AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾಖಲೆ ಮೊತ್ತಕ್ಕೆ ಮಹೇಶ್ ಬಾಬು ಸಿನಿಮಾದ ಒಟಿಟಿ ಹಕ್ಕು ಮಾರಾಟ; ಟಾಲಿವುಡ್​ ಇತಿಹಾಸದಲ್ಲಿ ಇದೇ ಮೊದಲು

ಮಹೇಶ್ ಬಾಬು ಅವರ ನಟನೆಯ ‘ಸರ್ಕಾರು ವಾರಿ ಪಾಟ’ ಸಿನಿಮಾ 2022ರಲ್ಲಿ ತೆರೆಗೆ ಬಂತು. ಈ ಚಿತ್ರ ಸೂಪರ್ ಹಿಟ್ ಆಯಿತು. ಇದಾದ ಬಳಿಕ ಅವರು ‘SSMB28’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಆದರು.

ದಾಖಲೆ ಮೊತ್ತಕ್ಕೆ ಮಹೇಶ್ ಬಾಬು ಸಿನಿಮಾದ ಒಟಿಟಿ ಹಕ್ಕು ಮಾರಾಟ; ಟಾಲಿವುಡ್​ ಇತಿಹಾಸದಲ್ಲಿ ಇದೇ ಮೊದಲು
ಮಹೇಶ್ ಬಾಬು-ತ್ರಿವಿಕ್ರಂ ಶ್ರೀನಿವಾಸ್
ರಾಜೇಶ್ ದುಗ್ಗುಮನೆ
|

Updated on:Feb 02, 2023 | 10:54 AM

Share

ಮಹೇಶ್ ಬಾಬು (Mahesh Babu) ಹಾಗೂ ತ್ರಿವಿಕ್ರಂ ಶ್ರೀನಿವಾಸ್ ಅವರು ‘SSMB28’ ಚಿತ್ರದ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಹಿಟ್ ಕಾಂಬಿನೇಷನ್ ಎನಿಸಿಕೊಂಡಿರುವ ಈ ಜೋಡಿ ಮೂರನೇ ಬಾರಿಗೆ ಮತ್ತೆ ಒಂದಾಗಿದೆ. ಈ ಸಿನಿಮಾದ ಒಟಿಟಿ ಹಕ್ಕು ಮಾರಾಟ ಆದ ಬಗ್ಗೆ ನೆಟ್​ಫ್ಲಿಕ್ಸ್ ಇಂಡಿಯಾ ಈ ಮೊದಲು ಘೋಷಣೆ ಮಾಡಿತ್ತು. ಈಗ ಈ ಸಿನಿಮಾ ದೊಡ್ಡ ಮೊತ್ತಕ್ಕೆ ಮಾರಾಟ ಆಗಿದೆ ಎನ್ನುವ ವಿಚಾರ ರಿವೀಲ್ ಆಗಿದೆ. ಚಿತ್ರ ಒಂದರ ಒಟಿಟಿ ಹಕ್ಕು ಇಷ್ಟು ದೊಡ್ಡ ಮೊತ್ತಕ್ಕೆ ಮಾರಾಟ ಆಗಿರುವುದು ಟಾಲಿವುಡ್​ನಲ್ಲಿ ಇದೇ ಮೊದಲು ಎನ್ನಲಾಗಿದೆ.

ಮಹೇಶ್ ಬಾಬು ಅವರ ನಟನೆಯ ‘ಸರ್ಕಾರು ವಾರಿ ಪಾಟ’ ಸಿನಿಮಾ 2022ರಲ್ಲಿ ತೆರೆಗೆ ಬಂತು. ಈ ಚಿತ್ರ ಸೂಪರ್ ಹಿಟ್ ಆಯಿತು. ಇದಾದ ಬಳಿಕ ಅವರು ‘SSMB28’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಆದರು. ಆದರೆ, ಮಹೇಶ್ ಬಾಬು ಕುಟುಂಬದಲ್ಲಿ ಸಾಕಷ್ಟು ದುರ್ಘಟನೆಗಳು ನಡೆದವು. ಅಪ್ಪ-ಅಮ್ಮನನ್ನು ಕೆಲವೇ ತಿಂಗಳ ಅಂತರದಲ್ಲಿ ಮಹೇಶ್ ಬಾಬು ಕಳೆದುಕೊಂಡರು. ಈ ಕಾರಣಕ್ಕೆ ಸಿನಿಮಾ ಕೆಲಸಗಳು ವಿಳಂಬ ಆದವು. ಈಗ ಹೈದರಾಬಾದ್​ನಲ್ಲಿ ಸಿನಿಮಾ ಶೂಟಿಂಗ್ ಭರದಿಂದ ನಡೆಯುತ್ತಿದೆ.

ಇದನ್ನೂ ಓದಿ
Image
Sitara: ಮಹೇಶ್​ ಬಾಬು ತಾಯಿ ಅಂತ್ಯಕ್ರಿಯೆ ವೇಳೆ ಬಿಕ್ಕಿಬಿಕ್ಕಿ ಅತ್ತ ‘ಪ್ರಿನ್ಸ್​’ ಮಗಳು ಸಿತಾರಾ
Image
Indira Devi Passes Away: ಮಹೇಶ್​ ಬಾಬು ತಾಯಿ ಇಂದಿರಾ ದೇವಿ ನಿಧನ; ‘ಪ್ರಿನ್ಸ್​’ ಕುಟುಂಬದಲ್ಲಿ ಶೋಕ
Image
‘ನನ್ನ ಸಿನಿಮಾದಲ್ಲಿ ಅಂಥ ನಟರು ಇರೋದೇ ಬೇಡ’: ರಾಜಮೌಳಿಗೆ ಕಂಡೀಷನ್​ ಹಾಕಿದ ಮಹೇಶ್​ ಬಾಬು?
Image
Mahesh Babu: ಪತ್ನಿ ನಮ್ರತಾ ಜತೆ ಬಿಲ್​ ಗೇಟ್ಸ್​ ಭೇಟಿ ಮಾಡಿದ ಮಹೇಶ್​ ಬಾಬು; ಫೋಟೋ ವೈರಲ್​

ಮೂಲಗಳ ಪ್ರಕಾರ ‘SSMB28’ ಚಿತ್ರದ ಡಿಜಿಟಲ್ ಹಕ್ಕನ್ನು ಪಡೆಯಲು ನೆಟ್​ಫ್ಲಿಕ್ಸ್​ 81 ಕೋಟಿ ರೂಪಾಯಿ ನೀಡಿದೆ ಎನ್ನಲಾಗಿದೆ. ತೆಲುಗು, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ‘SSMB28’ ಪ್ರಸಾರ ಕಾಣಲಿದೆ. ಹಾಗಂತ ಈ ಚಿತ್ರ ನೇರವಾಗಿ ಒಟಿಟಿಯಲ್ಲಿ ರಿಲೀಸ್ ಆಗುತ್ತಿಲ್ಲ. ಥಿಯೇಟರ್​ನಲ್ಲಿ ರಿಲೀಸ್ ಆದ 50 ದಿನಗಳ ಬಳಿಕ ಸಿನಿಮಾ ಒಟಿಟಿಗೆ ಕಾಲಿಡಲಿದೆ.

ಇದನ್ನೂ ಓದಿ: Mahesh Babu: ‘ವಿಜಯ್​ ಅವರನ್ನು ನೋಡಿ ಮಹೇಶ್​ ಬಾಬು ಕಲಿಯಬೇಕು’; ನೇರವಾಗಿ ಕಿವಿಮಾತು ಹೇಳಿದ ‘ಪ್ರಿನ್ಸ್’ ಫ್ಯಾನ್ಸ್​

ಸಾಮಾನ್ಯವಾಗಿ ಸಿನಿಮಾ ನೇರವಾಗಿ ಒಟಿಟಿಗೆ ರಿಲೀಸ್ ಆಗುತ್ತದೆ ಎಂದರೆ ಹೆಚ್ಚಿನ ಮೊತ್ತ ನೀಡಲಾಗುತ್ತದೆ. ಚಿತ್ರಮಂದಿರದಲ್ಲಿ ರಿಲೀಸ್ ಆದ ಬಳಿಕ ಸಿನಿಮಾ ಒಟಿಟಿ ಹಾದಿ ಹಿಡಿದರೆ ಅದಕ್ಕೆ ಕಡಿಮೆ ಬಿಡ್ ಮಾಡಲಾಗುತ್ತದೆ. ಆದಾಗ್ಯೂ ‘SSMB28’ ಚಿತ್ರಕ್ಕೆ ಇಷ್ಟು ದೊಡ್ಡ ಮೊತ್ತ ನೀಡಿರೋದು ಅನೇಕರಿಗೆ ಅಚ್ಚರಿ ಮೂಡಿಸಿದೆ. ತೆಲುಗು ಚಿತ್ರ ಒಂದು ಒಟಿಟಿಗೆ ಇಷ್ಟು ದೊಡ್ಡ ಮೊತ್ತಕ್ಕೆ ಮಾರಾಟ ಆಗಿರೋದು ಇದೇ ಮೊದಲು ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:52 am, Thu, 2 February 23

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ