್ಸ್​
6,6,6,6,6,6,6,6: ಸಿಕ್ಸರ್​ಗಳ ಸುರಿಮಳೆ, 8 ಎಸೆತಗಳಲ್ಲಿ 8 ಸಿಕ್ಸ್​
ಬೈಂದೂರಲ್ಲಿ ಲ್ಯಾಂಡ್ ಆದ ಬಳಿಕ ಶಿವಕುಮಾರ್​ಗೆ ಶೆಡ್ಯೂಲ್ ಮರೆತುಹೋಯಿತೇ?
ಬೈಂದೂರಲ್ಲಿ ಲ್ಯಾಂಡ್ ಆದ ಬಳಿಕ ಶಿವಕುಮಾರ್​ಗೆ ಶೆಡ್ಯೂಲ್ ಮರೆತುಹೋಯಿತೇ?
ಯಾರದ್ದೋ ಪಿಂಚಣಿ ಹಣ, ಇನ್ನಯಾರದ್ದೋ ಖಾತೆಗೆ ಜಮೆ: ವೃದ್ಧ ದಂಪತಿ ಕಣ್ಣೀರು
ಯಾರದ್ದೋ ಪಿಂಚಣಿ ಹಣ, ಇನ್ನಯಾರದ್ದೋ ಖಾತೆಗೆ ಜಮೆ: ವೃದ್ಧ ದಂಪತಿ ಕಣ್ಣೀರು
ಕೇವಲ 2 ತಿಂಗಳು ಹಿಂದೆ ಚಿಕ್ಕಬಳ್ಳಾಪುರದಿಂದ ಟ್ರಾನ್ಸ್​ಫರ್ ಆಗಿರುವ ಅಧಿಕಾರಿ
ಕೇವಲ 2 ತಿಂಗಳು ಹಿಂದೆ ಚಿಕ್ಕಬಳ್ಳಾಪುರದಿಂದ ಟ್ರಾನ್ಸ್​ಫರ್ ಆಗಿರುವ ಅಧಿಕಾರಿ
ಸಿಎಂ ಇವತ್ತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ರನ್ನು ಭೇಟಿಯಾಗಲಿದ್ದಾರೆ
ಸಿಎಂ ಇವತ್ತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ರನ್ನು ಭೇಟಿಯಾಗಲಿದ್ದಾರೆ
ಕೇವಲ 27 ದಿನಗಳಲ್ಲೇ ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ಕೇವಲ 27 ದಿನಗಳಲ್ಲೇ ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ಪ್ರಧಾನಿ ಮೋದಿಗೆ ಗಾಯಾನಾದ ಅತ್ಯುನ್ನತ ನಾಗರಿಕ ಪ್ರಶಸ್ತಿ
ಪ್ರಧಾನಿ ಮೋದಿಗೆ ಗಾಯಾನಾದ ಅತ್ಯುನ್ನತ ನಾಗರಿಕ ಪ್ರಶಸ್ತಿ
ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ ಮೇಲೆ ಮಧು ಅಸ್ತ್ರ
ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ ಮೇಲೆ ಮಧು ಅಸ್ತ್ರ