Surat: 4-ದಿನ ಪ್ರಾಯದ ‘ಬ್ರೇನ್ ಡೆಡ್’ ಹಸುಳೆಯ ಅಂಗಾಂಗ ದಾನ ಮಾಡಿ ಸೂರತ್ ದಂಪತಿ ಇಡೀ ವಿಶ್ವಕ್ಕೆ ಮಾದರಿ!
ಕೇವಲ ನಾಲ್ಕೂವರೆ ದಿನಗಳ ಹಿಂದೆ ಇಹಲೋಕಕ್ಕೆ ಬಂದ ಮಗುವೊಂದು ಕೆಲವೇ ಗಂಟೆಗಳಲ್ಲಿ ವಿದಾಯ ಕೂಡ ಹೇಳಿದೆ. ಆದರೆ, ಹುಟ್ಟು-ಸಾವಿನ ನಡುವಿನ ಆ 111 ಗಂಟೆಗಳಲ್ಲಿ ಈ ಮಗು ಬೇರೆ 6 ಶಿಶುಗಳಿಗೆ ಹೊಸ ಬಾಳು ನೀಡಿದೆ ಅಂದರೆ ನಂಬ್ತೀರಾ? ಹುಟ್ಟಿದ ನಂತರ ಮಗು ಅಳಲಿಲ್ಲ ಅಥವಾ ಕದಲಿರಲಿಲ್ಲ. ಆಸ್ಪತ್ರೆಯ ಐಸಿಯುನಲ್ಲಿ ಮಗುವಿಗೆ ಚಿಕಿತ್ಸೆ ನೀಡಿದ ಬಳಿಕ ವೈದ್ಯರು ಮಗು ಬ್ರೈನ್ ಡೆಡ್ ಅಂತ (ನಿಷ್ಕ್ರಿಯ ಮೆದುಳು) ಅಂತ ಘೋಷಿಸಿದರು.
ಸೂರತ್: ಭಾರತದ ಇತಿಹಾಸದಲ್ಲೇ ಅಭೂತಪೂರ್ವ ಅಂಗಾಂಗ ದಾನ ಪ್ರಕರಣ ನಡೆದಿದೆ. ಮೊಟ್ಟ ಮೊದಲ ಬಾರಿಗೆ ನವಜಾತ ಶಿಶುವೊಂದರ ಅಂಗಾಂಗಗಳನ್ನು ದಾನ ಮಾಡಲಾಗಿದೆ. ಸೂರತ್‌ನಲ್ಲಿ ಜನಿಸಿದ ಹಸುಳೆಯ ಅಂಗಾಂಗ ದಾನ ಮಾಡಲಾಗಿದೆ. ಈ ನತದೃಷ್ಟ ಮಗು 6 ಮಂದಿಗೆ ಜೀವದಾನ ಮಾಡಿ ಇತಿಹಾಸ ನಿರ್ಮಿಸಿದೆ. ಕೇವಲ ನಾಲ್ಕೂವರೆ ದಿನಗಳ ಹಿಂದೆ ಇಹಲೋಕಕ್ಕೆ ಬಂದ ಮಗುವೊಂದು ಕೆಲವೇ ಗಂಟೆಗಳಲ್ಲಿ ವಿದಾಯ ಕೂಡ ಹೇಳಿದೆ. ಆದರೆ, ಹುಟ್ಟು-ಸಾವಿನ ನಡುವಿನ 111 ಗಂಟೆಗಳಲ್ಲಿ ಈ ಮಗು ಬೇರೆ 6 ಶಿಶುಗಳಿಗೆ ಹೊಸ ಬಾಳು ನೀಡಿದೆ ಅಂದರೆ ನಂಬ್ತೀರಾ? ಹುಟ್ಟಿದ ನಂತರ ಮಗು ಅಳಲಿಲ್ಲ ಅಥವಾ ಚಲನೆ ತೋರಲಿಲ್ಲ. ಆಸ್ಪತ್ರೆಯ ಐಸಿಯುನಲ್ಲಿ ಮಗುವಿಗೆ ಚಿಕಿತ್ಸೆ ನೀಡಿದ ಬಳಿಕ ವೈದ್ಯರು ಮಗು ಬ್ರೈನ್ ಡೆಡ್ ಅಂತ (ನಿಷ್ಕ್ರಿಯ ಮೆದುಳು) ಅಂತ ಘೋಷಿಸಿದರು. ಮಗುವಿನ ಅಂಗಾಂಗಗಳನ್ನು ದಾನ ಮಾಡಲು ಪೋಷಕರು ಒಪ್ಪಿ ಆ ಕಾರ್ಯವನ್ನು ನೆರವೇರಿಸಿದ್ದಾರೆ.
ಹುಟ್ಟಿದ ನಂತರ ಅಳದ, ಕದಲದ ಮಗುವಿನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಅದರ ಅಜ್ಜಿ, ಮತ್ತು ತಂದೆ-ತಾಯಿ ಸಮಾಜಕ್ಕೆ ಮಾದರಿಯಾಗಿದ್ದಾರೆ ಅಂದರೆ ಉತ್ಪ್ರೇಕ್ಷೆ ಅನಿಸದು. ಸೂರತ್ ನಗರದ ವಲಕ್ ಪಾಟಿಯಾ ಬಳಿಯ ಗೀತಾಂಜಲಿ ರೋ ಹೌಸ್‌ನಲ್ಲಿ ವಾಸಿಸುವ ಅಮ್ರೇಲಿ ಮಲಿಲಾ ಮೂಲದ ಹರ್ಷಭಾಯ್ ಮತ್ತು ಚೇತನಾಬೆನ್ ಸಂಘಾನಿ ದಂಪತಿಗೆ ಅಕ್ಟೋಬರ್ 13 ರಂದು ಈ ಗಂಡು ನಿಶ್ಚಲ ಮಗು ಜನಿಸಿತು.
ಮಗುವನ್ನು ಪರೀಕ್ಷಿಸಿದ ಡಾ. ಅತುಲ್ ಶೆಲ್ಡಿಯಾ ಕೇರ್ ಚಿಲ್ಡ್ರನ್ ಆಸ್ಪತ್ರೆಗೆ ದಾಖಲಿಸುವಂತೆ ಹೇಳಿದರು. ಮಗುವನ್ನಲ್ಲಿ ವೆಂಟಿಲೇಟರ್‌ನಲ್ಲಿ ಇರಿಸಲಾಯಿತು. ಪೋಷಕರು ಅದರ ಶೀಘ್ರ ಚೇತರಿಕೆಗಾಗಿ ಆತಂಕಭರಿತ ತಾಳ್ಮೆಯಿಂದ ಕಾಯುತ್ತಾ ಕೂತರು. ಮಕ್ಕಳ ತಜ್ಞರು ಹಸುಳೆಯ ಮೇಲೆ ಹಲವಾರು ಟೆಸ್ಟ್ ಗಳನ್ನು ನಡೆಸಿದರು. ಕೊನೆಗೆ ನರರೋಗ ತಜ್ಞರು ಸಹ ಪರೀಕ್ಷಿಸಿ ‘ಬ್ರೈನ್ ಡೆಡ್ ಮಗು’ ಎಂದು ಘೋಷಿಸಿದರು!
ದೈವೇಚ್ಛೆಯನ್ನು ಭಾರದ ಹೃದಯದಿಂದ ಸ್ವೀಕರಿಸಿದ ಪೋಷಕರು ಮತ್ತು ಕುಟುಂಬದ ಸ್ನೇಹಿತ ಹಿತೇಶ್ ಕರ್ಕರ್, ಡಾ.ನೀಲೇಶ್ ಕಚ್ಡಿಯಾ ಅವರಿಂದ ಮಗುವಿನ ಅಂಗಾಂಗ ದಾನದ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು. ನಂತರ ಅವರು ಪಿಎಂ ಗೊಂಡ್ಲಿಯಾ ಮತ್ತು ಜೀವನ್‌ದೀಪ್ ಅಂಗದಾನ ಪ್ರತಿಷ್ಠಾನದ ವಿಪುಲ್ ಲಾಕಿಯಾ ಅವರನ್ನು ಸಂಪರ್ಕಿಸಿದರು. ಜೀವನ್ದೀಪ ಅಂಗಾಂಗ ದಾನದ ಸದಸ್ಯರ ಸಹಕಾರ ಮತ್ತು ಸಹಾಯದೊಂದಿಗೆ ಪೋಷಕರು ನಾಲ್ಕು ದಿನ ಪ್ರಾಯದ ತಮ್ಮ ಏಕೈಕ ಮಗುವಿನ ಅಂಗಾಂಗಗಳನ್ನು ದಾನ ಮಾಡುವ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡು ನವರಾತ್ರಿಯ ಸಂದರ್ಭದಲ್ಲಿ ಈ ಪುಣ್ಯ ಕಾರ್ಯ ನೆರವೇರಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
