Mahesh Babu: ‘ವಿಜಯ್​ ಅವರನ್ನು ನೋಡಿ ಮಹೇಶ್​ ಬಾಬು ಕಲಿಯಬೇಕು’; ನೇರವಾಗಿ ಕಿವಿಮಾತು ಹೇಳಿದ ‘ಪ್ರಿನ್ಸ್’ ಫ್ಯಾನ್ಸ್​

Tollywood News | Mahesh Babu New Movie: ‘ಸರ್ಕಾರು ವಾರಿ ಪಾಟ’ ಚಿತ್ರ ಕಳೆದ ವರ್ಷ ಮೇ ತಿಂಗಳಲ್ಲಿ ಬಿಡುಗಡೆ ಆಯಿತು. ಅಂದಿನಿಂದ ಇಂದಿನ ತನಕ ಮಹೇಶ್​ ಬಾಬು ಅವರು ಹೊಸ ಚಿತ್ರದ ಶೂಟಿಂಗ್​ ಆರಂಭಿಸಿಲ್ಲ.

Mahesh Babu: ‘ವಿಜಯ್​ ಅವರನ್ನು ನೋಡಿ ಮಹೇಶ್​ ಬಾಬು ಕಲಿಯಬೇಕು’; ನೇರವಾಗಿ ಕಿವಿಮಾತು ಹೇಳಿದ ‘ಪ್ರಿನ್ಸ್’ ಫ್ಯಾನ್ಸ್​
ಮಹೇಶ್ ಬಾಬು, ದಳಪತಿ ವಿಜಯ್
Follow us
TV9 Web
| Updated By: ಮದನ್​ ಕುಮಾರ್​

Updated on:Jan 03, 2023 | 3:15 PM

ನಟ ಮಹೇಶ್​ ಬಾಬು (Mahesh Babu) ಅವರಿಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ಟಾಲಿವುಡ್​ನಲ್ಲಿ (Tollywood) ಅನೇಕ ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿದ ಅವರು ತಮ್ಮದೇ ಆದ ಶೈಲಿಯಲ್ಲಿ ಕೆಲಸ ಮಾಡುತ್ತಾರೆ. ಫ್ಯಾಮಿಲಿಗೆ ಹೆಚ್ಚು ಸಮಯ ನೀಡುತ್ತಾರೆ. ಒಂದು ಚಿತ್ರದಿಂದ ಮತ್ತೊಂದು ಚಿತ್ರಕ್ಕೆ ಹೆಚ್ಚು ಗ್ಯಾಪ್​ ನೀಡುತ್ತಿದ್ದಾರೆ. ಆದರೆ ಇದು ಅವರ ಅಭಿಮಾನಿಗಳಿಗೆ ಇಷ್ಟವಾಗುತ್ತಿಲ್ಲ. ಮಹೇಶ್​ ಬಾಬು ಅವರು ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ಬ್ಯುಸಿ ಆಗಬೇಕು ಮತ್ತು ಜಾಸ್ತಿ ಗ್ಯಾಪ್​ ಕೊಡಬಾರದು ಎಂಬುದು ಅಭಿಮಾನಿಗಳ ಬಯಕೆ. ಅದನ್ನು ಫ್ಯಾನ್ಸ್​ ನೇರವಾಗಿ ಹೇಳಿದ್ದಾರೆ. ಅಷ್ಟೇ ಅಲ್ಲದೇ, ‘ತಮಿಳು ನಟ ದಳಪತಿ ವಿಜಯ್​ (Thalapathy Vijay) ಅವರನ್ನು ನೋಡಿ ಮಹೇಶ್​ ಬಾಬು ಕಲಿಯಬೇಕು’ ಎಂದು ಕೆಲವರು ಕಮೆಂಟ್​ ಮಾಡಿದ್ದಾರೆ. ಇದು ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿದೆ.

ದಳಪತಿ ವಿಜಯ್​ ಅವರು ‘ವಾರಿಸು’ ಸಿನಿಮಾದ ಬಿಡುಗಡೆಗಾಗಿ ಕಾದಿದ್ದಾರೆ. ಈ ಚಿತ್ರ ಜನವರಿ 12ರಂದು ರಿಲೀಸ್​ ಆಗಲಿದೆ. ಆ ಚಿತ್ರದ ಪ್ರಮೋಷನ್​ ಕೆಲಸಗಳು ನಡೆಯುತ್ತಿರುವಾಗಲೇ ವಿಜಯ್​ ಅವರು ತಮ್ಮ ಹೊಸ ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ. ಖ್ಯಾತ ನಿರ್ದೇಶಕ ಲೋಕೇಶ್​ ಕನಗರಾಜ್​ ಜೊತೆ ಅವರು ಹೊಸ ಸಿನಿಮಾ ಮಾಡುತ್ತಿದ್ದಾರೆ. ಸೋಮವಾರ (ಜ.2) ಆ ಚಿತ್ರ ಸೆಟ್ಟೇರಿದೆ.

ಮಹೇಶ್​ ಬಾಬು ಕೂಡ ಇಷ್ಟೇ ವೇಗವಾಗಿ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳಬೇಕು ಎಂಬುದು ಅಭಿಮಾನಿಗಳ ಬಯಕೆ. ಅವರು ನಟಿಸಿದ ‘ಸರ್ಕಾರು ವಾರಿ ಪಾಟ’ ಚಿತ್ರ ಕಳೆದ ವರ್ಷ ಮೇ ತಿಂಗಳಲ್ಲಿ ಬಿಡುಗಡೆ ಆಯಿತು. ಅಂದಿನಿಂದ ಇಂದಿನ ತನಕ ಅವರು ಹೊಸ ಚಿತ್ರದ ಶೂಟಿಂಗ್​ ಆರಂಭಿಸಿಲ್ಲ. ಇದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ಇದನ್ನೂ ಓದಿ
Image
Sitara: ಮಹೇಶ್​ ಬಾಬು ತಾಯಿ ಅಂತ್ಯಕ್ರಿಯೆ ವೇಳೆ ಬಿಕ್ಕಿಬಿಕ್ಕಿ ಅತ್ತ ‘ಪ್ರಿನ್ಸ್​’ ಮಗಳು ಸಿತಾರಾ
Image
Indira Devi Passes Away: ಮಹೇಶ್​ ಬಾಬು ತಾಯಿ ಇಂದಿರಾ ದೇವಿ ನಿಧನ; ‘ಪ್ರಿನ್ಸ್​’ ಕುಟುಂಬದಲ್ಲಿ ಶೋಕ
Image
‘ನನ್ನ ಸಿನಿಮಾದಲ್ಲಿ ಅಂಥ ನಟರು ಇರೋದೇ ಬೇಡ’: ರಾಜಮೌಳಿಗೆ ಕಂಡೀಷನ್​ ಹಾಕಿದ ಮಹೇಶ್​ ಬಾಬು?
Image
Mahesh Babu: ಪತ್ನಿ ನಮ್ರತಾ ಜತೆ ಬಿಲ್​ ಗೇಟ್ಸ್​ ಭೇಟಿ ಮಾಡಿದ ಮಹೇಶ್​ ಬಾಬು; ಫೋಟೋ ವೈರಲ್​

ಇದನ್ನೂ ಓದಿ: ‘SSMB 28’ ಟೀಮ್​ ಜೊತೆ ಭೋಜನ ಸವಿದ ಮಹೇಶ್​ ಬಾಬು; ಫೋಟೋ ವೈರಲ್​

ಪ್ರತಿ ಸಿನಿಮಾ ಬಿಡುಗಡೆ ಆದ ನಂತರ ಮಹೇಶ್​ ಬಾಬು ಅವರು ತಮ್ಮ ಕುಟುಂಬದ ಸದಸ್ಯರ ಜೊತೆಗೂಡಿ ವಿದೇಶ ಪ್ರವಾಸಕ್ಕೆ ತೆರಳುತ್ತಾರೆ. ಅಲ್ಲಿ ಸಾಕಷ್ಟು ದಿನಗಳನ್ನು ಕಳೆಯುತ್ತಾರೆ. ಅದರ ಬದಲು ಬೇಗ ಪ್ರವಾಸ ಮುಗಿಸಿ, ಸಿನಿಮಾಗಳಿಗೆ ಮರಳಬೇಕು ಎಂದು ಫ್ಯಾನ್ಸ್​ ಸಲಹೆ ನೀಡುತ್ತಿದ್ದಾರೆ.

ಇದನ್ನೂ ಓದಿ: Super Star Krishna: ಮಹೇಶ್​ ಬಾಬು ತಂದೆ ಸೂಪರ್​ ಸ್ಟಾರ್​ ಕೃಷ್ಣ ಬದುಕಿನ 10 ಇಂಟರೆಸ್ಟಿಂಗ್​ ಸಂಗತಿಗಳು

ಇನ್ನು, 2022ರಲ್ಲಿ ಮಹೇಶ್​ ಬಾಬು ಅವರು ಕೊಂಚ ಸ್ಲೋ ಆಗಲು ಬೇರೆ ಕಾರಣಗಳು ಕೂಡ ಇವೆ. ಅವರ ತಂದೆ-ತಾಯಿ ಮತ್ತು ಸಹೋದರ 2022ರಲ್ಲಿ ನಿಧನರಾದರು. ಇದರಿಂದ ಅವರು ಎಮೋಷನಲ್​ ಆಗಿ ಸಾಕಷ್ಟು ಕುಗ್ಗಿದರು. ಅದರ ನಡುವೆಯೂ ಅವರು ಸಿನಿಮಾ ಕೆಲಸಗಳಿಗೆ ಮರಳಲು ಪ್ರಯತ್ನಿಸುತ್ತಿದ್ದಾರೆ. ಅವರ ಹೊಸ ಚಿತ್ರಕ್ಕೆ ಖ್ಯಾತ ನಿರ್ದೇಶಕ ತ್ರಿವಿಕ್ರಮ್​ ಶ್ರೀನಿವಾಸ್​ ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 3:15 pm, Tue, 3 January 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ