ಸ್ಮಶಾನ ಜಾಗದಲ್ಲಿ ಗಿಡ ನೆಡಲು ಹೋಗಿದ್ದ ವ್ಯಕ್ತಿಗೆ ಅವಾಚ್ಯ ಶಬ್ದಗಳಿಂದ ನಿಂದನೆ..
ನೆಲಮಂಗಲ: ಅಂತ್ಯಕ್ರಿಯೆ ಸಮಯದಲ್ಲಿ ಬಂದ ಜನರಿಗೆ ನೆರಳಾಗಿರಲಿ ಎಂದು, ಊರಿನ ಸ್ಮಶಾನ ಜಾಗದಲ್ಲಿ ಗಿಡ ನೆಡಲು ಹೋಗಿದ್ದ, ವ್ಯಕ್ತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ನೆಲಮಂಗಲ ತಾಲೂಕಿನಲ್ಲಿ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಗೌರಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಅದೇ ಗ್ರಾಮದ ರುದ್ರೇಶ್ ಎಂಬ ವ್ಯಕ್ತಿ ತಮ್ಮ ಸ್ವಂತ ಖರ್ಚಿನಲ್ಲಿ 30 ಹೊಂಗೆ ಸಸಿಗಳನ್ನು ಖರೀದಿ ಮಾಡಿ, ಊರ ಹೊರಗಿದ್ದ ಸ್ಮಶಾನದಲ್ಲಿ, ಆ ಗಿಡಗಳನ್ನು ನೆಡಲು ತೆರಳಿದ್ದರು. ಈ ವೇಳೆ ಅದೇ ಗ್ರಾಮದ […]

ನೆಲಮಂಗಲ: ಅಂತ್ಯಕ್ರಿಯೆ ಸಮಯದಲ್ಲಿ ಬಂದ ಜನರಿಗೆ ನೆರಳಾಗಿರಲಿ ಎಂದು, ಊರಿನ ಸ್ಮಶಾನ ಜಾಗದಲ್ಲಿ ಗಿಡ ನೆಡಲು ಹೋಗಿದ್ದ, ವ್ಯಕ್ತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ನೆಲಮಂಗಲ ತಾಲೂಕಿನಲ್ಲಿ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಗೌರಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಅದೇ ಗ್ರಾಮದ ರುದ್ರೇಶ್ ಎಂಬ ವ್ಯಕ್ತಿ ತಮ್ಮ ಸ್ವಂತ ಖರ್ಚಿನಲ್ಲಿ 30 ಹೊಂಗೆ ಸಸಿಗಳನ್ನು ಖರೀದಿ ಮಾಡಿ, ಊರ ಹೊರಗಿದ್ದ ಸ್ಮಶಾನದಲ್ಲಿ, ಆ ಗಿಡಗಳನ್ನು ನೆಡಲು ತೆರಳಿದ್ದರು.
ಈ ವೇಳೆ ಅದೇ ಗ್ರಾಮದ ನಂಜಪ್ಪ ಹಾಗೂ ಆತನ ಕುಟುಂಬಸ್ಥರು, ರುದ್ರೇಶ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಗಿಡ ನೆಡುವುದನ್ನು ತಡೆಹಿಡಿದಿದ್ದಾರೆ. ಈ ಹಿನ್ನೆಲೆಯಿಂದಾಗಿ ರುದ್ರೇಶ್ ಅವರು ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ನಂಜಪ್ಪ ಹಾಗೂ ಕುಟುಂಬದವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
Published On - 12:00 pm, Mon, 24 August 20




