AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ChatGpt: ಸಿನಿಮಾ ಕತೆಗಾರರ ಕೆಲಸ ಸಂಕಷ್ಟದಲ್ಲಿ: ಮಾಸ್ ಕತೆ ಬರೆದ ಚಾಟ್ ಜಿಪಿಟಿ! ಕತೆ ಹೇಗಿದೆ? ಓದಿ ನೋಡಿ

ಇಬ್ಬರು ಮಾಸ್ ಹೀರೋಗಳಾದ ಮಹೇಶ್ ಬಾಬು ಹಾಗೂ ಪವನ್ ಕಲ್ಯಾಣ್ ಅವರುಗಳಿಗೆ ಕತೆ ಬರೆದಿದೆ ಕೃತಕ ಬುದ್ಧಿಮತ್ತೆ ಚಾಟ್ ಜಿಪಿಟಿ. ಕತೆ ಹೇಗಿದೆ ತಿಳಿಯಲು ಮುಂದೆ ಓದಿ.

ChatGpt: ಸಿನಿಮಾ ಕತೆಗಾರರ ಕೆಲಸ ಸಂಕಷ್ಟದಲ್ಲಿ: ಮಾಸ್ ಕತೆ ಬರೆದ ಚಾಟ್ ಜಿಪಿಟಿ! ಕತೆ ಹೇಗಿದೆ? ಓದಿ ನೋಡಿ
ಚಾಟ್ ಜಿಪಿಟಿ- ಮಹೇಶ್ ಬಾಬು-ಪವನ್ ಕಲ್ಯಾಣ್
ಮಂಜುನಾಥ ಸಿ.
|

Updated on:Feb 27, 2023 | 3:15 PM

Share

ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟಿಲೆಜೆನ್ಸ್) ಬಗ್ಗೆ ವಿಶ್ವದಾದ್ಯಂತ ಜೋರು ಚರ್ಚೆಗಳು ನಡೆಯುತ್ತಿವೆ. ಅದರಲ್ಲಿಯೂ ಚಾಟ್ ಜಿಪಿಟಿ (ChatGpt) ಬಂದ ಮೇಲಂತೂ ಕೃತಕ ಬುದ್ಧಿಮತ್ತೆಯ (Artificial Intelligence) ಸಾಮರ್ಥ್ಯ ಸಾಮಾನ್ಯ ಮೊಬೈಲ್ ಬಳಕೆದಾರರಿಗೂ ಅರ್ಥವಾಗುತ್ತಿದ್ದು, ಅದರ ಭವಿಷ್ಯದ ಸಾಧ್ಯತೆಗಳ ಬಗ್ಗೆ ಆತಂಕ ಹಾಗೂ ಕುತೂಹಲ ಏಕಕಾಲಕ್ಕೆ ಹುಟ್ಟಿಕೊಂಡಿವೆ. ಮನರಂಜನಾ ಕ್ಷೇತ್ರದ ಮೇಲೂ ಈ ಏಐಗಳು ಗುರುತರ ಪ್ರಭಾವ ಬೀರಲಿವೆ ಎಂದು ಅಂದಾಜಿಸಲಾಗಿದ್ದು. ಈಗಾಗಲೇ ಚಾಟ್ ಜಿಪಿಟಿ ದಕ್ಷಿಣ ಭಾರತದ ಇಬ್ಬರು ಸ್ಟಾರ್ ಹೀರೋಗಳಿಗಾಗಿ ಒಂದು ಮಾಸ್ ಕತೆ ರಚಿಸಿದ್ದು, ಸಿನಿಮಾ ಕತೆಗಾರರ ಎದೆಯಲ್ಲಿ ಸಣ್ಣ ನಡುಕ ಹುಟ್ಟಿಸಿದೆ.

ಮಹೇಶ್ ಬಾಬು ಹಾಗೂ ಪವನ್ ಕಲ್ಯಾಣ್ ಅವರಿಗಾಗಿ ಒಂದು ಮಾಸ್ ಕತೆಯನ್ನು ಚಾಟ್ ಜಿಪಿಟಿ ಬರೆದಿದೆ. ಕೆಲವು ಪೂರಕ ಮಾಹಿತಿಗಳನ್ನಷ್ಟೆ ಚಾಟ್ ಜಿಪಿಟಿಗೆ ಒದಗಿಸಲಾಗಿದ್ದು, ಅದನ್ನು ಬಳಸಿ ಪಕ್ಕಾ ಕಮರ್ಶಿಯಲ್ ಕತೆಯೊಂದನ್ನು ಚಾಟ್ ಜಿಪಿಟಿ ಬರೆದು ಕೊಟ್ಟಿದೆ.

ಕತೆ ಇಂತಿದೆ, ಮಹೇಶ್ ಬಾಬು ಹಾಗೂ ಪವನ್ ಕಲ್ಯಾಣ್ ಇಬ್ಬರೂ ಭಾರತದ ಪ್ರಮುಖ ತನಿಖೆ ಮತ್ತು ಭದ್ರತಾ ಸಂಸ್ಥೆಯೊಂದರ ಅಧಿಕಾರಿಗಳು. ಇಬ್ಬರೂ ಅಂಡರ್​ಕವರ್ ಏಜೆಂಟ್​ಗಳಾಗಿ ಕೆಲಸ ಮಾಡುತ್ತಿದ್ದಾರೆ. ಇಬ್ಬರಿಗೂ ಪರಸ್ಪರ ಪರಿಚಯವಿಲ್ಲ. ಆದರೆ ಇಲಾಖೆಯಲ್ಲಿ ಇವರಿಬ್ಬರ ಹೆಸರು ಬಹಳ ಜನಪ್ರಿಯ.

ಇದೇ ಸಮಯದಲ್ಲಿ ದೊಡ್ಡ ಅಂಡರ್​ವರ್ಲ್ಡ್ ಗ್ಯಾಂಗ್ ಒಂದು ಭಾರತದ ಒಳಕ್ಕೆ ಡ್ರಗ್ಸ್ ಮತ್ತು ಅಕ್ರಮ ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡುತ್ತಿರುತ್ತದೆ. ಈ ಗ್ಯಾಂಗ್ ಅನ್ನು ಹೆಡೆ ಮುರಿ ಕಟ್ಟಲು ಉನ್ನತ ಅಧಿಕಾರಿಯೊಬ್ಬ ಈ ಇಬ್ಬರನ್ನು ನೇಮಿಸುತ್ತಾರೆ. ಆದರೆ ಪವನ್-ಮಹೇಶ್ ಊಹಿಸಿದಷ್ಟು ಸಣ್ಣ ಗ್ಯಾಂಗ್ ಅಥವಾ ನೆಟ್​ವರ್ಕ್ ಆ ಗ್ಯಾಂಗ್​ನದ್ದಾಗಿರುವುದಿಲ್ಲ.

ಗ್ಯಾಂಗ್​ನ ವಿರುದ್ಧ ಇಬ್ಬರು ಹೀರೋಗಳು ಕಾರ್ಯಾಚರಣೆ ಚುರುಕು ಗೊಳಿಸುತ್ತಲೇ, ಪವನ್ ಕಲ್ಯಾಣ್ ಹಾಗೂ ಮಹೇಶ್ ಬಾಬು ಮೇಲೆ ಸತತ ದಾಳಿಗಳು ಆರಂಭವಾಗುತ್ತವೆ. ತಮ್ಮದೇ ಇಲಾಖೆಯ ಅಧಿಕಾರಿಗಳು ಸಹ ಇಬ್ಬರನ್ನು ಕೊಲ್ಲಲು ನೋಡುತ್ತಾರೆ. ಇದಕ್ಕೆ ಕಾರಣ ಆ ಗ್ಯಾಂಗ್​ನ ಲೀಡರ್ ಇಬ್ಬರನ್ನು ಕೊಂದವರಿಗೆ ಭಾರಿ ದೊಡ್ಡ ಬಹುಮಾನ ನೀಡುವುದಾಗಿ ಘೋಷಿಸಿರುತ್ತಾನೆ. ಆದರೆ ಫೈಟ್​ ಹಾಗೂ ಶಸ್ತ್ರಾಸ್ತ್ರಗಳನ್ನು ಬಳಸುವಲ್ಲಿ ನಿಪುಣರಾಗಿರುವ ಹೀರೋಗಳು ತಮ್ಮನ್ನು ಕೊಲ್ಲಲು ಬಂದವರನ್ನೆಲ್ಲ ಹೆಡೆಮುರಿ ಕಟ್ಟುತ್ತಾರೆ.

ಕೊನೆಗೆ ಗ್ಯಾಂಗ್ ಲೀಡರ್​ನ ಅಡುಗು ತಾಣವಾದ ದೊಡ್ಡ ಹೆಡ್ ಕ್ವಾಟರ್ ಅನ್ನು ಕಂಡು ಹಿಡಿಯುವ ಹೀರೋಗಳು ಸೂಕ್ತ ಯೋಜನೆ ಒಂದನ್ನು ರಚಿಸಿ, ನಾಯಕಿಯರ ಸಹಾಯವನ್ನು ತೆಗೆದುಕೊಂಡು ಹೆಡ್​ಕ್ವಾಟರ್ ಮೇಲೆ ದಾಳಿ ಮಾಡುತ್ತಾರೆ. ಅಚಾನಕ್ಕಾದ ಈ ದಾಳಿಗೆ ಕಂಗಾಲಾದ ಗ್ಯಾಂಗ್​ನ ತಂಡವನ್ನು ದೊಡ್ಡ ಬಂದೂಕು, ಬಾಂಬರ್​ಗಳಿಂದ ನಿರ್ಣಾಮ ಮಾಡಿ, ಅಂತಿಮವಾಗಿ ಮಹಾಬಲಶಾಲಿಯಾದ ಗ್ಯಾಂಗ್​ನ ಲೀಡರ್​ ಅನ್ನು ಇಬ್ಬರೂ ಹೀರೋಗಳು ಸೇರಿ ಮುಗಿಸುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:40 pm, Mon, 27 February 23

ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ
ರಾಮನಗರ: ನಡುರಸ್ತೆಯಲ್ಲೇ ವಾಮಾಚಾರ; ನ್ಯೂಇಯರ್​ ಸಂಭ್ರಮದಲ್ಲಿದ್ದವರಿಗೆ ಶಾಕ್
ರಾಮನಗರ: ನಡುರಸ್ತೆಯಲ್ಲೇ ವಾಮಾಚಾರ; ನ್ಯೂಇಯರ್​ ಸಂಭ್ರಮದಲ್ಲಿದ್ದವರಿಗೆ ಶಾಕ್
ಮನೆಯ ಎದುರು ಕುರ್ಚಿ ಮೇಲೆ ಕುಳಿತಿದ್ಧ ವೃದ್ಧೆ ಮೇಲೆ ಕೋತಿಗಳ ದಾಳಿ
ಮನೆಯ ಎದುರು ಕುರ್ಚಿ ಮೇಲೆ ಕುಳಿತಿದ್ಧ ವೃದ್ಧೆ ಮೇಲೆ ಕೋತಿಗಳ ದಾಳಿ
Video: ತಂದೆ ತಾಯಿ ಜಗಳದಲ್ಲಿ ಮಗಳು ಸತ್ತೇ ಹೋದಳು!
Video: ತಂದೆ ತಾಯಿ ಜಗಳದಲ್ಲಿ ಮಗಳು ಸತ್ತೇ ಹೋದಳು!