ಮಂಡ್ಯ: ಜೀವನದ ಮೇಲೆ ಜುಗುಪ್ಸೆ ಹುಟ್ಟಿ ಸಿನಿಮಾ ನಟನೊಬ್ಬ ಜಿಲ್ಲೆಯ ಇಂಡುವಾಳು ಗ್ರಾಮದ ಬಳಿ ನೇಣಿಗೆ ಶರಣಾಗಿದ್ದಾರೆ. ಮೃತ ನಟ 30 ವರ್ಷದ ಸುಶೀಲ್ ಕುಮಾರ್ ಎಂದು ತಿಳಿದುಬಂದಿದೆ.
ಮಂಡ್ಯದ ವಿವಿ ನಗರ ಬಡಾವಣೆ ನಿವಾಸಿಯಾಗಿದ್ದ ಸುಶೀಲ್ ಬೆಂಗಳೂರಲ್ಲಿ ಜಿಮ್ ಟ್ರೈನರ್ ಆಗಿ ಕೆಲಸ ಮಾಡ್ತಿದ್ದರು. ಜೊತೆಗೆ ದುನಿಯಾ ವಿಜಿ ನಟನೆಯ ಸಲಗ ಹಾಗೂ ಕಮರೊಟ್ಟು ಚೆಕ್ಪೋಸ್ಟ್ ಸಿನಿಮಾಗಳಲ್ಲಿಯೂ ನಟಿಸಿದ್ದರು.
ಲಾಕ್ಡೌನ್ನಿಂದ ಕಳೆದ ಮೂರು ತಿಂಗಳಿನಿಂದ ಸುಶೀಲ್ಗೆ ಜಿಮ್ ನಡೆಸಲು ಆಗಿರಲಿಲ್ಲ. ಹೀಗಾಗಿ ಮೂರು ತಿಂಗಳಿಂದ ಮಂಡ್ಯಕ್ಕೆ ಹಿಂತಿರುಗಿ ಅಲ್ಲೇ ನೆಲೆಸಿದ್ದರು. ಆದರೆ, ಇತ್ತೀಚೆಗೆ ಜೀವನದಲ್ಲಿ ಜುಗುಪ್ಸೆಗೊಂಡಿದ್ದರು ಎಂದು ತಿಳಿದುಬಂದಿದೆ.
ಈ ಮಧ್ಯೆ ಇಂಡುವಾಳು ಗ್ರಾಮದಲ್ಲಿರೊ ತನ್ನ ಸ್ನೇಹಿತನ ಮನೆಗೆ ತೆರಳಿ ಅಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Published On - 2:34 pm, Wed, 8 July 20