ದಾಯಾದಿಗಳ ಗಲಾಟೆ: 3 ಎಕರೆ ಜಮೀನಿನಲ್ಲಿ ಬೆಳೆದಿದ್ದ ನುಗ್ಗೆ ನಾಶ
ಕೋಲಾರ:ದಾಯಾದಿಗಳ ನಡುವಿನ ಗಲಾಟೆಯಲ್ಲಿ ಮೂರು ಎಕರೆ ಜಮೀನಿನಲ್ಲಿ ಬೆಳೆದಿದ್ದ ನುಗ್ಗೆ ಮರಗಳನ್ನು ನಾಶ ಮಾಡಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕೆಸರಗೇರೆ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ವಿವಾದಿತ ಜಮೀನಿನಲ್ಲಿ ರಾಜಪ್ಪ ಎಂಬುವವರು ಬೆಳೆದಿದ್ದ ನುಗ್ಗೆ ಮರಗಳನ್ನು ರಾತ್ರೋರಾತ್ರಿ ನಾಶ ಮಾಡಲಾಗಿದೆ. ಇಬ್ಬರು ದಾಯಾದಿಗಳ ಜಮೀನಿನ ನಡುವಿನ ಗಡಿಯನ್ನು ಸರಿಯಾಗಿ ಗುರುತು ಮಾಡದ ಹಿನ್ನೆಲೆಯಲ್ಲಿ ದಾಯಾದಿಗಳ ನಡುವೆ ವಿವಾದ ಶುರುವಾಗಿದೆ. ವಿವಾದ ತಾರಕಕ್ಕೇರಿ ಮೂರು ಎಕರೆ ವಿವಾದಿತ ಜಮೀನಿನಲ್ಲಿ ರಾಜಪ್ಪ ಬೆಳೆದಿದ್ದ […]

ಕೋಲಾರ:ದಾಯಾದಿಗಳ ನಡುವಿನ ಗಲಾಟೆಯಲ್ಲಿ ಮೂರು ಎಕರೆ ಜಮೀನಿನಲ್ಲಿ ಬೆಳೆದಿದ್ದ ನುಗ್ಗೆ ಮರಗಳನ್ನು ನಾಶ ಮಾಡಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ.
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕೆಸರಗೇರೆ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ವಿವಾದಿತ ಜಮೀನಿನಲ್ಲಿ ರಾಜಪ್ಪ ಎಂಬುವವರು ಬೆಳೆದಿದ್ದ ನುಗ್ಗೆ ಮರಗಳನ್ನು ರಾತ್ರೋರಾತ್ರಿ ನಾಶ ಮಾಡಲಾಗಿದೆ. ಇಬ್ಬರು ದಾಯಾದಿಗಳ ಜಮೀನಿನ ನಡುವಿನ ಗಡಿಯನ್ನು ಸರಿಯಾಗಿ ಗುರುತು ಮಾಡದ ಹಿನ್ನೆಲೆಯಲ್ಲಿ ದಾಯಾದಿಗಳ ನಡುವೆ ವಿವಾದ ಶುರುವಾಗಿದೆ.
ವಿವಾದ ತಾರಕಕ್ಕೇರಿ ಮೂರು ಎಕರೆ ವಿವಾದಿತ ಜಮೀನಿನಲ್ಲಿ ರಾಜಪ್ಪ ಬೆಳೆದಿದ್ದ ನುಗ್ಗೆ ಮರಗಳನ್ನು, ರಾತ್ರೋರಾತ್ರಿ ಕೃಷ್ಣಪ್ಪನ ಕುಟುಂಬಸ್ಥರು ನೆಲಸಮ ಮಾಡಿದ್ದಾರೆಂದು, ರಾಜಪ್ಪ ಕುಟುಂಬದವರು ಆರೋಪ ಮಾಡುತ್ತಿದ್ದಾರೆ. ಫಸಲು ಬರುವ ಹಂತದಲ್ಲಿದ್ದ ಮರಗಳನ್ನು ನಾಶ ಮಾಡಿರುವುದರಿಂದ, ಮಾಸ್ತಿ ಪೊಲೀಸ್ ಠಾಣೆಯಲ್ಲಿ ಎರಡು ದಾಯಾದಿ ಕುಟುಂಬಗಳು, ಪರ ಮತ್ತು ವಿರುದ್ಧದ ದೂರುಗಳನ್ನು ದಾಖಲಿಸಿವೆ.




