ಬೆಂಗಳೂರಿನಲ್ಲಿ ಏರುತ್ತಲೇ ಇದೆ ಕೊರೊನಾ ಕೇಸ್​, ಆಗಸ್ಟ್​ನಲ್ಲಿ ಹೆಚ್ಚು‘ವರಿ’!

ಬೆಂಗಳೂರು: ಕೊರೊನಾ ಜನರನ್ನು ತನ್ನ ಕಪಿಮುಷ್ಠಿಯಲ್ಲಿ ಬಂಧಿಸಿದೆ. ತಿಂಗಳು ಕಳೆಯುತ್ತಿದ್ದಂತೆ ಇದರ ಬಿಗಿ ಹೆಚ್ಚುತ್ತಿದೆ. ಜನರನ್ನು ಉಸಿರುಗಟ್ಟಿಸುತ್ತಿದೆ. ಹೌದು ಹೆಮ್ಮಾರಿ ಕೊರೊನಾ ವೈರಸ್ ತಿಂಗಳು ಕಳೆದಂತೆಲ್ಲಾ ತನ್ನ ಆರ್ಭಟವನ್ನು ಹೆಚ್ಚು ಮಾಡುತ್ತಿದೆ. ಆದರೆ ಜನ ಮಾತ್ರ ಇದಕ್ಕೆ ಕ್ಯಾರೆ ಎನ್ನದೆ ಕೊರೊನಾವನ್ನು ಮರೆತು ಜೀವನ ನಡೆಸುತ್ತಿದ್ದಾರೆ. ಆಗಸ್ಟ್​ನಲ್ಲಿ ಕೊರೊನಾ ದಾಪುಗಾಲು: ಕೊರೊನಾ ಜುಲೈ ತಿಂಗಳನ್ನೂ ಮೀರಿಸಿ ಆಗಸ್ಟ್ ತಿಂಗಳಲ್ಲಿ ಹೆಚ್ಚಾಗಿದೆ. ಬೆಂಗಳೂರಿನ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ. ಆಗಸ್ಟ್ ಒಂದೇ ತಿಂಗಳಿನಲ್ಲಿ ದಾಖಲಾದ ಸೋಂಕಿತರ ಸಂಖ್ಯೆ ಬರೋಬ್ಬರಿ […]

ಬೆಂಗಳೂರಿನಲ್ಲಿ ಏರುತ್ತಲೇ ಇದೆ ಕೊರೊನಾ ಕೇಸ್​, ಆಗಸ್ಟ್​ನಲ್ಲಿ ಹೆಚ್ಚು‘ವರಿ’!
Edited By:

Updated on: Sep 01, 2020 | 11:59 AM

ಬೆಂಗಳೂರು: ಕೊರೊನಾ ಜನರನ್ನು ತನ್ನ ಕಪಿಮುಷ್ಠಿಯಲ್ಲಿ ಬಂಧಿಸಿದೆ. ತಿಂಗಳು ಕಳೆಯುತ್ತಿದ್ದಂತೆ ಇದರ ಬಿಗಿ ಹೆಚ್ಚುತ್ತಿದೆ. ಜನರನ್ನು ಉಸಿರುಗಟ್ಟಿಸುತ್ತಿದೆ. ಹೌದು ಹೆಮ್ಮಾರಿ ಕೊರೊನಾ ವೈರಸ್ ತಿಂಗಳು ಕಳೆದಂತೆಲ್ಲಾ ತನ್ನ ಆರ್ಭಟವನ್ನು ಹೆಚ್ಚು ಮಾಡುತ್ತಿದೆ. ಆದರೆ ಜನ ಮಾತ್ರ ಇದಕ್ಕೆ ಕ್ಯಾರೆ ಎನ್ನದೆ ಕೊರೊನಾವನ್ನು ಮರೆತು ಜೀವನ ನಡೆಸುತ್ತಿದ್ದಾರೆ.

ಆಗಸ್ಟ್​ನಲ್ಲಿ ಕೊರೊನಾ ದಾಪುಗಾಲು:
ಕೊರೊನಾ ಜುಲೈ ತಿಂಗಳನ್ನೂ ಮೀರಿಸಿ ಆಗಸ್ಟ್ ತಿಂಗಳಲ್ಲಿ ಹೆಚ್ಚಾಗಿದೆ. ಬೆಂಗಳೂರಿನ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ. ಆಗಸ್ಟ್ ಒಂದೇ ತಿಂಗಳಿನಲ್ಲಿ ದಾಖಲಾದ ಸೋಂಕಿತರ ಸಂಖ್ಯೆ ಬರೋಬ್ಬರಿ 71,729. ಜುಲೈ ತಿಂಗಳಿನಲ್ಲಿ ದಾಖಲಾಗಿದ್ದ ಸೋಂಕಿತರ ಸಂಖ್ಯೆ 52,106. ಜುಲೈ ತಿಂಗಳಿಗೆ ಹೋಲಿಸಿಕೊಂಡ್ರೆ, ಆಗಸ್ಟ್‌ನಲ್ಲಿ 19,623 ಜನರಲ್ಲಿ ಹೆಚ್ಚು‘ವರಿ’ಯಾಗಿ ಸೋಂಕು ಕಂಡು ಬಂದಿದೆ.

ಆಗಸ್ಟ್ ತಿಂಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 909. ಜುಲೈ ತಿಂಗಳಿನಲ್ಲಿ 962 ಜನ ಸಾವನ್ನಪ್ಪಿದ್ದರು. ಹಿಂದಿನ ತಿಂಗಳಿಗೆ ಹೋಲಿಸಿಕೊಂಡ್ರೆ ಗುಣಮುಖರಾದವರ ಸಂಖ್ಯೆ ಹೆಚ್ಚಿದೆ. ಆದ್ರೆ ಈವರೆಗೂ ಸೋಂಕಿಗೆ ನಿಖರವಾದ ಔಷಧಿ ಪತ್ತೆಯಾಗದಿರೋದು ಆತಂಕಕ್ಕೀಡುಮಾಡಿದೆ. ತಿಂಗಳಿಂದ ತಿಂಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರು ಪತ್ತೆಯಾಗುತ್ತಿದ್ದಾರೆ.