‘ಆನಂದ’ದ ಪಯಣ.. ಹೆಲಿಕಾಪ್ಟರ್ ಹತ್ತಿಸಿ ಅಭಿಮಾನಿಗಳ ಆಸೆ ಈಡೇರಿಸಿದ ಸಚಿವ ಆನಂದ್ ಸಿಂಗ್!
ಬಳ್ಳಾರಿ: ಹೆಲಿಕಾಪ್ಟರ್ನಲ್ಲಿ ತನ್ನ ಅಭಿಮಾನಿಗಳನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುವ ಮೂಲಕ ಸಚಿವ ಆನಂದ್ ಸಿಂಗ್ ಅಭಿಮಾನಿಗಳ ಆಸೆ ಈಡೇರಿಸಿದ್ದಾರೆ. ಹಂಪಿ ವಿವಿ ಹೆಲಿಪ್ಯಾಡ್ನಿಂದ ಬೆಂಗಳೂರಿಗೆ ಸಚಿವರ ಆನಂದ್ ಸಿಂಗ್ ತಮ್ಮ ಅಭಿಮಾನಿಗಳ ಜೊತೆ ಕುಳಿತು ಮಾತನಾಡುತ್ತಾ ಆನಂದದಿಂದ ಪ್ರಯಾಣ ಮಾಡಿದ್ದಾರೆ. ‘ಆನಂದ’ದ ಪಯಣ.. ಹೊಸಪೇಟೆಯ ಜೋಗಿ ತಾಯಪ್ಪ ಹಾಗೂ ಅಂಥೋನಿ ದಾಸ್ ಎಂಬ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕ ಆನಂದ್ ಸಿಂಗ್ ಜೊತೆ ಹೆಲಿಕ್ಯಾಪ್ಟರ್ನಲ್ಲಿ ಪ್ರಯಾಣ ಮಾಡಬೇಕು ಎಂಬ ಕನಸು ಕಂಡಿದ್ದರು. ಸದ್ಯ ಈಗ ಇವರ ಕನಸನ್ನು […]

ಬಳ್ಳಾರಿ: ಹೆಲಿಕಾಪ್ಟರ್ನಲ್ಲಿ ತನ್ನ ಅಭಿಮಾನಿಗಳನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುವ ಮೂಲಕ ಸಚಿವ ಆನಂದ್ ಸಿಂಗ್ ಅಭಿಮಾನಿಗಳ ಆಸೆ ಈಡೇರಿಸಿದ್ದಾರೆ. ಹಂಪಿ ವಿವಿ ಹೆಲಿಪ್ಯಾಡ್ನಿಂದ ಬೆಂಗಳೂರಿಗೆ ಸಚಿವರ ಆನಂದ್ ಸಿಂಗ್ ತಮ್ಮ ಅಭಿಮಾನಿಗಳ ಜೊತೆ ಕುಳಿತು ಮಾತನಾಡುತ್ತಾ ಆನಂದದಿಂದ ಪ್ರಯಾಣ ಮಾಡಿದ್ದಾರೆ.
‘ಆನಂದ’ದ ಪಯಣ.. ಹೊಸಪೇಟೆಯ ಜೋಗಿ ತಾಯಪ್ಪ ಹಾಗೂ ಅಂಥೋನಿ ದಾಸ್ ಎಂಬ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕ ಆನಂದ್ ಸಿಂಗ್ ಜೊತೆ ಹೆಲಿಕ್ಯಾಪ್ಟರ್ನಲ್ಲಿ ಪ್ರಯಾಣ ಮಾಡಬೇಕು ಎಂಬ ಕನಸು ಕಂಡಿದ್ದರು. ಸದ್ಯ ಈಗ ಇವರ ಕನಸನ್ನು ಸಚಿವರು ಈಡೇರಿಸಿದ್ದಾರೆ.
ಹೆಲಿಕ್ಯಾಪ್ಟರ್ನಲ್ಲಿ ಬೆಂಗಳೂರಿಗೆ ಪ್ರಯಾಣಿಸಿ ಬಳಿಕ ಮರಳಿ ಬರುವಾಗ ಅಭಿಮಾನಿಗಳನ್ನ ತಮ್ಮದೇ ಕಾರಿನಲ್ಲಿ ಆನಂದ್ ಸಿಂಗ್ ಕರೆದುಕೊಂಡು ಬಂದಿದ್ದಾರೆ. ತಮ್ಮ ನೆಚ್ಚಿನ ನಾಯಕ ತಮ್ಮ ಆಸೆ ಈಡೇರಿಸಿದ್ದಕ್ಕೆ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಜನ ನಾಯಕನನ್ನು ಕೊಂಡಾಡಿದ್ದಾರೆ.