ಹಬ್ಬದ ಖರೀದಿಯ ನಡುವೆ ಪುಡಿರೌಡಿಗಳ ಸುಲಿಗೆ, ಎಲ್ಲಿ?

| Updated By: ಸಾಧು ಶ್ರೀನಾಥ್​

Updated on: Jul 31, 2020 | 10:15 AM

ಬೆಂಗಳೂರು: ನಗರದ ಕೆ.ಆರ್ ಮಾರ್ಕೆಟ್ ಬಂದ್ ಆಗಿರುವ ಹಿನ್ನೆಲೆಯಲ್ಲಿ ಕಿಮ್ಸ್ ಆಸ್ಪತ್ರೆ ಬಳಿಯ ಮೇನ್ ರೋಡ್​ನಲ್ಲಿ ತಾತ್ಕಾಲಿಕವಾಗಿ ಮಾರ್ಕೆಟ್ ತೆರೆಯಲಾಗಿದೆ. ವರಮಹಾಲಕ್ಷ್ಮೀ ಹಬ್ಬಕ್ಕೆ ಹೂವು, ಹಣ್ಣು ಖರೀದಿ ಸಹ ಜೋರಾಗಿ ನಡೆಯಿತು. ಒಂದು ಕೆಜಿ ಕಾಡು ಮಲ್ಲಿಗೆಗೆ 100 ರೂಪಾಯಿ ದರವಾದರೆ, ಒಂದು ಕೆಜಿ ಮಲ್ಲಿಗೆ ಹೂವಿಗೆ 1500 ರೂಪಾಯಿವರೆಗೂ ತಲುಪಿತ್ತು. ಹಬ್ಬದ ಖರೀದಿಯಲ್ಲಿ ಬ್ಯುಸಿಯಾಗಿದ್ದ ಗ್ರಾಹಕರು ದೈಹಿಕ ಅಂತರವನ್ನೇ ಮರೆತುಬಿಟ್ಟರು. ಈ ಮಧ್ಯೆ, ಹೂ, ಹಣ್ಣು ವ್ಯಾಪಾರಿಗಳ ಬಳಿ ಹಣ ವಸೂಲಿ ಸಹ ಜೋರಾಗಿ ನಡೆಯುತ್ತಿತ್ತು. […]

ಹಬ್ಬದ ಖರೀದಿಯ ನಡುವೆ ಪುಡಿರೌಡಿಗಳ ಸುಲಿಗೆ, ಎಲ್ಲಿ?
Follow us on

ಬೆಂಗಳೂರು: ನಗರದ ಕೆ.ಆರ್ ಮಾರ್ಕೆಟ್ ಬಂದ್ ಆಗಿರುವ ಹಿನ್ನೆಲೆಯಲ್ಲಿ ಕಿಮ್ಸ್ ಆಸ್ಪತ್ರೆ ಬಳಿಯ ಮೇನ್ ರೋಡ್​ನಲ್ಲಿ ತಾತ್ಕಾಲಿಕವಾಗಿ ಮಾರ್ಕೆಟ್ ತೆರೆಯಲಾಗಿದೆ. ವರಮಹಾಲಕ್ಷ್ಮೀ ಹಬ್ಬಕ್ಕೆ ಹೂವು, ಹಣ್ಣು ಖರೀದಿ ಸಹ ಜೋರಾಗಿ ನಡೆಯಿತು.

ಒಂದು ಕೆಜಿ ಕಾಡು ಮಲ್ಲಿಗೆಗೆ 100 ರೂಪಾಯಿ ದರವಾದರೆ, ಒಂದು ಕೆಜಿ ಮಲ್ಲಿಗೆ ಹೂವಿಗೆ 1500 ರೂಪಾಯಿವರೆಗೂ ತಲುಪಿತ್ತು. ಹಬ್ಬದ ಖರೀದಿಯಲ್ಲಿ ಬ್ಯುಸಿಯಾಗಿದ್ದ ಗ್ರಾಹಕರು ದೈಹಿಕ ಅಂತರವನ್ನೇ ಮರೆತುಬಿಟ್ಟರು.

ಈ ಮಧ್ಯೆ, ಹೂ, ಹಣ್ಣು ವ್ಯಾಪಾರಿಗಳ ಬಳಿ ಹಣ ವಸೂಲಿ ಸಹ ಜೋರಾಗಿ ನಡೆಯುತ್ತಿತ್ತು. ವರ್ತಕರ ಸುಲಿಗೆಗೆ ಇಳಿದ ಪುಡಿರೌಡಿಗಳು ವ್ಯಾಪಾರಕ್ಕೆ ನಾವೇ ಸ್ಥಳ ನೀಡಿದ್ದು ಎಂದು ಹಣ ವಸೂಲಿ ಮಾಡಿದರು.

ಪ್ರತಿ ವ್ಯಾಪಾರಿಯ ಬಳಿ 100 ರೂಪಾಯಿ ವಸೂಲಿ ಮಾಡಿದರು. ವ್ಯಾಪಾರ ಆಗಿಲ್ಲವೆಂದು ಅಂಗಲಾಚಿದ್ರೂ ಬಿಡದ ಪುಡಿರೌಡಿಗಳು ನಾಳೆ ಇಲ್ಲಿ ವ್ಯಾಪಾರ ಮಾಡಲು ಜಾಗ ಬೇಡ್ವಾ ಎಂದು ಆವಾಜ್ ಹಾಕಿ ವ್ಯಾಪಾರಿಗಳನ್ನ ಬೆದರಿಸಿದರು ಎಂದು ತಿಳಿದುಬಂದಿದೆ.

Published On - 9:42 am, Fri, 31 July 20