ಮನೆ ಬೀಗ ಮುರಿದು ನಗದು, ರಿವಾಲ್ವರ್ ಕಳ್ಳತನ

|

Updated on: Jun 22, 2020 | 11:55 AM

ಧಾರವಾಡ: ಮನೆ ಬೀಗ ಮುರಿದು ಮನೆ ಕಳ್ಳತನ ಮಾಡಲು ಬಂದವ ನಗದು ಜೊತೆ ರಿವಾಲ್ವರ್ ಕಳ್ಳತನ ಮಾಡಿರುವ ಘಟನೆ ಯು.ಬಿ.ಹಿಲ್ ಬಡಾವಣೆಯಲ್ಲಿ ನಡೆದಿದೆ. ಮನೆಯಲ್ಲಿ ಯಾರು ಇಲ್ಲದೆ ಇರುವುದನ್ನು ಗಮನಿಸಿ ಮನೆಗೆ ಕನ್ನ ಹಾಕಲು ಬಂದ ಖದೀಮ ಮನೆ ಬೀಗ ಹೊಡೆದು ಒಳ ನುಗ್ಗಿದ್ದಾನೆ. ನಂತರ ಮನೆ ಒಳಗಿದ್ದ ಕಪಾಟು ಮುರಿದು 3 ಲಕ್ಷ ನಗದು ಮತ್ತು ರಿವಾಲ್ವರ್ ಕಳ್ಳತನ ಮಾಡಿದ್ದಾನೆ. ಸಂತೋಷ ನಾಯ್ಕ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದೆ. ಮನೆಗೆ ಬಂದ ನಂತರ ಕಳ್ಳನ ಕೃತ್ಯ […]

ಮನೆ ಬೀಗ ಮುರಿದು ನಗದು, ರಿವಾಲ್ವರ್ ಕಳ್ಳತನ
Follow us on

ಧಾರವಾಡ: ಮನೆ ಬೀಗ ಮುರಿದು ಮನೆ ಕಳ್ಳತನ ಮಾಡಲು ಬಂದವ ನಗದು ಜೊತೆ ರಿವಾಲ್ವರ್ ಕಳ್ಳತನ ಮಾಡಿರುವ ಘಟನೆ ಯು.ಬಿ.ಹಿಲ್ ಬಡಾವಣೆಯಲ್ಲಿ ನಡೆದಿದೆ. ಮನೆಯಲ್ಲಿ ಯಾರು ಇಲ್ಲದೆ ಇರುವುದನ್ನು ಗಮನಿಸಿ ಮನೆಗೆ ಕನ್ನ ಹಾಕಲು ಬಂದ ಖದೀಮ ಮನೆ ಬೀಗ ಹೊಡೆದು ಒಳ ನುಗ್ಗಿದ್ದಾನೆ.

ನಂತರ ಮನೆ ಒಳಗಿದ್ದ ಕಪಾಟು ಮುರಿದು 3 ಲಕ್ಷ ನಗದು ಮತ್ತು ರಿವಾಲ್ವರ್ ಕಳ್ಳತನ ಮಾಡಿದ್ದಾನೆ. ಸಂತೋಷ ನಾಯ್ಕ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದೆ. ಮನೆಗೆ ಬಂದ ನಂತರ ಕಳ್ಳನ ಕೃತ್ಯ ನೋಡಿ ಮನೆಯವರಿಗೆ ಶಾಕ್ ಆಗಿದೆ. ಸ್ಥಳಕ್ಕೆ ವಿದ್ಯಾಗಿರಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.