ಕೇಸರಿಯೂ ಕೇವಲ ಆಹಾರ ಪದಾರ್ಥಗಳಲ್ಲಿ ಮಾತ್ರ ಬಳಕೆಯಾಗದೇ, ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಸಾಫ್ರನ್ ಆಯಿಲ್ ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಎಷ್ಟು ಉಪಯುಕ್ತ ಎಂಬುದರ ಕುರಿತು ಮುಂಬೈನ ಪ್ರಾಣ ಹೆಲ್ತ್ ಕೇರ್ ಅಂಡ್ ಅಕಾಡೆಮಿ ಫೋರ್ ಆಯುರ್ವೇದದ,ಆಯುರ್ವೇದ ಮತ್ತು ಕರುಳಿನ ತಜ್ಞರಾದ ಡಾ.ಡಿಂಪಲ್ ಜಂಗ್ಡಾರವರು ಮಾಹಿತಿ ನೀಡಿದ್ದಾರೆ.
ಆಯುರ್ವೇದದಲ್ಲಿ ಕೇಸರಿಗೆ ಅದರದ್ದೇ ಆದ ಮಹತ್ವವನ್ನು ನೀಡಲಾಗಿದೆ. ಇದು ದುಬಾರಿಯಾದ ಮಸಾಲೆ ಪದಾರ್ಥವಾಗಿದ್ದರೂ ಕೆಲವು ಆರೋಗ್ಯ ಸಮಸ್ಯೆಗಳಾದ, ಹೊಟ್ಟೆಯ ಅಸ್ವಸ್ಥತೆಗಳು, ಉರಿಯೂತ ಮತ್ತು ಖಿನ್ನತೆಗೆ ಚಿಕಿತ್ಸೆ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಇದು ನಿಮ್ಮ ದೇಹದ ಚರ್ಮಕ್ಕೆ ಆರೋಗ್ಯ, ಹೊಳಪು ನೀಡುತ್ತದೆ.
ಡಾ.ಡಿಂಪಲ್ ಜಂಗ್ಡಾರವರು ನೀಡಿರುವ ಸಾಫ್ರನ್ ಆಯಿಲ್ ನ 6 ಪ್ರಯೋಜನಗಳು ಈ ಕೆಳಗಿನಂತಿವೆ
ಸಾಫ್ರನ್ ಆಯಿಲ್ ತಯಾರಿಸುವ ವಿಧಾನ ಇಲ್ಲಿದೆ:
ಕೇಸರಿಯಲ್ಲಿರುವ ಫೈಟೊಕೆಮಿಕಲ್ ಸಂಯುಕ್ತಗಳು ಹೇರಳವಾದ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಹೊಂದಿದ್ದು, ಇದು ಅಸಂಖ್ಯಾತ ಆರೋಗ್ಯ ಮತ್ತು ಸ್ವಾಸ್ಥ್ಯ ಪ್ರಯೋಜನಗಳನ್ನು ಹೊಂದಿದೆ. ಖನಿಜ–ಸಮೃದ್ಧ ಮಸಾಲೆ, ಇದು ತಾಮ್ರ, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಮ್ಯಾಂಗನೀಸ್, ಕಬ್ಬಿಣ, ಸೆಲೆನಿಯಮ್, ಸತು ಮತ್ತು ಮೆಗ್ನೀಸಿಯಮ್ಗಳ ಉತ್ತಮ ಮೂಲವಾಗಿದೆ.
ಕೇಸರಿಯು ಚರ್ಮದ ಸಮಸ್ಯೆಗಳನ್ನು ಗುಣಪಡಿಸಲು ಮತ್ತು ಚರ್ಮಕ್ಕೆ ಮರುಜೀವ ನೀಡವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ರಕ್ತಪರಿಚಲನೆಯನ್ನು ಸುಗಮಗೊಳಿಸುತ್ತದೆ. ಹೈಪರ್ಪಿಗ್ಮೆಂಟೇಶನ್ ಕಡಿಮೆಗೊಳಿಸುತ್ತದೆ ಮತ್ತು ಡಾರ್ಕ್ ಸರ್ಕಲ್ ಕಡಿಮೆ ಮಾಡುತ್ತದೆ. ಮೈಬಣ್ಣವನ್ನು ಬೆಳಗಿಸುವ ಗುಣವನ್ನು ಹೊಂದಿದ್ದರಿಂದ ಅನೇಕ ಸೌಂದರ್ಯ ವರ್ಧಕಗಳಲ್ಲಿ ಬಳಸಲಾಗುತ್ತದೆ. ಹೊಳೆಯುವ ಕಾಂತಿಯುತ ತ್ವಚ್ಚೆಗಾಗಿ ಬ್ರೈಟೆನಿಂಗ್ ಫೇಸ್ ಮಾಸ್ಕ್ ಮತ್ತು ಮುಖದಲ್ಲಿನ ಸುಕ್ಕು ನಿವಾರಿಸುವ ಫೇಸ್ ಮಾಸ್ಕ್‌ನಲ್ಲಿ ಕೂಡ ಬಳಸಲಾಗುತ್ತದೆ. ಜೊತೆಗೆ ಚರ್ಮವನ್ನು ಸ್ಪಷ್ಟ, ಹೊಳೆಯುವ ಮತ್ತು ನಯವಾಗಿಡಲು ಸಹಾಯ ಮಾಡುತ್ತದೆ.
ಕೇಸರಿಯು ವಿಟಮಿನ್ ಸಿ ಸೇರಿದಂತೆ ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತದೆ ಮತ್ತು ಉರಿಯೂತದ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಅದರ ಅದ್ಭುತವಾದ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ಗುಣಗಳೊಂದಿಗೆ, ಕೇಸರಿ ಮೊಡವೆ ಮತ್ತು ಬಿರುಕುಗಳಿಗೆ ಚಿಕಿತ್ಸೆ ನೀಡಲು ಸಹಕಾರಿಯಾಗಿದೆ. ನೀವು ಮಂದ ಚರ್ಮವನ್ನು ಹೊಂದಿದ್ದರೆ, ಅಲೋವೆರಾ ಜೆಲ್‌ನಲ್ಲಿ ಕೇಸರಿ ಅಥವಾ ಎರಡು ಎಳೆಗಳನ್ನು ಬೆರೆಸಿ ಮತ್ತು ತ್ವರಿತ ಹೊಳಪನ್ನು ಪಡೆಯಲು ಮುಖದ ಮೇಲೆ ಉಜ್ಜಿಕೊಳ್ಳಿ.
ಬೆಚ್ಚಗಿನ ಒಂದು ಕಪ್ ಕೇಸರಿ ಹಾಲನ್ನು ಕುಡಿದರೆ ಕಿಬ್ಬೊಟ್ಟೆಯ ನೋವು, ಮುಟ್ಟಿನ ಸೆಳೆತ ಮತ್ತು ಭಾರೀ ರಕ್ತಸ್ರಾವವನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ. ಕೇಸರಿ ಶ್ರೀಮಂತ ಉತ್ಕರ್ಷಣ ನಿರೋಧಕ ಮತ್ತು ಉರಿಯೂತ ನಿಯಂತ್ರಿಸುವ ಗುಣ ಲಕ್ಷಣಗಳಿಗೆ ಹೆಸರುವಾಸಿಯಾಗಿದೆ ಎಂದು ಚರ್ಮದ ತಜ್ಞರಾದ ಡಾ.ಡಿಂಪಲ್ ಸಲಹೆ ನೀಡಿದ್ದಾರೆ.
(ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.)
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ