Super Star Krishna: ಮಹೇಶ್​ ಬಾಬು ತಂದೆ ಸೂಪರ್​ ಸ್ಟಾರ್​ ಕೃಷ್ಣ ಬದುಕಿನ 10 ಇಂಟರೆಸ್ಟಿಂಗ್​ ಸಂಗತಿಗಳು

Krishna Ghattamaneni: ವೃತ್ತಿಬದುಕಿನಲ್ಲಿ ಸೂಪರ್​ ಸ್ಟಾರ್​ ಕೃಷ್ಣ ಅವರು ಸಾಗಿಬಂದ ಹಾದಿ ಅನೇಕರಿಗೆ ಸ್ಫೂರ್ತಿ ನೀಡುವಂಥದ್ದು. ಅವರ ಕುರಿತು ಹತ್ತು ಇಂಟರೆಸ್ಟಿಂಗ್​ ವಿಚಾರಗಳು ಇಲ್ಲಿವೆ..

Super Star Krishna: ಮಹೇಶ್​ ಬಾಬು ತಂದೆ ಸೂಪರ್​ ಸ್ಟಾರ್​ ಕೃಷ್ಣ ಬದುಕಿನ 10 ಇಂಟರೆಸ್ಟಿಂಗ್​ ಸಂಗತಿಗಳು
ಸೂಪರ್ ಸ್ಟಾರ್ ಕೃಷ್ಣ
Follow us
| Updated By: ಮದನ್​ ಕುಮಾರ್​

Updated on:Nov 15, 2022 | 9:50 AM

ನಟ ಮಹೇಶ್​ ಬಾಬು (Mahesh Babu) ಮನೆಯಲ್ಲಿ ಶೋಕದ ವಾತಾವರಣ ನಿರ್ಮಾಣ ಆಗಿದೆ. ‘ಪ್ರಿನ್ಸ್​’ ತಂದೆ ಸೂಪರ್​ ಸ್ಟಾರ್​ ಕೃಷ್ಣ ಘಟ್ಟಮನೇನಿ (Super Star Krishna) ಅವರು ಕೊನೆಯುಸಿರು ಎಳೆದಿದ್ದಾರೆ. ಹೃದಯಾಘಾತಕ್ಕೆ ಒಳಗಾಗಿದ್ದ ಅವರನ್ನು ಹೈದರಾಬಾದ್​ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೇ ಮಂಗಳವಾರ (ನ.15) ನಸುಕಿನ 4 ಗಂಟೆ ಸುಮಾರಿಗೆ ವಿಧಿವಶರಾಗಿದ್ದಾರೆ. ಕೃಷ್ಣ ಘಟ್ಟಮನೇನಿ (Krishna Ghattamaneni) ನಿಧನಕ್ಕೆ ತೆಲುಗು ಚಿತ್ರರಂಗ ಕಂಬನಿ ಮಿಡಿದಿದೆ. ಟಾಲಿವುಡ್​ನಲ್ಲಿ ಸೂಪರ್​ ಸ್ಟಾರ್​ ಕೃಷ್ಣ ಅವರು ಅಪಾರ ಜನಪ್ರಿಯತೆ ಹೊಂದಿದ್ದರು. ವೃತ್ತಿಬದುಕಿನಲ್ಲಿ ಅವರು ಸಾಗಿಬಂದ ಹಾದಿ ಅನೇಕರಿಗೆ ಸ್ಫೂರ್ತಿ ನೀಡುವಂಥದ್ದು. ಆ ಕುರಿತು ಇಲ್ಲಿವೆ ಇಂಟರೆಸ್ಟಿಂಗ್​ ವಿಚಾರಗಳು..

  1. ಟಾಲಿವುಡ್​ ನಟ​ ಕೃಷ್ಣ ಜನಿಸಿದ್ದು 1942ರಲ್ಲಿ. ತಮ್ಮ 20ನೇ ವಯಸ್ಸಿನಲ್ಲಿ ಅವರು ನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ಆರಂಭದಲ್ಲಿ ಚಿಕ್ಕ-ಪುಟ್ಟ ಪಾತ್ರಗಳನ್ನು ನಿರ್ವಹಿಸಿದರು.
  2. 1965ರಲ್ಲಿ ಕೃಷ್ಣ ಅವರು ಹೀರೋ ಆಗಿ ಬಡ್ತಿ ಪಡೆದರು. ಆಗ ಅವರಿಗೆ 23 ವರ್ಷ ವಯಸ್ಸು. ನಂತರ ಅಪಾರ ಜನಮನ್ನಣೆ ಗಳಿಸಿದರು. ತೆಲುಗು ಚಿತ್ರರಂಗದಲ್ಲಿ ‘ಸೂಪರ್​ ಸ್ಟಾರ್​’ ಆಗಿ ಮೆರೆದರು.
  3. ಪೌರಾಣಿಕ, ಐತಿಹಾಸಿಕ ಸೇರಿದಂತೆ ಹಲವು ಬಗೆಯ ಪಾತ್ರಗಳಿಗೆ ಜೀವ ತುಂಬುವ ಮೂಲಕ ಕೃಷ್ಣ ಅವರು ಅಭಿಮಾನಿಗಳ ಮನ ಗೆದ್ದರು. ಕೃಷ್ಣ ಅವರ ಅಂದಾಜು 25 ಸಿನಿಮಾಗಳಲ್ಲಿ ಮಹೇಶ್​ ಬಾಬು ಬಾಲ ನಟನಾಗಿ ಅಭಿನಯಿಸಿದ್ದರು.
  4. ಐದು ದಶಕಗಳ ವೃತ್ತಿ ಜೀವನದಲ್ಲಿ ಕೃಷ್ಣ ಅವರು 350ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿದರು. ಅವರಿಗೆ 2500ಕ್ಕೂ ಹೆಚ್ಚು ಅಭಿಮಾನಿ ಸಂಘಗಳು ಇದ್ದವು. ಇದು ಅವರ ಅಪಾರ ಜನಪ್ರಿಯತೆಗೆ ಸಾಕ್ಷಿ.
  5. ಇದನ್ನೂ ಓದಿ
    Image
    Krishna Ghattamaneni: ಸೂಪರ್​ ಸ್ಟಾರ್​ ಕೃಷ್ಣ ಇನ್ನಿಲ್ಲ; ಒಂದೂವರೆ ತಿಂಗಳಲ್ಲಿ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ಮಹೇಶ್​ ಬಾಬು
    Image
    Super Star Krishna Death: ಮಹೇಶ್​ ಬಾಬು ತಂದೆ ಸೂಪರ್​ ಸ್ಟಾರ್​ ಕೃಷ್ಣ ನಿಧನ
    Image
    Sitara: ಮಹೇಶ್​ ಬಾಬು ತಾಯಿ ಅಂತ್ಯಕ್ರಿಯೆ ವೇಳೆ ಬಿಕ್ಕಿಬಿಕ್ಕಿ ಅತ್ತ ‘ಪ್ರಿನ್ಸ್​’ ಮಗಳು ಸಿತಾರಾ
    Image
    Indira Devi Passes Away: ಮಹೇಶ್​ ಬಾಬು ತಾಯಿ ಇಂದಿರಾ ದೇವಿ ನಿಧನ; ‘ಪ್ರಿನ್ಸ್​’ ಕುಟುಂಬದಲ್ಲಿ ಶೋಕ
  6. ನಟನಾಗಿ ಮಾತ್ರವಲ್ಲದೇ ನಿರ್ದೇಶಕ ಮತ್ತು ನಿರ್ಮಾಪಕನಾಗಿಯೂ ಕೃಷ್ಣ ಗುರುತಿಸಿಕೊಂಡಿದ್ದರು. 16 ಚಿತ್ರಗಳಿಗೆ ಅವರು ನಿರ್ದೇಶನ ಮಾಡಿದ್ದರು. ತಮ್ಮ ‘ಪದ್ಮಾಲಯ ಸ್ಟುಡಿಯೋಸ್​’ ಮೂಲಕ ಅನೇಕ ಚಿತ್ರಗಳನ್ನು ನಿರ್ಮಿಸಿದ್ದರು.
  7. ಸಿನಿಮಾ ಮಾತ್ರವಲ್ಲದೇ ರಾಜಕೀಯದಲ್ಲಿಯೂ ಕೃಷ್ಣ ಅವರಿಗೆ ಆಸಕ್ತಿ ಇತ್ತು. 1989ರಲ್ಲಿ ಕಾಂಗ್ರೆಸ್​ ಪಕ್ಷದಿಂದ ಸಂಸದನಾಗಿ ಆಯ್ಕೆ ಆಗಿದ್ದರು. 2012ರಲ್ಲಿ ಅವರು ರಾಜಕೀಯದಿಂದ ಹೊರಬಂದರು.
  8. ತೆಲುಗು ಚಿತ್ರರಂಗಕ್ಕೆ ಡಿಟಿಎಸ್​, ಸಿನಿಮಾ ಸ್ಕೋಪ್​ ಮುಂತಾದ ಮೊದಲುಗಳನ್ನು ಪರಿಚಯಿಸಿದ ಕೀರ್ತಿ ಕೃಷ್ಣ ಅವರಿಗೆ ಸಲ್ಲುತ್ತದೆ. ಈ ಕಾರಣದಿಂದಾಗಿ ಅವರು ಟಾಲಿವುಡ್​ನಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದ್ದರು.
  9. ಬಾಂಡ್​ ರೀತಿಯ ಗೂಡಾಚಾರಿ ಸಿನಿಮಾಗಳಲ್ಲಿ ನಟಿಸುವ ಮೂಲಕ ಕೃಷ್ಣ ಅವರು ಸಖತ್​ ಜನಪ್ರಿಯತೆ ಗಳಿಸಿದ್ದರು. ಅಭಿಮಾನಿಗಳು ಪ್ರೀತಿಯಿಂದ ‘ಬಾಂಡ್​ ಕೃಷ್ಣ’ ಎಂದು ಅವರನ್ನು ಕರೆಯುತ್ತಿದರು.
  10. ಚಿತ್ರರಂಗದಲ್ಲಿ ಕೃಷ್ಣ ಅವರ ಸಾಧನೆಯನ್ನು ಗುರುತಿಸಿ ಹಲವು ಪ್ರಶಸ್ತಿ-ಪುರಸ್ಕಾರಗಳು ಸಂದಿವೆ. ಪದ್ಮ ಭೂಷಣ (2009), ನಂದಿ ಪ್ರಶಸ್ತಿ (1974), ಫಿಲ್ಮ್​ ಫೇರ್ ಜೀವಮಾನ ಸಾಧನೆ ಪ್ರಶಸ್ತಿ (1997) ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ.​
  11. ಕೃಷ್ಣ ಅವರಿಗೆ ಇಬ್ಬರು ಹೆಂಡತಿಯರು. ಮೊದಲ ಪತ್ನಿ ಇಂದಿರಾ ದೇವಿ ಹಾಗೂ ಎರಡನೇ ಪತ್ನಿ ವಿಜಯಾ ನಿರ್ಮಲಾ. ಕೃಷ್ಣ ಅವರ ಐವರು ಮಕ್ಕಳಲ್ಲಿ ಮಹೇಶ್​ ಬಾಬು ಅವರು ಹೆಚ್ಚು ಖ್ಯಾತಿ ಪಡೆದಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:49 am, Tue, 15 November 22

ಕಗ್ಗತ್ತಲ ರಾತ್ರಿ, ನಡು ರಸ್ತೆಯಲ್ಲಿ ಹುಲಿರಾಯನ ಓಡಾಟ; ವಿಡಿಯೋ ಸೆರೆ
ಕಗ್ಗತ್ತಲ ರಾತ್ರಿ, ನಡು ರಸ್ತೆಯಲ್ಲಿ ಹುಲಿರಾಯನ ಓಡಾಟ; ವಿಡಿಯೋ ಸೆರೆ
ಬಿಜೆಪಿ ಕಾರ್ಯಾಲಯದಲ್ಲಿ ರಂಗೋಲಿಯಲ್ಲಿ ಅರಳಿದ ಪ್ರಧಾನಿ ಮೋದಿ ಭಾವಚಿತ್ರ
ಬಿಜೆಪಿ ಕಾರ್ಯಾಲಯದಲ್ಲಿ ರಂಗೋಲಿಯಲ್ಲಿ ಅರಳಿದ ಪ್ರಧಾನಿ ಮೋದಿ ಭಾವಚಿತ್ರ
ರಿಲಯನ್ಸ್ ಜಿಯೋ 4G ಫೀಚರ್ ಫೋನ್​ ದೇಶದ ಮಾರುಕಟ್ಟೆಗೆ ಬಿಡುಗಡೆ
ರಿಲಯನ್ಸ್ ಜಿಯೋ 4G ಫೀಚರ್ ಫೋನ್​ ದೇಶದ ಮಾರುಕಟ್ಟೆಗೆ ಬಿಡುಗಡೆ
ಧರ್ಮಸ್ಥಳ ಸಂಘದ ಬಗ್ಗೆ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಆಘಾತಕಾರಿ ಹೇಳಿಕೆ
ಧರ್ಮಸ್ಥಳ ಸಂಘದ ಬಗ್ಗೆ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಆಘಾತಕಾರಿ ಹೇಳಿಕೆ
ನಾವು ಸೇಡು ತೀರಿಸಿಕೊಂಡರೆ ಬಿಜೆಪಿಗೆ ಜೈಲುಗಳು ಸಾಕಾಗಲ್ಲ: ಹೆಬ್ಬಾಳ್ಕರ್
ನಾವು ಸೇಡು ತೀರಿಸಿಕೊಂಡರೆ ಬಿಜೆಪಿಗೆ ಜೈಲುಗಳು ಸಾಕಾಗಲ್ಲ: ಹೆಬ್ಬಾಳ್ಕರ್
‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ