ಮಹಿಳೆ ಹೊಟ್ಟೆಯಲ್ಲಿ ಒಂದಲ್ಲ, ಎರಡಲ್ಲ.. 15 ಕೆಜಿ ಗಡ್ಡೆ ಪತ್ತೆ! ಏನು ಮಾಡಿದರು ವೈದ್ಯರು?

ಚಿಕ್ಕಮಗಳೂರು: ಮಹಿಳೆಯೊಬ್ಬರ ಹೊಟ್ಟೆಯಲ್ಲಿದ್ದ ಬರೋಬ್ಬರಿ 15 ಕೆ.ಜಿ ಗಡ್ಡೆಯನ್ನ ಯಶಸ್ವಿಯಾಗಿ ಹೊರತೆಗೆದು ಅವರಿಗೆ ಪುನರ್ಜನ್ಮ ನೀಡಿರೋ ಅಪರೂಪದ ಘಟನೆ ಜಿಲ್ಲೆಯ ಕೊಪ್ಪ ಆಸ್ಪತ್ರೆಯಲ್ಲಿ ನಡೆದಿದೆ. ಶಿವಮೊಗ್ಗ ಮೂಲದ 45 ವರ್ಷದ ಶಫುರಭಿ ಎಂಬ ಮಹಿಳೆಯ ಹೊಟ್ಟೆಯಲ್ಲಿದ್ದ ಗಡ್ಡೆಯನ್ನ ಶಸ್ತ್ರಚಿಕಿತ್ಸೆ ಮಾಡಿ ಕೊಪ್ಪದ ವೈದ್ಯ ಡಾ. ಬಾಲಕೃಷ್ಣ ಹೊರತೆಗೆದಿದ್ದಾರೆ. ಅಪರೇಶನ್ ವೇಳೆ ಡಾ.ಬಾಲಕೃಷ್ಣಗೆ ಡಾ. ಧನಂಜಯ್, ನರ್ಸ್ ರೇಷ್ಮಾ ಮತ್ತು ಸಿಬ್ಬಂದಿಯಾದ ಮಂಜುನಾಥ್ ಸಹಾಯ ಮಾಡಿದ್ದರು. ಯಶಸ್ವಿ ಚಿಕಿತ್ಸೆ ಬಳಿಕ ಆರೋಗ್ಯವಾಗಿರೋ ಮಹಿಳೆ ಸದ್ಯ ಆಸ್ಪತ್ರೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ. […]

ಮಹಿಳೆ ಹೊಟ್ಟೆಯಲ್ಲಿ ಒಂದಲ್ಲ, ಎರಡಲ್ಲ.. 15 ಕೆಜಿ ಗಡ್ಡೆ ಪತ್ತೆ! ಏನು ಮಾಡಿದರು ವೈದ್ಯರು?
Follow us
KUSHAL V
| Updated By: ಸಾಧು ಶ್ರೀನಾಥ್​

Updated on: Jul 04, 2020 | 12:42 PM

ಚಿಕ್ಕಮಗಳೂರು: ಮಹಿಳೆಯೊಬ್ಬರ ಹೊಟ್ಟೆಯಲ್ಲಿದ್ದ ಬರೋಬ್ಬರಿ 15 ಕೆ.ಜಿ ಗಡ್ಡೆಯನ್ನ ಯಶಸ್ವಿಯಾಗಿ ಹೊರತೆಗೆದು ಅವರಿಗೆ ಪುನರ್ಜನ್ಮ ನೀಡಿರೋ ಅಪರೂಪದ ಘಟನೆ ಜಿಲ್ಲೆಯ ಕೊಪ್ಪ ಆಸ್ಪತ್ರೆಯಲ್ಲಿ ನಡೆದಿದೆ.

ಶಿವಮೊಗ್ಗ ಮೂಲದ 45 ವರ್ಷದ ಶಫುರಭಿ ಎಂಬ ಮಹಿಳೆಯ ಹೊಟ್ಟೆಯಲ್ಲಿದ್ದ ಗಡ್ಡೆಯನ್ನ ಶಸ್ತ್ರಚಿಕಿತ್ಸೆ ಮಾಡಿ ಕೊಪ್ಪದ ವೈದ್ಯ ಡಾ. ಬಾಲಕೃಷ್ಣ ಹೊರತೆಗೆದಿದ್ದಾರೆ. ಅಪರೇಶನ್ ವೇಳೆ ಡಾ.ಬಾಲಕೃಷ್ಣಗೆ ಡಾ. ಧನಂಜಯ್, ನರ್ಸ್ ರೇಷ್ಮಾ ಮತ್ತು ಸಿಬ್ಬಂದಿಯಾದ ಮಂಜುನಾಥ್ ಸಹಾಯ ಮಾಡಿದ್ದರು. ಯಶಸ್ವಿ ಚಿಕಿತ್ಸೆ ಬಳಿಕ ಆರೋಗ್ಯವಾಗಿರೋ ಮಹಿಳೆ ಸದ್ಯ ಆಸ್ಪತ್ರೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ.

ಕಳೆದ ಕೆಲವು ತಿಂಗಳಿನಿಂದ ಶಫುರಭಿರ ಹೊಟ್ಟೆಯ ಭಾಗ ಉಬ್ಬ ತೊಡಗಿತ್ತು. ದಪ್ಪ ಆಗಿರೋ ಪರಿಣಾಮದಿಂದಲೇ ಹೊಟ್ಟೆ ಕೂಡ ಉಬ್ಬಿರಬಹುದು ಅಂತಾ ಭಾವಿಸಿ ಸುಮ್ಮನಾಗಿದ್ರು. ಆದ್ರೆ ಕೆಲವು ದಿನಗಳ ನಂತರ ಉಸಿರಾಟದ ಸಮಸ್ಯೆ ಎದುರಾಗ ತೊಡಗಿತು. ಈ ವೇಳೆ ಸ್ಕ್ಯಾನಿಂಗ್ ಮಾಡಿಸಿದಾಗ ಅವರ ಹೊಟ್ಟೆಯಲ್ಲಿ ಬರೋಬ್ಬರಿ 15 ಕೆ.ಜಿ ಗಡ್ಡೆಯಿದೆ ಎಂದು ತಿಳಿದುಬಂತು.

ಸಾಧಾರಣವಾಗಿ ಅರ್ಧ ಕೆಜಿ, 1 ಕೆಜಿ ಅಥವಾ ಹೆಚ್ಚು ಅಂದ್ರೆ 2 ಕೆಜಿಯ ಗಡ್ಡೆಯನ್ನು ಕಂಡಿದ್ದ ವೈದ್ಯರಿಗೆ ಇದನ್ನು ನೋಡಿ ನಿಜವಾಗಿಯೂ ಶಾಕ್​ ಆಗಿತ್ತು. ಕೂಡಲೇ ಆಪರೇಷನ್​ಗೆ ಮುಂದಾದ ವೈದ್ಯರು ತಮ್ಮ ಸರ್ಕಾರಿ ಆಸ್ಪತ್ರೆಯಲ್ಲೇ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ ಗಡ್ಡೆಯನ್ನು ಹೊರತೆಗೆದರು. ಸದ್ಯ ಮಹಿಳೆ ಚೇತರಿಸಿಕೊಳ್ಳುತ್ತಿದ್ದು ಮಹತ್ತರ ಬೇನೆ ಕಳೆದುಕೊಂಡಂತೆ ಭಾಸವಾಗಿದೆ.

ಒಟ್ನಲ್ಲಿ, ಇಂಥ ದೊಡ್ಡ ಗಡ್ಡೆಯನ್ನು ಯಶಸ್ವಿಯಾಗಿ ಹೊರತೆಗೆದಿರುವ ವೈದ್ಯರಿಗೆ ಹಾಗೂ ಅವರ ತಂಡಕ್ಕೆ ಇದು ತಮ್ಮ ವೃತ್ತಿಜೀವನದಲ್ಲೇ ಮಹತ್ತರ ಮೈಲಿಗಲ್ಲಾಗಿದೆ. -ಪ್ರಶಾಂತ್

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ