ಕೊರೊನಾಗೆ ಸೆಡ್ಡು ಹೊಡೆದ 4ತಿಂಗಳ ಮಗು, ವಿಕ್ಟೋರಿಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್

  • TV9 Web Team
  • Published On - 12:39 PM, 19 Jun 2020
ಕೊರೊನಾಗೆ ಸೆಡ್ಡು ಹೊಡೆದ 4ತಿಂಗಳ ಮಗು, ವಿಕ್ಟೋರಿಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್

ಬೆಂಗಳೂರು: ಕಳೆದ ಕೆಲ ದಿನಗಳಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅನಾರೋಗ್ಯಕರ ಸುದ್ದಿ ಕೇಳಿ ಬರುತ್ತಿತ್ತು. ಸದ್ಯ ಈಗ ಸಂತೋಷಕರ ಸುದ್ದಿ ಹೊರ ಬಿದ್ದಿದೆ. 4 ತಿಂಗಳ ಕೊರೊನಾ ಸೋಂಕಿತ ಮಗು ಗುಣಮುಖವಾಗಿ ಡಿಸ್ಚಾರ್ಜ್ ಆಗಿದೆ.

ಟ್ರೈನ್ ಮೂಲಕ ದೆಹಲಿಯಿಂದ ಬೆಂಗಳೂರಿಗೆ ಬಂದಿದ್ದ ದಂಪತಿ ಮತ್ತು 4 ತಿಂಗಳ ಮಗುವಿನ ಪೈಕಿ ಪುಟ್ಟ ಕಂದಮ್ಮಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು. ನಂತರ P-1793 ಎಂದು ಮಗುವನ್ನ ಗುರುತಿಸಲಾಗಿತ್ತು. ಮೇ 23ರಂದು ವಿಕ್ಟೋರಿಯಾ ಆಸ್ಪತ್ರೆಗೆ ಮಗುವನ್ನು ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಕೊರೊನಾ ಸೋಂಕಿಗೆ ಸೆಡ್ಡು ಹೊಡೆದು 4 ತಿಂಗಳ ಮಗು ಚೇತರಿಸಿಕೊಂಡಿದೆ. ಜೂನ್ 3 ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದೆ.