Mahesh Babu-Rajamouli: ರಾಜಮೌಳಿಗಾಗಿ ಎರಡು ತಿಂಗಳು ಮೀಸಲಿಟ್ಟ ಮಹೇಶ್ ಬಾಬು

ಸಿನಿಮಾದ ಚಿತ್ರೀಕರಣ ಪ್ರಾರಂಭವಾಗುವ ಮುನ್ನ ಮಹೇಶ್ ಬಾಬು ಅವರಿಗಾಗಿ ವಿಶೇಷ ತರಬೇತಿ ಕಾರ್ಯಾಗಾರವನ್ನು ರಾಜಮೌಳಿ ಆಯೋಜಿಸಿದ್ದಾರೆ.

Mahesh Babu-Rajamouli: ರಾಜಮೌಳಿಗಾಗಿ ಎರಡು ತಿಂಗಳು ಮೀಸಲಿಟ್ಟ ಮಹೇಶ್ ಬಾಬು
ಮಹೇಶ್ ಬಾಬು-ರಾಜಮೌಳಿ
Follow us
ಮಂಜುನಾಥ ಸಿ.
|

Updated on: Feb 26, 2023 | 8:57 AM

ರಾಜಮೌಳಿ (Rajamouli) ಈಗ ಕೇವಲ ಪ್ಯಾನ್ ಇಂಡಿಯಾ ನಿರ್ದೇಶಕರು ಮಾತ್ರವಲ್ಲ ಅವರು ಪ್ಯಾನ್ ವರ್ಲ್ಡ್ ನಿರ್ದೇಶಕ. ಆರ್​ಆರ್​ಆರ್ ಸಿನಿಮಾ ದೊಡ್ಡ ಹಿಟ್ ಆದ ಬೆನ್ನಲ್ಲೆ ವಿಶ್ವದ ಸಿನಿಮಾ ಪ್ರಿಯರು, ರಾಜಮೌಳಿಯ ಮುಂದಿನ ಸಿನಿಮಾ ಯಾವಾಗ ಬರುತ್ತದೆಂಬ ಕುತೂಹಲದಲ್ಲಿದ್ದಾರೆ. ರಾಜಮೌಳಿ ಈಗಾಗಲೇ ಮಹೇಶ್ ಬಾಬು (Mahesh Babu) ಜೊತೆಗೆ ಹೊಸ ಸಿನಿಮಾ ಘೋಷಣೆ ಮಾಡಿದ್ದಾರಾದರೂ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಲು ಇನ್ನೂ ಸಮಯವಿದೆ.

ರಾಜಮೌಳಿ ನಿರ್ದೇಶನದ ಆರ್​ಆರ್​ಆರ್ ಸಿನಿಮಾ ವಿಶ್ವದಾದ್ಯಂತ ಪ್ರತಿಷ್ಠಿತ ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತಿರುವ ಕಾರಣ ರಾಜಮೌಳಿ ಸಹ ತುಸು ಬ್ಯುಸಿಯಾಗಿದ್ದಾರೆ. ಸಿನಿಮಾದ ಆರ್​ಆರ್​ಆರ್ ಹಾಡು ಆಸ್ಕರ್​ಗೆ ನಾಮಿನೇಟ್ ಆಗಿದ್ದು ಆ ಇವೆಂಟ್​ಗಾಗಿ ರಾಜಮೌಳಿ ಹಾಗೂ ಚಿತ್ರತಂಡ ಎದುರು ನೋಡುತ್ತಿದೆ.

ರಾಜಮೌಳಿ ಇನ್ನೂ ಆರ್​ಆರ್​ಆರ್​ ಅನ್ನು ವಿಶ್ವ ಸಿನಿಮಾದ ಪ್ರತಿಷ್ಠಿತ ವೇದಿಕೆಗಳಿಗೆ ತಲುಪಿಸುವಲ್ಲಿ ಬ್ಯುಸಿಯಾಗಿದ್ದಾರಾದರೂ ಅವರ ಹೊಸ ಸಿನಿಮಾದ ಕೆಲಸ ತೆರೆ ಮರೆಯಲ್ಲಿ ಜಾರಿಯಲ್ಲಿದೆ. ಕೆಲವೇ ದಿನಗಳಲ್ಲಿ ನಟ ಮಹೇಶ್ ಬಾಬು ಸಹ ಅಖಾಡಕ್ಕೆ ಇಳಿಯಲಿದ್ದಾರೆ. ಆದರೆ ಚಿತ್ರೀಕರಣಕ್ಕೆ ಅಲ್ಲ.

ಸಿನಿಮಾದ ಚಿತ್ರೀಕರಣ ಪ್ರಾರಂಭವಾಗುವ ಮುನ್ನ ಮಹೇಶ್ ಬಾಬು ಅವರಿಗಾಗಿ ವಿಶೇಷ ತರಬೇತಿ ಕಾರ್ಯಾಗಾರವನ್ನು ರಾಜಮೌಳಿ ಆಯೋಜಿಸಿದ್ದಾರೆ. ಸಿನಿಮಾವನ್ನು ನವೀನ ತಂತ್ರಜ್ಞಾನದ ಮೂಲಕ, ಭಿನ್ನ ಪರಿಸ್ಥಿತಿಗಳಲ್ಲಿ ಚಿತ್ರೀಕರಣ ಮಾಡಲಾಗುತ್ತದೆ. ಹಾಗಾಗಿ ಆ ಪರಸ್ಥಿತಿಗಳಿಗೆ ಮಹೇಶ್ ಬಾಬು ಅವರನ್ನು ಮುಂದಿಗೇ ತಯಾರು ಮಾಡಲೆಂದು ಹೀಗೆ ವಿಶೇಷ ತರಬೇತಿ ಕಾರ್ಯಾಗಾರವನ್ನು ರಾಜಮೌಳಿ ಹಮ್ಮಿಕೊಂಡಿದ್ದಾರೆ.

ಈ ತರಬೇತಿ ಕಾರ್ಯಾಗಾರವು ಎರಡು ತಿಂಗಳ ಕಾಲ ಇರಲಿದ್ದು, ಕಠಿಣವಾದ ಈ ತರಬೇತಿ ಕಾರ್ಯಕ್ಕಾಗಿ ಮಹೇಶ್ ಬಾಬು ತಯಾರಾಗಿದ್ದಾರೆ. ಪ್ರಸ್ತುತ ತ್ರಿವಿಕ್ರಮ್ ನಿರ್ದೇಶನದ ಸಿನಿಮಾ ಚಿತ್ರೀಕರಣದಲ್ಲಿ ಮಹೇಶ್ ಬಾಬು ತೊಡಗಿಕೊಂಡಿದ್ದು, ಆ ಸಿನಿಮಾ ಅಂತಿಮ ಹಂತದಲ್ಲಿದೆ. ಅದರ ಚಿತ್ರೀಕರಣ ಮುಗಿದ ಕೂಡಲೇ ಮಹೇಶ್ ಬಾಬು ತರಬೇತಿ ಕಾರ್ಯಾಗಾರಕ್ಕೆ ಹಾಜರಾಗಲಿದ್ದಾರೆ.

ರಾಜಮೌಳಿಯ ಈ ಹೊಸ ಸಿನಿಮಾಕ್ಕೆ ಹಲವು ಹೊಸ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲಾಗಿದ್ದು, ಹಾಲಿವುಡ್ ನ ಜನಪ್ರಿಯ ಸ್ಟುಡಿಯೋ ಒಂದರ ಜೊತೆ ರಾಜಮೌಳಿ ಒಪ್ಪಂದ ಮಾಡಿಕೊಂಡಿದ್ದಾರೆ.

ರಾಜಮೌಳಿ-ಮಹೇಶ್ ಬಾಬು ಅವರ ಸಿನಿಮಾವು ಅರಣ್ಯದಲ್ಲಿ ನಡೆಯುವ ಸಾಹಸ ಕತೆಯನ್ನು ಹೊಂದಿರಲಿದ್ದು, ಹಲವು ದೇಶಗಳಲ್ಲಿ ಸಿನಿಮಾದ ಚಿತ್ರೀಕರಣ ನಡೆಯಲಿದೆ. ಭಾರಿ ದಟ್ಟ ಅರಣ್ಯದಲ್ಲಿ ಸಿನಿಮಾದ ಚಿತ್ರೀಕರಣ ಮಾಡಲು ರಾಜಮೌಳಿ ಇಚ್ಛಿಸಿದ್ದು, ಇದಕ್ಕಾಗಿ ಮಹೇಶ್ ಬಾಬು ಸೇರಿದಂತೆ ಇತರ ನಟರನ್ನೂ ತರಬೇತುಗೊಳಿಸಲಿದ್ದಾರೆ.

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್