PM Modi in Belagavi: ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಸಾವಿರಾರು ಜನರ ನಡುವೆ ಪ್ರಧಾನಿ ನರೇಂದ್ರ ಮೋದಿ ಭರ್ಜರಿ ರೋಡ್ ಶೋ!
ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನರಿಗೆ ತಮ್ಮ ಕಣ್ಣೆದಿರು ಪ್ರಧಾನಿ ಮೋದಿಯನ್ನು ಕಂಡು ಆನಂದಾತಿರೇಕ ಉಂಟಾಯಿತು.
ಬೆಳಗಾವಿ: ನಗರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ (PM Narendra Modi) 10 ಕಿಮೀ ಉದ್ದದ ರೋಡ್ ಶೋ ಭರ್ಜರಿಯಾಗಿ ನಡೆದಿದೆ. ಪ್ರಧಾನಿಗಳ ಆಗಮನಕ್ಕಾಗಿ ತಾಸುಗಟ್ಟಲೆ ಕಾದು ನಿಂತಿದ್ದ ಜನ ಪ್ರಧಾನಿಗಳನ್ನು ಕಂಡಕೂಡಲೇ ಪ್ರಸನ್ನಚಿತ್ತರಾಗಿ (elated) ಹರ್ಷೋದ್ಗಾರ ಮಾಡಿದರು. ಸ್ವಲ್ಪ ಸಮಯದವೆರೆ ಕಾರೊಳಗೆ ಕೂತು ಜನರತ್ತ ಕೈ ಬೀಸುತ್ತಿದ್ದ (wave hand) ಪ್ರಧಾನಿಗಳು ನಂತರ ವಾಹನದ ಹೊರಭಾಗದ ಸ್ಟ್ಯಾಂಡ್ ಮೇಲೆ ನಿಂತು ಮುಗಳ್ನಗುತ್ತಾ ಜನರತ್ತ ಕೈ ಬೀಸಿದರು. ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನರಿಗೆ ತಮ್ಮ ಕಣ್ಣೆದಿರು ಪ್ರಧಾನಿ ಮೋದಿಯನ್ನು ಕಂಡು ಆನಂದಾತಿರೇಕ ಉಂಟಾಯಿತು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
.