ನೀರು ತರುವಾಗ ಕಾಲುಜಾರಿ ಬಿದ್ದು ಬಾಲಕ ನೀರುಪಾಲು

ರಾಯಚೂರು: ನೀರು ತರುವಾಗ ಕಾಲುಜಾರಿ ಕೆರೆಗೆ ಬಿದ್ದು ಬಾಲಕ ನೀರುಪಾಲಾಗಿರುವ ಘಟನೆ ಮಸ್ಕಿ ತಾಲೂಕಿನ ಗುಡಗಲದಿನ್ನಿ ಗ್ರಾಮದ ಬಳಿ ಇರುವ ಕೆರೆಯಲ್ಲಿ ನಡೆದಿದೆ. 9 ವರ್ಷದ ಕೇಶವ ಮೃತ ಬಾಲಕ. ಬಾಲಕನ ಪೋಷಕರು ಕೂಲಿ ಕೆಲಸಕ್ಕೆ ತೆರಳಿದ್ದ ವೇಳೆ ಕುಡಿಯಲು ನೀರು ತರಲು ಹೋದಾಗ ಘಟನೆ ಸಂಭವಿಸಿದೆ. ನೀರು ತರಲೆಂದು ಹೋದವ ನೀರುಪಾಲಾಗಿದ್ದಾನೆ. ಬಾಲಕನ ಶವ ಶೋಧ ಕಾರ್ಯ ಮುಂದುವರೆದಿದೆ. ಮಸ್ಕಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ನೀರು ತರುವಾಗ ಕಾಲುಜಾರಿ ಬಿದ್ದು ಬಾಲಕ ನೀರುಪಾಲು

Updated on: Aug 30, 2020 | 10:09 AM

ರಾಯಚೂರು: ನೀರು ತರುವಾಗ ಕಾಲುಜಾರಿ ಕೆರೆಗೆ ಬಿದ್ದು ಬಾಲಕ ನೀರುಪಾಲಾಗಿರುವ ಘಟನೆ ಮಸ್ಕಿ ತಾಲೂಕಿನ ಗುಡಗಲದಿನ್ನಿ ಗ್ರಾಮದ ಬಳಿ ಇರುವ ಕೆರೆಯಲ್ಲಿ ನಡೆದಿದೆ. 9 ವರ್ಷದ ಕೇಶವ ಮೃತ ಬಾಲಕ.

ಬಾಲಕನ ಪೋಷಕರು ಕೂಲಿ ಕೆಲಸಕ್ಕೆ ತೆರಳಿದ್ದ ವೇಳೆ ಕುಡಿಯಲು ನೀರು ತರಲು ಹೋದಾಗ ಘಟನೆ ಸಂಭವಿಸಿದೆ. ನೀರು ತರಲೆಂದು ಹೋದವ ನೀರುಪಾಲಾಗಿದ್ದಾನೆ. ಬಾಲಕನ ಶವ ಶೋಧ ಕಾರ್ಯ ಮುಂದುವರೆದಿದೆ. ಮಸ್ಕಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.