ಬೆಕ್ಕಿಗೆ ಹಾಲುಣಿಸಿ ತಾಯಿ ಮಮತೆ ತೋರಿದ ಶ್ವಾನ!
ಮಡಿಕೇರಿ: ಶ್ವಾನ ಮತ್ತು ಬೆಕ್ಕು ಎರಡೂ ಜನ್ರ ಅತಿಹೆಚ್ಚು ಪ್ರೀತಿಪಾತ್ರವಾದ ಪ್ರಾಣಿಗಳು. ಆದ್ರೆ ಎರಡೂ ಒಂದೇ ಮನೆಯಲ್ಲಿದ್ರೆ ಹಾವು ಮುಂಗುಸಿ ರೀತಿ ವರ್ತನೆ ಮಾಡ್ತವೆ. ಆದರೆ ಕೊಡಗು ಜಿಲ್ಲೆಯಲ್ಲಿ ಅಪರೂಪದ ದೃಶ್ಯವೊಂದು ಕಂಡು ಬಂದಿದೆ. ಶ್ವಾನ ಬೆಕ್ಕಿಗೆ ಎದೆಹಾಲು ಉಣಿಸಿ ತಾಯಿ ಮಮತೆ ತೋರಿಸಿದೆ. ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಚೆಟ್ಟಂಗಡ ಗಿಣಿ ತಿಮ್ಮಯ್ಯ ಎಂಬುವವರ ಮನೆ ಇಂತಹ ಅಪರೂಪದ ಘಟನೆಗೆ ಸಾಕ್ಷಿಯಾಗಿದೆ. ತಿಮ್ಮಯ್ಯ ಅವ್ರು ತಮ್ಮ ಮನೆಯಲ್ಲಿ ನಾಯಿ ಹಾಗೂ ಬೆಕ್ಕು ಎರಡನ್ನೂ ಸಾಕಿದ್ದಾರೆ. ಮನೆಯಲ್ಲಿರೋ […]
ಮಡಿಕೇರಿ: ಶ್ವಾನ ಮತ್ತು ಬೆಕ್ಕು ಎರಡೂ ಜನ್ರ ಅತಿಹೆಚ್ಚು ಪ್ರೀತಿಪಾತ್ರವಾದ ಪ್ರಾಣಿಗಳು. ಆದ್ರೆ ಎರಡೂ ಒಂದೇ ಮನೆಯಲ್ಲಿದ್ರೆ ಹಾವು ಮುಂಗುಸಿ ರೀತಿ ವರ್ತನೆ ಮಾಡ್ತವೆ. ಆದರೆ ಕೊಡಗು ಜಿಲ್ಲೆಯಲ್ಲಿ ಅಪರೂಪದ ದೃಶ್ಯವೊಂದು ಕಂಡು ಬಂದಿದೆ. ಶ್ವಾನ ಬೆಕ್ಕಿಗೆ ಎದೆಹಾಲು ಉಣಿಸಿ ತಾಯಿ ಮಮತೆ ತೋರಿಸಿದೆ.
ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಚೆಟ್ಟಂಗಡ ಗಿಣಿ ತಿಮ್ಮಯ್ಯ ಎಂಬುವವರ ಮನೆ ಇಂತಹ ಅಪರೂಪದ ಘಟನೆಗೆ ಸಾಕ್ಷಿಯಾಗಿದೆ. ತಿಮ್ಮಯ್ಯ ಅವ್ರು ತಮ್ಮ ಮನೆಯಲ್ಲಿ ನಾಯಿ ಹಾಗೂ ಬೆಕ್ಕು ಎರಡನ್ನೂ ಸಾಕಿದ್ದಾರೆ. ಮನೆಯಲ್ಲಿರೋ ಎರಡೂ ಪ್ರಾಣಿಗಳು ಕೂಡ ಇದೀಗ ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಗಿವೆ. ನಾಯಿ ತನ್ನ ಮರಿಗಳಿಗೆ ಹಾಲು ನೀಡುವ ಮಾದರಿಯಲ್ಲೇ ಮನೆಯಲ್ಲಿರೋ ಬೆಕ್ಕಿಗೆ ಹಾಲು ಉಣಿಸಿದೆ. ನಾಯಿ ಬೆಕ್ಕಿಗೆ ಹಾಲು ಉಣಿಸುವ ದೃಶ್ಯ ಇದೀಗ ಎಲ್ಲೆಡೆ ವೈರಲ್ ಆಗಿದೆ.
Published On - 10:49 am, Sun, 31 May 20