ಅನಾಥಾಶ್ರಮದ ಪುಟ್ಟ ಅಭಿಮಾನಿಯ ಆಸೆ ನೆರವೇರಿಸಿ, ನಗು ಮೂಡಿಸಿದ ಅಲ್ಲು ಅರ್ಜುನ್​

ಆ ಪುಟ್ಟ ಹುಡುಗನಂತೂ ನೆಚ್ಚಿನ ನಟನ ಆಟೋಗ್ರಾಫ್ ಕೈಯಲ್ಲಿ ಹಿಡಿದು ಭಾವುಕನಾದ. ಕೆಂಪುಬಣ್ಣದ ಡ್ರೆಸ್ ತೊಟ್ಟಿದ್ದ ಚಿಣ್ಣರ ಮೊಗದಲ್ಲಿ ಫುಲ್ ಖುಷಿ ಮಿನುಗುತ್ತಿತ್ತು.

ಅನಾಥಾಶ್ರಮದ ಪುಟ್ಟ ಅಭಿಮಾನಿಯ ಆಸೆ ನೆರವೇರಿಸಿ, ನಗು ಮೂಡಿಸಿದ ಅಲ್ಲು ಅರ್ಜುನ್​
ಅಲ್ಲು ಅರ್ಜುನ್​ (ಎಡ)-ಪುಟ್ಟ ಅಭಿಮಾನಿ (ಬಲ)
Edited By:

Updated on: Dec 25, 2020 | 4:28 PM

ಟಾಲಿವುಡ್​ನ ‘ಸ್ಟೈಲಿಶ್​ ಸ್ಟಾರ್’ ಅಲ್ಲು ಅರ್ಜುನ್ ತಮ್ಮ ಬಾಲ ಅಭಿಮಾನಿಯೊಬ್ಬನ ಆಸೆಯೊಂದನ್ನು ನೆರವೇರಿಸುವ ಮೂಲಕ, ಆ ಪುಟ್ಟ ಹುಡುಗನ ಮುಖದಲ್ಲಿ ಸಂತೋಷ ಮೂಡಿಸಿದ್ದಾರೆ.

ಡಿ.17ರಂದು ನಟಿ ವಿತಿಕಾ ಶೆರು ಟ್ವಿಟರ್​ನಲ್ಲಿ ವಿಡಿಯೋವೊಂದನ್ನು ಅಪ್ಲೋಡ್ ಮಾಡಿದ್ದರು. ಅದರಲ್ಲಿ ಈ ಹುಡುಗ ಬಗ್ಗೆ ನಟ ಅಲ್ಲು ಅರ್ಜುನ್​ಗೆ ತಿಳಿಸಿದ್ದರು. ವಿಡಿಯೋ ಸಾರಾಂಶ ಹೀಗಿತ್ತು..: ‘ಹೆಲೋ..ಅರ್ಜುನ್, ನಾನು ಕ್ರಿಸ್ಮಸ್​ ಪ್ರಯುಕ್ತ ಅನಾಥಾಶ್ರಮವೊಂದರಲ್ಲಿ ಸೀಕ್ರೆಟ್ ಸಂತ ವಿಡಿಯೋ ಮಾಡುತ್ತಿದ್ದೇನೆ. ಈ ಬಾರಿ ಸಂತ ಕ್ಲಾಸ್ ನಿಮ್ಮ ಯಾವ ಆಸೆಯನ್ನು ಈಡೇರಿಸಬೇಕು ಎಂದು ಪುಟ್ಟ ಮಕ್ಕಳ ಬಳಿ ಕೇಳಿದೆ. ಅದಕ್ಕೆ ಒಬ್ಬೊಬ್ಬರೂ ಒಂದೊಂದು ಆಸೆಯನ್ನು ಬರೆದಿದ್ದಾರೆ. ಅವರಲ್ಲಿ ಈ ಪುಟ್ಟ ಹುಡುಗನ ಆಸೆಯನ್ನು ನೀವು ಮಾತ್ರ ನೆರವೇರಿಸಬಲ್ಲಿರಿ. ನಿಮ್ಮ ಅಭಿಮಾನಿ ಬಾಲಕ ದೊಡ್ಡದನ್ನೇನೂ ಬಯಸುತ್ತಿಲ್ಲ. ಅವನಿಗೆ ನಿಮ್ಮದೊಂದು ಆಟೋಗ್ರಾಫ್ ಬೇಕಾಗಿದೆ. ಅದನ್ನು ನೀವು ಈಡೇರಿಸುತ್ತೀರಿ ಎಂದು ನಂಬಿದ್ದೇನೆ. ಈ ಕ್ರಿಸ್ಮಸ್​ಗೆ ಹುಡುಗನ ಪಾಲಿನ ಸಂತ ಕ್ಲಾಸ್ ನೀವಾಗಿ, ಜೀವನಪರ್ಯಂತ ಅದೊಂದು ಸುಂದರ ನೆನಪಾಗಿರುವಂತೆ ಮಾಡಿ’ ಎಂದು ಮನವಿ ಮಾಡಿದ್ದರು.

ಅದನ್ನೀಗ ಅಲ್ಲು ಅರ್ಜುನ್​ ನೆರವೇರಿಸಿದ್ದಾರೆ. ಅನಾಥಾಶ್ರಮದ ಬಾಲ ಅಭಿಮಾನಿಗೆ ತನ್ನ ಸಂಬಂಧಿ ಅಯಾನ್​ ಮೂಲಕ ಆಟೋಗ್ರಾಫ್​ ಕಳಿಸಿಕೊಟ್ಟಿದ್ದಾರೆ. ಅಯಾನ್​, ವಿತಿಕಾ ಇಂದು ಮಕ್ಕಳೊಂದಿಗೆ ಸಂಭ್ರಮದಿಂದ ಕ್ರಿಸ್ಮಸ್​ ಹಬ್ಬ ಆಚರಣೆ ಮಾಡಿದ್ದಾರೆ. ಆ ಪುಟ್ಟ ಹುಡುಗನಂತೂ ನೆಚ್ಚಿನ ನಟನ ಆಟೋಗ್ರಾಫ್ ಕೈಯಲ್ಲಿ ಹಿಡಿದು ಭಾವುಕನಾದ. ಕೆಂಪುಬಣ್ಣದ ಡ್ರೆಸ್ ತೊಟ್ಟಿದ್ದ ಚಿಣ್ಣರ ಮೊಗದಲ್ಲಿ ಫುಲ್ ಖುಷಿ ಮಿನುಗುತ್ತಿತ್ತು.

ಅನಾಥಾಶ್ರಮದಲ್ಲಿ ನಡೆದ ಕ್ರಿಸ್ಮಸ್​ ಸಂಭ್ರಮದ ವಿಡಿಯೋವನ್ನು ಶೇರ್​ ಮಾಡಿಕೊಂಡ ವಿತಿಕಾ, ಅಲ್ಲು ಅರ್ಜುನ್​ಗೆ ಧನ್ಯವಾದ ತಿಳಿಸಿದ್ದಾರೆ. ನೀವು ನಿಮ್ಮ ಅಭಿಮಾನಿಗಳ ಬಗ್ಗೆ ಹೊಂದಿರುವ ಪ್ರೀತಿ, ಕರುಣೆಗೆ ಎಷ್ಟು ಥ್ಯಾಂಕ್ಸ್ ಹೇಳಿದ್ರೂ ಸಾಲದು ಎಂದು ಟ್ವೀಟ್​ ಮಾಡಿದ್ದಾರೆ.

ಅನಾಥಾಶ್ರಮದಲ್ಲಿ ಇಂದಿನ ಸಂಭ್ರಮದ ವಿಡಿಯೋ

 

ಅಂದು ವಿತಿಕಾ ಮಾಡಿದ್ದ ಮನವಿಯ ವಿಡಿಯೋ