ಆದಿತ್ಯನ ಅಡ್ಡೆ House of Life ಟ್ರೇಡ್ ಪರವಾನಗಿ ಅವಧಿ ಮುಗಿದು ಯಾವುದೋ ಕಾಲವಾಗಿದೆ!

ತಲಾ 6 ಲಕ್ಷ ರೂಪಾಯಿ ಕೊಟ್ಟು ಫಾರ್ಮ್​ ಹೌಸ್​ ಮಾಡಲು ಅಂದಿನ ವರ್ಚಸ್ವೀ ರಾಜಕಾರಣಿ ಜೀವರಾಜ್​ ಆಳ್ವಾ ಖರೀಸಿದ್ದ ಜಾಗವನ್ನು ಅವರ ನಿಧನಾನಂತರ ಅವರ ಸುಪುತ್ರ ಆದಿತ್ಯ ತನ್ನ ಸುಪರ್ದಿಗೆ ತೆಗೆದುಕೊಂಡಿದ್ದಾನೆ. ಆದ್ರೆ ಅದನ್ನು ಅಡ್ಡೆಯನ್ನಾಗಿ ಮಾಡಿಕೊಂಡಿರುವ ಡ್ರಗ್ಸ್ ಕೇಸ್ ಆರೋಪಿ-ಆರು ಆದಿತ್ಯ ಆಳ್ವಾ ಸದ್ಯಕ್ಕೆ ಪೊಲೀಸರ ಕಣ್ತಪ್ಪಿಸಿ, ವಿದೇಶಕ್ಕೆ ಪರಾರಿಯಾಗಿದ್ದಾನೆ ಎಂದು ಸ್ವತಃ ಸಿಸಿಬಿ ಮೂಲಗಳೇ ಹೇಳುತ್ತಿವೆ. ಈ ಮಧ್ಯೆ, ಇಂದು ಬೆಳಗ್ಗೆ ಮೂವರು ಹಿರಿಯ ಅಧಿಕಾರಿಗಳ ನೇತೃತ್ವದ ಸಿಸಿಬಿ ತಂಡ ಅದೇ House of […]

ಆದಿತ್ಯನ ಅಡ್ಡೆ House of Life ಟ್ರೇಡ್ ಪರವಾನಗಿ ಅವಧಿ ಮುಗಿದು ಯಾವುದೋ ಕಾಲವಾಗಿದೆ!
ಸಾಧು ಶ್ರೀನಾಥ್​

Updated on: Sep 15, 2020 | 12:04 PM

ತಲಾ 6 ಲಕ್ಷ ರೂಪಾಯಿ ಕೊಟ್ಟು ಫಾರ್ಮ್​ ಹೌಸ್​ ಮಾಡಲು ಅಂದಿನ ವರ್ಚಸ್ವೀ ರಾಜಕಾರಣಿ ಜೀವರಾಜ್​ ಆಳ್ವಾ ಖರೀಸಿದ್ದ ಜಾಗವನ್ನು ಅವರ ನಿಧನಾನಂತರ ಅವರ ಸುಪುತ್ರ ಆದಿತ್ಯ ತನ್ನ ಸುಪರ್ದಿಗೆ ತೆಗೆದುಕೊಂಡಿದ್ದಾನೆ. ಆದ್ರೆ ಅದನ್ನು ಅಡ್ಡೆಯನ್ನಾಗಿ ಮಾಡಿಕೊಂಡಿರುವ ಡ್ರಗ್ಸ್ ಕೇಸ್ ಆರೋಪಿ-ಆರು ಆದಿತ್ಯ ಆಳ್ವಾ ಸದ್ಯಕ್ಕೆ ಪೊಲೀಸರ ಕಣ್ತಪ್ಪಿಸಿ, ವಿದೇಶಕ್ಕೆ ಪರಾರಿಯಾಗಿದ್ದಾನೆ ಎಂದು ಸ್ವತಃ ಸಿಸಿಬಿ ಮೂಲಗಳೇ ಹೇಳುತ್ತಿವೆ.

ಈ ಮಧ್ಯೆ, ಇಂದು ಬೆಳಗ್ಗೆ ಮೂವರು ಹಿರಿಯ ಅಧಿಕಾರಿಗಳ ನೇತೃತ್ವದ ಸಿಸಿಬಿ ತಂಡ ಅದೇ House of Life ಹೆಸರಿನ ರೆಸಾರ್ಟ್​ ಮೇಲೆ ಈ ಕ್ಷಣದ ವರೆಗೂ ದಾಳಿ ಮುಂದುವರಿಸಿದ್ದಾರೆ. ಈ ಮಧ್ಯೆ, ಸದರಿ ರೆಸಾರ್ಟ್ ಬಿಬಿಎಂಪಿ ವ್ಯಾಪ್ತಿಗೆ ಬರುವುದರಿಂದ ಸ್ಥಳೀಯ ಬಿಬಿಎಂಪಿ ಅಧಿಕಾರಿಗಳು ಸಿಸಿಬಿ ದಾಳಿ ವಿಚಾರ ಕೇಳಿಸಿಕೊಂಡು ದಡಬಡಾ ಅಂತಾ ಆ ರೆಸಾರ್ಟ್​ನತ್ತ ಎದ್ದುಹೋಗಿದ್ದಾರೆ.

ಬಿಬಿಎಂಪಿ ಅಧಿಕಾರಿಗಳ ವಿಚಾರಣೆ ವೇಳೆ ಬಿಬಿಎಂಪಿಗೆ ಆಘಾತಕಾರಿ ವಿವಾರವೊಂದು ತಿಳಿದುಬಂದಿದೆ. ಅದೇನೆಂದ್ರೆ ಹೌಸ್ ಆಫ್ ಲೈಫ್‌ನ ಟ್ರೇಡ್ ಪರವಾನಗಿ ಅವಧಿ ಮುಗಿದಿರುವುದು! 2018ರ ಬಳಿಕ ಟ್ರೇಡ್​ ಲೈಸೆನ್ಸ್​ ರಿನಿವಲ್​ ಮಾಡಿಲ್ಲ. ಕಿರಣ್​ ಕಾರ್ತಿಕ್​ ಎಂಬವರ ಹೆಸರಿನಲ್ಲಿ ಟ್ರೇಡ್​ ಲೈಸೆನ್ಸ್ ಇದೆ. ರೆಸಾರ್ಟ್​, ಹೊಟೇಲ್ ಮತ್ತು ರೆಸ್ಟೋರೆಂಟ್​ಗೆ ಲೈಸೆನ್ಸ್​ ಪಡೆಯಲಾಗಿತ್ತು. ಆದ್ರೆ 2018 ರ ಬಳಿಕ ಲೈಸೆನ್ಸ್​ ರಿನಿವಲ್​ ಮಾಡಿರಲಿಲ್ಲ. ಆದ್ರೂ ನಿನ್ನೆ ರಾತ್ರಿ ತನಕವೂ ಅಲ್ಲಿ ನಿರಾತಂಕವಾಗಿ ಪಾರ್ಟಿಗಳನ್ನ ಆಯೋಜಿಸಲಾಗಿತ್ತು ಎಂಬ ಆಘಾತಕಾರಿ ಸಂಗತಿ ಕೇಳಿಬಂದಿದೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us