ನೆಲಮಂಗಲದಿಂದ ಮಹಾರಾಷ್ಟ್ರದತ್ತ ರೊಯ್ಯನೆ ಹೊರಟಿರುವ ರೋ ರೋ ರೈಲು ವಿಶೇಷತೆ ಏನು ಗೊತ್ತಾ?
ಬೆಂಗಳೂರು ಗ್ರಾಮಾಂತರ: ಕರ್ನಾಟಕದಿಂದ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಬೇಲ್ ಮಧ್ಯೆ ಮೊದಲ ರೋಲ್ ಆನ್ ರೋಲ್ ಆಫ್ (ರೋ-ರೋ) ಸೇವೆ ಇಂದಿನಿಂದ ಆರಂಭವಾಗಿದೆ. ಕೇಂದ್ರ ರಾಜ್ಯ ರೈಲ್ವೆ ಸಚಿವರು ಮುಖ್ಯಮಂತ್ರಿ ಯಡಿಯೂರಪ್ಪನವರ ಗೃಹ ಕಚೇರಿ ಕೃಷ್ಣದಿಂದಲೇ ರೈಲ್ವೆ ಇಲಾಖೆಯ ಮೊದಲ ರೋ-ರೋ ಸೇವೆಗೆ ಚಾಲನೆ ನೀಡಿದ್ದಾರೆ. ರೋ-ರೋ ಎಂದರೇನು? ರೋ-ರೋ ಎಂದರೆ ರೋಲ್ ಆನ್ ರೋಲ್ ಆಫ್ (Roll On Roll Off) ಎಂಬರ್ಥ. ಸರಕು ಸಾಮಗ್ರಿಗಳನ್ನು ಟ್ರಕ್/ಲಾರಿಗಳಲ್ಲಿ ಲೋಡ್ ಮಾಡಿ ನೇರವಾಗಿ ರೈಲುಗಳಲ್ಲಿ ಲಾರಿಗಳನ್ನೆ ಹೊತ್ತೊಯ್ದು […]

ಬೆಂಗಳೂರು ಗ್ರಾಮಾಂತರ: ಕರ್ನಾಟಕದಿಂದ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಬೇಲ್ ಮಧ್ಯೆ ಮೊದಲ ರೋಲ್ ಆನ್ ರೋಲ್ ಆಫ್ (ರೋ-ರೋ) ಸೇವೆ ಇಂದಿನಿಂದ ಆರಂಭವಾಗಿದೆ. ಕೇಂದ್ರ ರಾಜ್ಯ ರೈಲ್ವೆ ಸಚಿವರು ಮುಖ್ಯಮಂತ್ರಿ ಯಡಿಯೂರಪ್ಪನವರ ಗೃಹ ಕಚೇರಿ ಕೃಷ್ಣದಿಂದಲೇ ರೈಲ್ವೆ ಇಲಾಖೆಯ ಮೊದಲ ರೋ-ರೋ ಸೇವೆಗೆ ಚಾಲನೆ ನೀಡಿದ್ದಾರೆ.
ರೋ-ರೋ ಎಂದರೇನು? ರೋ-ರೋ ಎಂದರೆ ರೋಲ್ ಆನ್ ರೋಲ್ ಆಫ್ (Roll On Roll Off) ಎಂಬರ್ಥ. ಸರಕು ಸಾಮಗ್ರಿಗಳನ್ನು ಟ್ರಕ್/ಲಾರಿಗಳಲ್ಲಿ ಲೋಡ್ ಮಾಡಿ ನೇರವಾಗಿ ರೈಲುಗಳಲ್ಲಿ ಲಾರಿಗಳನ್ನೆ ಹೊತ್ತೊಯ್ದು ನಿಗದಿತ ನಿಲ್ದಾಣಗಳಲ್ಲಿ ಲಾರಿಗಳನ್ನು ರೈಲಿನಿಂದ ಕೆಳಗಿಳಿಸಿ ನೇರವಾಗಿ ಸರಕುಗಳನ್ನು ಗ್ರಾಹಕರ ಸ್ಥಳಗಳಿಗೆ ತಲುಪಿಸುವುದೇ ಈ ರೋ-ರೋ ಸೇವೆ. ಇದರಲ್ಲಿ ಇಂಧನ ಕಡಿಮೆ ಬಳಕೆಯಾಗುತ್ತದೆ. ಜೊತೆಗೆ, ಪ್ರಯಾಣದ ಅವಧಿ ಸಹ ಕಡಿತಗೊಳ್ಳುತ್ತದೆ ಹಾಗೂ ಮುಖ್ಯವಾಗಿ ಕಳ್ಳತನವಾಗುವುದು ತಪ್ಪುತ್ತದೆ.
ರೈಲ್ವೆ ಮಂಡಳಿ ಅನುಮೋದಿಸಿದ ಸುಮಾರು ಐದು ತಿಂಗಳ ನಂತರ ಬೆಂಗಳೂರಿನ ನೆಲಮಂಗಲ ಮತ್ತು ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಬೇಲ್ ನಡುವಿನ ರೋಲ್ ಆನ್-ರೋಲ್ ಆಫ್ ಸೇವೆ ಇಂದು ಪ್ರಾರಂಭವಾಗಿದೆ.
ವಿಶೇಷವೇನೆಂದರೆ ರೋ-ರೋ ಸೇವೆ ದೇಶದ ಹಲವು ಕಡೆಗಳಲ್ಲಿ ಲಭ್ಯವಿದೆ. ಆದರೆ ಮೊದಲ ಬಾರಿಗೆ ನೈರುತ್ಯ ರೈಲ್ವೆ (SWR) ನಲ್ಲಿ ಇಂದಿನಿಂದ ಆರಂಭವಾಗಲಿದೆ. ನೈರುತ್ಯ ರೈಲ್ವೆ ಮೊದಲ ಬಾರಿಗೆ ಸೇವೆ ಸಲ್ಲಿಸಲಿದ್ದು ಕೃಷಿ ಉಪಕರಣಗಳು, ರಾಸಾಯನಿಕ ಮತ್ತು ಕೈಗಾರಿಕಾ ವಸ್ತುಗಳನ್ನು ಒಳಗೊಂಡ ಒಟ್ಟು 1,260 ಟನ್ಗಳನ್ನು ಉದ್ಘಾಟನಾ ಪ್ರಯಾಣದಲ್ಲಿ ಲೋಡ್ಗಳನ್ನು ಕೊಂಡೊಯ್ಯಲಿದೆ.
ರೋ-ರೋ ರೈಲು ಒಟ್ಟು 43 ತೆರೆದ ವ್ಯಾಗನ್‌ಗಳನ್ನು ಹೊಂದಿದೆ ಮತ್ತು ಇದು ವಾಹನದ ಗಾತ್ರವನ್ನು ಅವಲಂಬಿಸಿ 43 ಅಥವಾ ಹೆಚ್ಚಿನ ಟ್ರಕ್‌ಗಳನ್ನು ಸಾಗಿಸಬಲ್ಲದು. ಇದು ನೆಲಮಂಗಲ ಮತ್ತು ಬೇಲ್ ನಡುವೆ 682 ಕಿ.ಮೀ ದೂರ ಚಲಿಸುತ್ತದೆ ಮತ್ತು ಮೂರು ರೈಲ್ವೆ ವಲಯಗಳನ್ನು ಒಳಗೊಂಡಿದೆ.
ಪ್ರತಿ ಸುತ್ತಿನ ರೋ-ರೋ ಸಂಚಾರವೂ ಆರು ದಿನಗಳನ್ನು ತೆಗೆದುಕೊಳ್ಳುತ್ತದೆ ಮತ್ತು ವಾಡಿ ಮತ್ತು ಧರ್ಮವರಂ ಮೂಲಕ ಹಾದುಹೋಗುತ್ತದೆ. ಸರಕು ಸಾಗಣೆ ಶುಲ್ಕಗಳು ಪ್ರತಿ ಟನ್‌ಗೆ 2,700 ರೂಪಾಯಿ ತಗಲುತ್ತದೆ. ಪ್ರತಿ ಟ್ರಕ್‌ಗೆ ಒಟ್ಟು 30 ಟನ್‌ಗಳಷ್ಟು ಸಾಮರ್ಥ್ಯವಿದೆ. ಕೊರೊನಾ ಸೋಂಕಿನ ಮಧ್ಯೆ ರಾಂಪ್ ಮತ್ತು ರಸ್ತೆಯನ್ನು ಜಿತೇಂದ್ರ ರಿಯಾಲ್ಟಿ ಮತ್ತು ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಕಂಪನಿಗಳು ನಿರ್ಮಿಸಿದೆ.
ವಿವರವಾದ ಯೋಜನಾ ವರದಿಯನ್ನು ಸಿದ್ಧಪಡಿಸಿದ ಯೋಗೇಂದ್ರ ಶರ್ಮಾ ಈ ಹಿಂದೆ ಟಿಎನ್‌ಐಇಗೆ ರಸ್ತೆ ಸಂಚಾರವನ್ನು ಕಡಿಮೆ ಮಾಡುವುದು ಮತ್ತು ಕಡಿಮೆ ಇಂಧನ ಬಳಕೆ ಪ್ರಮುಖ ಪ್ರಯೋಜನೆಗಳಾಗಿದ್ದವು. ರೈಲು ಟ್ರಕ್ ಅನ್ನು ಹೊತ್ತೊಯ್ಯುವುದರಿಂದ, ಇದು ಮನೆ-ಮನೆ-ಸರಕುಗಳ ವಿತರಣೆಗೆ ಹೋಲುತ್ತದೆ.
ಚಾಲಕ ಮತ್ತು ಇನ್ನೊಬ್ಬ ವ್ಯಕ್ತಿ ಟ್ರಕ್‌ನೊಂದಿಗೆ ರೈಲಿನಲ್ಲಿ ಹೋಗಬಹುದು ಮತ್ತು ಅವರು ಪ್ರಯಾಣಕ್ಕಾಗಿ ಎರಡನೇ ದರ್ಜೆಯ ಟಿಕೆಟ್‌ಗಳನ್ನು ಖರೀದಿಸಬೇಕು. ಕೊಂಕಣ ರೈಲ್ವೆ ಕಾರ್ಪೊರೇಶನ್ ಲಿಮಿಟೆಡ್ (ಕೆಆರ್‌ಸಿಎಲ್) ಈ ರೋ-ರೋ ಸೇವೆಯನ್ನು ಸೂರತ್‌ಕಲ್ ಮತ್ತು ಕೋಲಾಡ್ (ಮುಂಬೈನಿಂದ 143 ಕಿ.ಮೀ) ನಡುವೆ ಕೆಲವು ವರ್ಷಗಳಿಂದ ಓಡಾಟ ಆರಂಭಿಸಿ ಈಗ ರಾಜ್ಯದಲ್ಲಿ ಹೊಸ ಮೈಲಿಗಲ್ಲನ್ನು ಸಾಧಿಸಲು ಹೊರಟಿದೆ.

Published On - 11:00 am, Sun, 30 August 20




