ಕೊರೊನಾ ಸೋಂಕಿತನನ್ನು ಆಸ್ಪತ್ರೆಗೆ ಸಾಗಿಸುವಾಗ ಆಂಬ್ಯುಲೆನ್ಸ್ ಪಲ್ಟಿ, ಮುಂದೆ ಆಗಿದ್ದೇನು?

ಬೆಳಗಾವಿ: ಕೊರೊನಾ ಸೋಂಕಿತನನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಆಂಬುಲೆನ್ಸ್ ರಸ್ತೆಯ ವಿಭಜಕಕ್ಕೆ ಡಿಕ್ಕಿ ಹೊಡೆದಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಚಿಕ್ಕೋಡಿಯ ಅಂಕಲಿಯಿಂದ ಬೆಳಗಾವಿ ಜಿಲ್ಲಾಸ್ಪತ್ರೆಗೆ ಕೊರೊನಾ ಸೋಂಕಿತನನ್ನು ಆಂಬುಲೆನ್ಸ್​ನಲ್ಲಿ ಸಾಗಿಸಲಾಗುತ್ತಿತ್ತು. ಈ ವೇಳೆ ಹುಕ್ಕೇರಿಯ ಹತ್ತರಗಿ ಟೋಲ್ ಬಳಿ ಅಂಬುಲೆನ್ಸ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಅಂಬುಲೆನ್ಸ್ ರಸ್ತೆಯಲ್ಲಿಯೇ ಪಲ್ಟಿ ಆಗಿ ಬಿದ್ದಿದೆ. ಇದರಿಂದ ಅಂಬುಲೆನ್ಸ್​ನಲ್ಲಿದ್ದ ಕೊರೊನಾ ಸೋಂಕಿತನಿಗೆ ತೀವ್ರ ಗಾಯಗಳಾಗಿವೆ.  ಹೀಗಾಗಿ ಸೋಂಕಿತನನ್ನು ಕೂಡಲೇ ಚಿಕಿತ್ಸೆಗಾಗಿ ಬೇರೊಂದು ವಾಹನ ವ್ಯವಸ್ಥೆ ಮಾಡಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. […]

ಕೊರೊನಾ ಸೋಂಕಿತನನ್ನು ಆಸ್ಪತ್ರೆಗೆ ಸಾಗಿಸುವಾಗ ಆಂಬ್ಯುಲೆನ್ಸ್ ಪಲ್ಟಿ, ಮುಂದೆ ಆಗಿದ್ದೇನು?
ಸಾಧು ಶ್ರೀನಾಥ್​ Edited By: Guru

Updated on: Aug 09, 2020 | 5:51 PM

ಬೆಳಗಾವಿ: ಕೊರೊನಾ ಸೋಂಕಿತನನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಆಂಬುಲೆನ್ಸ್ ರಸ್ತೆಯ ವಿಭಜಕಕ್ಕೆ ಡಿಕ್ಕಿ ಹೊಡೆದಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಚಿಕ್ಕೋಡಿಯ ಅಂಕಲಿಯಿಂದ ಬೆಳಗಾವಿ ಜಿಲ್ಲಾಸ್ಪತ್ರೆಗೆ ಕೊರೊನಾ ಸೋಂಕಿತನನ್ನು ಆಂಬುಲೆನ್ಸ್​ನಲ್ಲಿ ಸಾಗಿಸಲಾಗುತ್ತಿತ್ತು. ಈ ವೇಳೆ ಹುಕ್ಕೇರಿಯ ಹತ್ತರಗಿ ಟೋಲ್ ಬಳಿ ಅಂಬುಲೆನ್ಸ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಅಂಬುಲೆನ್ಸ್ ರಸ್ತೆಯಲ್ಲಿಯೇ ಪಲ್ಟಿ ಆಗಿ ಬಿದ್ದಿದೆ.

ಇದರಿಂದ ಅಂಬುಲೆನ್ಸ್​ನಲ್ಲಿದ್ದ ಕೊರೊನಾ ಸೋಂಕಿತನಿಗೆ ತೀವ್ರ ಗಾಯಗಳಾಗಿವೆ.  ಹೀಗಾಗಿ ಸೋಂಕಿತನನ್ನು ಕೂಡಲೇ ಚಿಕಿತ್ಸೆಗಾಗಿ ಬೇರೊಂದು ವಾಹನ ವ್ಯವಸ್ಥೆ ಮಾಡಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.

 

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us