NFSU: ಫಾರೆನ್ಸಿಕ್ ಯೂನಿವರ್ಸಿಟಿಗಾಗಿ ಪ್ರಲ್ಹಾದ್ ಜೋಶಿ ನನ್ನ ಗಂಟು ಬಿದ್ದಿದ್ದರು – ಜೋಶಿ ಕಾರ್ಯವೈಖರಿ ಶ್ಲಾಘಿಸಿದ ಅಮಿತ್ ಶಾ, ಸಿಎಂ ಬೊಮ್ಮಾಯಿ

ಫಾರೆನ್ಸಿಕ್ ಯೂನಿವರ್ಸಿಟಿ ದಕ್ಷಿಣ ಭಾರತದಲ್ಲಿ ಕರ್ನಾಟಕದ ಧಾರವಾಡಕ್ಕೆ ಬಂದಿರೋದು ಈ ಭಾಗದ ಯುವಕರಿಗೆ ಸಾಕಷ್ಟು ಅವಕಾಶವನ್ನ ಕಲ್ಪಿಸಲಿದೆ ಎಂದು ಇದೇ ವೇಳೆ ಗೃಹ ಸಚಿವ ಅಮಿತ್ ಶಾ ಅಭಿಪ್ರಾಯ ವ್ಯವಕ್ತಪಡಿಸಿದರು.

NFSU: ಫಾರೆನ್ಸಿಕ್ ಯೂನಿವರ್ಸಿಟಿಗಾಗಿ ಪ್ರಲ್ಹಾದ್ ಜೋಶಿ ನನ್ನ ಗಂಟು ಬಿದ್ದಿದ್ದರು - ಜೋಶಿ ಕಾರ್ಯವೈಖರಿ ಶ್ಲಾಘಿಸಿದ ಅಮಿತ್ ಶಾ, ಸಿಎಂ ಬೊಮ್ಮಾಯಿ
ಫಾರೆನ್ಸಿಕ್ ಯೂನಿವರ್ಸಿಟಿಗಾಗಿ ಪ್ರಲ್ಹಾದ್ ಜೋಶಿ ನನ್ನ ಗಂಟು ಬಿದ್ದಿದ್ದರು - ಅಮಿತ್ ಶಾ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jan 28, 2023 | 4:27 PM

ಧಾರವಾಡ: ಧಾರವಾಡದಲ್ಲಿಂದು ನೂತನ ಫಾರೆನ್ಸಿಕ್ ಯೂನಿವರ್ಸಿಟಿ ಸ್ಥಾಪನೆಗಾಗಿ ಭೂಮಿ ಪೂಜೆ ನೆರವೇರಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ತಮ್ಮ ಸಹೋದ್ಯೋಗಿ ಸಚಿವ ಪ್ರಲ್ಹಾದ್ ಜೋಶಿ ಅವರ ಕಾರ್ಯವೈಖರಿಯನ್ನ ಮುಕ್ತ ಕಂಠದಿಂದ ಶ್ಲಾಘಿಸಿದರು. ಧಾರವಾಡದಲ್ಲೇ ಗುಜರಾತ್ ಮಾದರಿಯ ಫಾರೆನ್ಸಿಕ್ ಯೂನಿವರ್ಸಿಟಿ ಕೊಡಬೇಕು ಎಂದು ಪ್ರಲ್ಹಾದ್ ಜೋಶಿಯವರು ನನ್ನ ಹಿಂದೆ ಬಿದ್ದುಬಿಟ್ಟಿದ್ದರು. ಸೂಕ್ತ ಜಾಗವಿಲ್ಲದೇ ಹೇಗೆ ಇದನ್ನ ಮಂಜೂರು ಮಾಡಲು ಸಾಧ್ಯ ಪ್ರಲ್ಹಾದ ಜೋಶಿಯವರೇ (Pralhad Joshi)? ಅಂತ ನಾನು ಪ್ರಶ್ನಿಸಿದ್ದೆ. ಆದರೆ ಪ್ರಲ್ಹಾದ್ ಜೋಶಿಯವರು ನಾನು ಜಾಗ ಕೇಳಿದ ಒಂದೇ ದಿನದಲ್ಲಿ 57 ಎಕರೆ ಜಾಗವನ್ನ ಗುರುತಿಸಿ ಕೊಟ್ಟರು. ಆಗ ಯೂನಿವರ್ಸಿಟಿ ಕೊಡದಿರಲು ನನ್ನ ಬಳಿ ಬೇರೆ ಯಾವುದೇ ಕಾರಣ ಉಳಿದಿರಲಿಲ್ಲ.‌ ಈ ರೀತಿ ಕೇಂದ್ರ ಸಚಿವರಾಗಿ ಪ್ರಲ್ಹಾದ್ ಜೋಶಿ ಅವರು ಕಾರ್ಯ ನಿರ್ವಹಿಸುತ್ತಾರೆ. ನಾನು ಮತ್ತೇನು ಕಾರಣ ಹುಡುಕದೇ ಧಾರವಾಡಕ್ಕೆ (Dharwad) ಫಾರೆನ್ಸಿಕ್ ಯೂನಿವರ್ಸಿಟಿ ಕ್ಯಾಂಪಸ್ (ವಿಧಿ ವಿಜ್ಞಾನ ವಿಶ್ವವಿದ್ಯಾಲಯ ಕ್ಯಾಂಪಸ್ –National Forensic Sciences University -NFSU​) ಮಂಜೂರು ಮಾಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಲ್ಹಾದ್ ಜೋಶಿಯವರ ಕಾರ್ಯಕ್ಷಮತೆಗೆ ಮೆಚ್ಚುಗೆ ಸೂಚಿಸಿದರು.

ಫಾರೆನ್ಸಿಕ್ ಯೂನಿವರ್ಸಿಟಿ ದಕ್ಷಿಣ ಭಾರತದಲ್ಲಿ ಕರ್ನಾಟಕದ ಧಾರವಾಡಕ್ಕೆ ಬಂದಿರೋದು ಈ ಭಾಗದ ಯುವಕರಿಗೆ ಸಾಕಷ್ಟು ಅವಕಾಶವನ್ನ ಕಲ್ಪಿಸಲಿದೆ ಎಂದು ಇದೇ ವೇಳೆ ಗೃಹ ಸಚಿವ ಅಮಿತ್ ಶಾ ಅಭಿಪ್ರಾಯ ವ್ಯಕ್ತಪಡಿಸಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮಾತಿಗೆ ದನಿಗೂಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಕೂಡ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ರಾಜ್ಯದ ಪರ ತೋರುವ ಬದ್ಧತೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ದಕ್ಷಿಣ ಭಾರದಲ್ಲೇ ಮೊದಲ ಫಾರೆನ್ಸಿಕ್ ಯೂನಿವರ್ಸಿಟಿ ಕ್ಯಾಂಪಸ್ ಧಾರವಾಡದಲ್ಲಿ ನಿರ್ಮಾಣವಾಗಲು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರೇ ಕಾರಣ ಎಂದ ಸಿಎಂ ಬಸವರಾಜ್ ಬೊಮ್ಮಾಯಿ, ಕೇಂದ್ರ ಸಚಿವರಾಗಿ ಅಮಿತ್ ಶಾ ಅವರನ್ನ ವಿಶ್ವಾಸಕ್ಕೆ ಪಡೆದು ರಾಜ್ಯದ ಧಾರವಾಡಕ್ಕೆ ಫಾರೆನ್ಸಿಕ್ ಯೂನಿವರ್ಸಿಟಿ ತರುವಲ್ಲಿ ಪ್ರಲ್ಹಾದ್ ಜೋಶಿ ಅವರ ಪ್ರಯತ್ನ ಫಲ ನೀಡಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ವಿದ್ಯಾ ಕಾಶಿ ಎಂದೇ ಕರೆಯಲ್ಪಡುವ ಧಾರವಾಡದಲ್ಲಿ ಮತ್ತೊಂದು ಯೂನಿವರ್ಸಿಟಿ ಆರಂಭ ಆಗುತ್ತಿರುವುದು ಸಂತಸದ ಸಂಗತಿ. ಫಾರೆನ್ಸಿಕ್ ಯೂನಿವರ್ಸಿಟಿ ಕ್ಯಾಂಪಸ್ ನಿಂದ ರಾಜ್ಯಕ್ಕೆ ಹಲವು ರೀತಿಯಲ್ಲಿ ಲಾಭವಾಗಲಿದೆ. ಯೂನಿವರ್ಸಿಟಿಯನ್ನ ಧಾರವಾಡಕ್ಕೆ ಮಂಜೂರು ಮಾಡಿಕೊಟ್ಟ ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪ್ರಲ್ಹಾದ ಜೋಶಿಯವರು ಇದೇ ವೇಳೆ ಧನ್ಯವಾದ ಅರ್ಪಿಸಿದರು.

ರಾಜ್ಯದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:22 pm, Sat, 28 January 23

ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ